Saturday, 20th January 2018

1 week ago

ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್ ಗೆ ಚಾಲನೆ ನೀಡಿದ ಸಿಎಂ

ಮೈಸೂರು: ನಗರದಲ್ಲಿ ಇಂದು ಇಂದಿರಾ ಕಾಂಟೀನ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮೈಸೂರಿನ ಕಾಡಾ ಕಚೇರಿಯ ಆವರಣದಲ್ಲಿ ಇಂದು ಬೆಳಗ್ಗೆ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ್ದಾರೆ. ಈ ಮೂಲಕ ಮೈಸೂರು ನಗರ ವ್ಯಾಪ್ತಿಯಲ್ಲಿ ಒಟ್ಟು 11 ಇಂದಿರಾ ಕ್ಯಾಂಟೀನ್‍ಗಳು ಇಂದಿನಿಂದ ಕಾರ್ಯಾರಂಭ ಆಗಿವೆ. ಜಿಲ್ಲೆಯಲ್ಲಿ ಒಟ್ಟು 17 ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ ನಗರಪ್ರದೇಶ ನಂತರ ತಾಲೂಕು ಕೇಂದ್ರದಲ್ಲಿ ಪ್ರಾರಂಭವಾಗಲಿದೆ ಎಂಬುದಾಗಿ ತಿಳಿದುಬಂದಿದೆ.

1 week ago

ಮೈಸೂರು ಪಾಲಿಕೆ ಸದಸ್ಯನಿಂದ ಸಾಮಾಜಿಕ ಕಾರ್ಯಕರ್ತನ ಮೇಲೆ ಹಲ್ಲೆ!

ಮೈಸೂರು: ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದ ಬಳಿ ಸಾಮಾಜಿಕ ಕಾರ್ಯಕರ್ತರೊಬ್ಬರ ಮೇಲೆ ಮಹಾನಗರ ಪಾಲಿಕೆ ಸದಸ್ಯರೊಬ್ಬರು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ ಮೈಸೂರಿನ ಸುಬ್ಬರಾಯನ ಕೆರೆ ಬಳಿ ಸರ್ಕಾರೇತರ ಸಂಸ್ಥೆಯಿಂದ ‘ನೋ ಜಾಬ್ ನೋ ವೋಟ್’ ಅಭಿಯಾನ ನಡೆಯುತ್ತಿತ್ತು. ಈ ಮೂಲಕ ಸಿಎಂ ಅವರಿಗೆ ಪ್ರತಿಭಟನಾಕಾರರು ವರುಣಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿದ್ದರು....

ಎಲೆಕ್ಷನ್ ಬಂದಾಗ ನಾವು ನೆನಪಾದ್ವಾ – ವಾಟ್ಸಪ್ ಗ್ರೂಪಲ್ಲಿ ಮೈಸೂರು ಶಾಸಕನಿಗೆ ಫುಲ್ ಕ್ಲಾಸ್

2 weeks ago

ಮೈಸೂರು: ಕ್ಷೇತ್ರದ ಮತದಾರರ ಸಮಸ್ಯೆ ಆಲಿಸಲು ಗ್ರೂಪ್ ಮಾಡಿ ಕಾಂಗ್ರೆಸ್ ಶಾಸಕರೊಬ್ಬರು ಪೇಚಿಗೆ ಸಿಲುಕಿದ್ದಾರೆ. ವಾಟ್ಸಪ್ ಗ್ರೂಪ್ ನಲ್ಲಿ ಶಾಸಕರಿಗೆ ಮತದಾರರು ಹಿಗ್ಗಾಮುಗ್ಗಾ ತರಾಟೆ ತೆಗೆದು ಕೊಂಡಿದ್ದಾರೆ. ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಯಾಕಾದರೂ ತಾನೂ ವಾಟ್ಸಪ್ ಗ್ರೂಪ್...

ಲಕ್ಷಾಂತರ ರೂ. ಅವ್ಯವಹಾರ ಬಯಲು- ಅಧಿಕಾರಿಗಳ ಮುಂದೆ ಮಾತ್ರೆ ನುಂಗಿದ ನಂಜನಗೂಡು ದೇವಾಲಯದ ಸಿಬ್ಬಂದಿ

2 weeks ago

ಮೈಸೂರು: ನಂಜನಗೂಡಿನ ಶ್ರೀಕಂಠೇಶ್ವರ ಸನ್ನಿಧಿಯಲ್ಲಿ ಹೈಡ್ರಾಮಾ ನಡೆದಿದ್ದು ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತುಲಾಭಾರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭಿಲಾಷ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಅವ್ಯವಹಾರದ ಆರೋಪ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು ಲೆಕ್ಕ ಪರಿಶೋಧನೆ ಮಾಡುತ್ತಿದ್ದರು. ಈ ವೇಳೆ ಲಕ್ಷಾಂತರ ರೂ....

ದೀಪಕ್‍ ರಾವ್ ಹತ್ಯೆ ಹಿಂದೆ ಬಿಜೆಪಿ ಕಾರ್ಪೋರೇಟರ್ ಕೈವಾಡವಿದೆ: ಹೆಚ್‍ಡಿಕೆ

2 weeks ago

ಮೈಸೂರು: ದೀಪಕ್‍ ರಾವ್ ಹತ್ಯೆ ಹಿಂದೆ ಬಿಜೆಪಿ ಕಾರ್ಪೋರೇಟರ್ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ದೀಪಕ್ ರಾವ್ ಕೊಲೆಗೆ ಕೆಲವು ಬಿಜೆಪಿ ನಾಯಕರು ಕಾರಣಕರ್ತರಾಗಿದ್ದಾರೆ ಎಂಬ ಮಾಹಿತಿ ನನಗೆ ಲಭಿಸಿದೆ. ಇದೂವರೆಗೂ ನಾನು ಈ...

ಕೋಟಿ ರೂ. ಮೌಲ್ಯದ ಚಿನ್ನಾಭರಣಕ್ಕಾಗಿ ಕೊಳಚೆ ನೀರಿನಲ್ಲಿ ಮುಳುಗಿ ಹುಡುಕಾಡಿದ ಜನ!

2 weeks ago

ಮೈಸೂರು: ಅಪ್ಪ-ಮಗ ಕದ್ದಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾಲನ್ನು ಕೆರೆಯಲ್ಲಿ ಅಡಗಿಸಿಟ್ಟಿದ್ದಾರೆಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಕೆರೆಯಲ್ಲಿ ಸಂಗ್ರಹವಾಗಿದ್ದ ಕೊಳಚೆ ನೀರಿನಲ್ಲಿ ಮುಳುಗೇಳುವ ಮೂಲಕ ಚಿನ್ನಾಭರಣಕ್ಕಾಗಿ ಹುಡುಕಾಟ ನಡೆಸಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ದಳವಾಯಿ ಕೆರೆಯಲ್ಲಿ...

ಬಶೀರ್ ಸಾವಿನ ಕುರಿತು ಸಂಸದ ಪ್ರತಾಪ್ ಸಿಂಹ ಹೀಗಂದ್ರು

2 weeks ago

ಮೈಸೂರು: ನಗರದ ಸುರತ್ಕಲ್ ಸಮೀಪದ ಕಾಟಿಪಳ್ಳ ಎಂಬಲ್ಲಿ ನಡೆದ ದೀಪಕ್ ರಾವ್ ಹತ್ಯೆಯಂದೇ ದುಷ್ಕರ್ಮಿಗಳ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಬಶೀರ್ ಇಂದು ಮೃತಪಟ್ಟಿದ್ದು, ಇದೀಗ ಬಶೀರ್ ಸಾವನ್ನು ಸಂಸದ ಪ್ರತಾಪ್ ಸಿಂಹ ಖಂಡಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಟ್ವೀಟ್...

ಯದುವಂಶಕ್ಕೆ ಉತ್ತರಾಧಿಕಾರಿ ಬಂದ ಖುಷಿಯಲ್ಲಿ ರಾಜವಂಶಸ್ಥರಿಂದ ದೇವಾಲಯಗಳಿಗೆ ಭೇಟಿ

2 weeks ago

ಮೈಸೂರು: ಯದುವಂಶಕ್ಕೆ ಉತ್ತರಾಧಿಕಾರಿ ಬಂದ ಖುಷಿಯಲ್ಲಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶನಿವಾರ ಅರಮನೆಯ ಕೋಟೆಗೆ ಹೊಂದಿಕೊಂಡಿರುವ ಕೋಟೆ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕೋಟೆ ಮಾರಮ್ಮನಿಗೆ ಹಾಲೆರೆಯುವ ಮೂಲಕ ಯದುವೀರ್ ಅವರು ವಿಶೇಷ ಪೂಜೆ...