ಮೈಸೂರು: ಕಾಂಗ್ರೆಸ್ ನಾಯಕರ ಸಾಲು ಸಾಲು ಭೇಟಿ ಬೆನ್ನಲ್ಲೇ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮನೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B.S.Yediyurappa) ಭಾನುವಾರ ಭೇಟಿ ನೀಡಿದರು. ಈ ವೇಳೆ, ಮೋದಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಬಿಎಸ್‌ವೈ ಮಾಡಿದ ಮನವಿಗೆ ಪ್ರಸಾದ್, ಆಗಲ್ಲ ಎಂದು ನಿರಾಕರಿಸಿದ್ದಾರೆ.
ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿಯಿಂದ ಶ್ರೀನಿವಾಸ್ ಪ್ರಸಾದ್ (Srinivas Prasad) ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದೇ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಸಾದ್ ಅವರನ್ನು ಭೇಟಿಯಾಗುತ್ತಿರುವುದು ಸಹಜವಾಗಿ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಸಿಎಂ ತವರಲ್ಲಿಂದು ನಮೋ ಘರ್ಜನೆ – ಮೈಸೂರಲ್ಲಿ ಎಲ್ಲೆಲ್ಲಿ ಮಾರ್ಗ ಬದಲಾವಣೆ?
Advertisement
Advertisement
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮೈಸೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರಲ್ಲಿ ಭಾಗವಹಿಸುವಂತೆ ಆಹ್ವಾನಿಸಲು ಶ್ರೀನಿವಾಸ್ ಪ್ರಸಾದ್ ಅವರ ನಿವಾಸಕ್ಕೆ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದರು. ಈ ವೇಳೆ ಪ್ರಸಾದ್ ಆರೋಗ್ಯವನ್ನು ಬಿಎಸ್‌ವೈ ವಿಚಾರಿಸಿದರು.
Advertisement
ಇಂದಿನ ಬಿಜೆಪಿ ಸಮಾವೇಶದಲ್ಲಿ ನರೇಂದ್ರ ಮೋದಿ ಜೊತೆ ವೇದಿಕೆ ಹಂಚಿಕೊಳ್ಳುವಂತೆ ಪ್ರಸಾದ್‌ಗೆ ಬಿಎಸ್‌ವೈ ಮನವಿ ಮಾಡಿದರು. ಇದಕ್ಕೆ ಪ್ರಸಾದ್ ಸ್ಪಷ್ಟವಾಗಿ ನಿರಾಕರಿಸಿದರು. ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತನಾಗಿದ್ದೇನೆ. ಹಾಗಾಗಿ ಸಮಾವೇಶದಲ್ಲಿ ಭಾಗಿಯಾಗುವುದಿಲ್ಲ. ಮೋದಿ ಜಾಗತಿಕ ನಾಯಕರು. ಅವರ ಜೊತೆ ಐದು ವರ್ಷ ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ಮೋದಿ ನಾನು ಕಂಡ ಅತ್ಯಂತ ಒಳ್ಳೆಯ ಪ್ರಧಾನ ಮಂತ್ರಿ. ಮೋದಿ, ಬಿಜೆಪಿ ವಿರುದ್ಧ ನಾನು ಏನನ್ನೂ ಮಾತನಾಡುವುದಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಹಾಲಿ, ಮಾಜಿ ಪ್ರಧಾನಿಗಳ ಸಮಾಗಮದಿಂದ ದೊಡ್ಡ ಸಂದೇಶ ರವಾನೆ: ಯದುವೀರ್
Advertisement
ಹೂಗುಚ್ಛ ನೀಡಿ ಆತ್ಮೀಯವಾಗಿ ಇಬ್ಬರೂ ಮಾತುಕತೆ ನಡೆಸಿದರು. ಕಾರ್ಯಕ್ರಮಕ್ಕೆ ಬಂದು ಸ್ವಲ್ಪಹೊತ್ತು ಕುಳಿತು ಹೋಗಬೇಕು ಎಂದು ಶ್ರೀನಿವಾಸ್ ಪ್ರಸಾದ್‌ಗೆ ಯಡಿಯೂರಪ್ಪ ಮನವಿ ಮಾಡಿದರು. ಕೈ ಮುಗಿತೀನಿ ಆಗೋದಿಲ್ಲ. ನನಗೆ ಆರೋಗ್ಯ ಸ್ಪಂದಿಸಲ್ಲ. ನಾನು ಬಿಜೆಪಿಯಿಂದಲೇ ನಿವೃತ್ತಿ ಆಗಿದ್ದೇನೆ. ಯಾವುದೇ ರಾಜಕೀಯ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಿಲ್ಲ ಎಂದರು ಪ್ರಸಾದ್. ಆಗ ಬಿಎಸ್‌ವೈ, ಪ್ರಧಾನಿ ಬರ್ತಿದ್ದಾರೆ ಬನ್ನಿ ಎಂದು ಮನವಿ ಮಾಡಿದರು.
ನಾನು ನಿವೃತ್ತಿ ಆಗಿರೋದ್ರಿಂದ ಸಿಎಂ ಸೇರಿ ಎಲ್ಲ ಬರ್ತಾರೆ. ಬಂದು ಆರೋಗ್ಯ ವಿಚಾರಿಸಿದ್ದಾರೆ. ವಿಜಯೇಂದ್ರ ಎರಡು ಬಾರಿ ಬಂದಿದ್ರು. ನಮ್ಮ ಅಳಿಯ ಹರ್ಷ ಅವರು ಬಹಳ ಸಂಪರ್ಕದಲ್ಲಿ ಇದ್ದಾರೆ. ನೀವು ಬಹಳ ಬ್ಯುಸಿ ಇದ್ದೀರ. ಚಿತ್ರದುರ್ಗದಿಂದ ಬಂದ್ರ? ನಿಮ್ಮ ಆರೋಗ್ಯ ಚೆನ್ನಾಗಿದೆ, ಬಹಳಾ ಚೆನ್ನಾಗಿ ಕಾಪಾಡಿಕೊಂಡಿದ್ದೀರಾ ಎಂದು ಯಡಿಯೂರಪ್ಪಗೆ ಕಾಂಪ್ಲಿಮೆಂಟರಿ ಕೊಟ್ಟರು. ಮೋದಿ ಜೊತೆ ತುಂಬಾ ಸಾರಿ ವೇದಿಕೆ ಹಂಚಿಕೊAಡಿದ್ದೇನೆ. ಈಗ ಸ್ವಲ್ಪ ದೂರವೂ ನಡೆಯಲು ಆಗಲ್ಲ ಎಂದು ಮಾತನಾಡುತ್ತಲೇ ನಯವಾಗಿ ಯಡಿಯೂರಪ್ಪ ಆಹ್ವಾನ ತಿರಸ್ಕರಿಸಿದರು.
ಶ್ರೀನಿವಾಸ್ ಪ್ರಸಾದ್ ನಿವಾಸದಿಂದ ಹೊರಟ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ಕಾರ್ಯಕ್ರಮಕ್ಕೆ ಬರಲು ಪ್ರಸಾದ್ ಒಪ್ಪಿಕೊಂಡಿದ್ದಾರೆ. ನಮ್ಮ ಸಂಸತ್ ಸದಸ್ಯರು ಬಹಳ ಹಿರಿಯವರು. ಮೋದಿ ಅವರ ಬಗ್ಗೆ ಬಹಳ ಗೌರವ ಇಟ್ಟುಕೊಂಡಿರುವ ನಾಯಕರು. ನಾನು ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಮೋದಿ ಭೇಟಿ ಮಾಡಿ ಐದು ನಿಮಿಷ ಇದ್ದು ಹೋಗಿ ಎಂದು ಕೇಳಿಕೊಂಡಿದ್ದೇನೆ. ಈಗ ಅವರು ಬರಲು ಒಪ್ಪಿಕೊಂಡಿದ್ದಾರೆ. ಇದಕ್ಕೆ ಚಿರಋಣಿಯಾಗಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: 6 ವರ್ಷಗಳ ಮುನಿಸು ಮರೆತು ಶ್ರೀನಿವಾಸ್ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ
ಆಹ್ವಾನ ಕುರಿತು ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ಕೊಟ್ಟಿದ್ದಾರೆ. ಮನೆಗೆ ಬಂದಿದ್ದಾರೆ, ಮನೆಗೆ ಬಂದವರನ್ನ ಸೌಜನ್ಯದಿಂದ ಬರಮಾಡಿಕೊಳ್ಳುವುದು ಕರ್ತವ್ಯ. ಕಾರ್ಯಕ್ರಮಕ್ಕೆ ಬರುವಂತೆ ಯಡಿಯೂರಪ್ಪ ಕರೆದಿದ್ದಾರೆ. ಕಡು ಖಂಡಿತವಾಗಿ ಬರಲು ಆಗಲ್ಲ ಅಂತ ಹೇಳಲು ಆಗಲ್ಲ. ಸೌಜನ್ಯದಿಂದ ಬಂದಾಗ ಪ್ರೀತಿಯಿಂದ ಮಾತನಾಡಿದ್ದೇನೆ. ಕಾರ್ಯಕ್ರಮಕ್ಕೆ ಹೋಗುವುದು ಬಿಡುವುದು ನಮ್ಮ ತೀರ್ಮಾನ ಎಂದು ಸ್ಪಷ್ಟಪಡಿಸಿದರು.