ಸಂಜೆಗೆ ಬಿಸಿ ಬಿಸಿ ಚಹಾವನ್ನು ಸವಿಯಲು ಪ್ರತಿಯೊಬ್ಬರು ಬಯಸುತ್ತಾರೆ. ಚಹಾ ಜೊತೆಗೆ ಒಂದು ತಿಂಡಿ ಇದ್ದರೆ ಆ ಮಜವೇ ಬೇರೆ ಎಂದು ಹಲವರು ಹೇಳುತ್ತಾರೆ. ಗರಿ ಗರಿಯಾದ ತಿಂಡಿ ಇದ್ದರೆ ಚಹಾದ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.
ನಾವು ಇಂದು ನಿಮಗೆ ಹೇಳಲು ಹೊರಟಿರುವ ತರಕಾರಿ ಬೋಂಡಾ ನಿಮಗೆ ಆರೋಗ್ಯವನ್ನೂ ನೀಡುತ್ತದೆ ಮತ್ತು ನಾಲಿಗೆಗೆ ರುಚಿಯನ್ನೂ ಹೆಚ್ಚಿಸುತ್ತದೆ. ಎಲ್ಲಾ ತರಕಾರಿಗಳ ಹದವಾದ ಮಿಶ್ರಣವನ್ನು ಈ ಬೋಂಡಾ ಒಳಗೊಂಡಿರುವುದರಿಂದ ಎಲ್ಲಾ ತರಕಾರಿಗಳಿಂದ ಪೋಷಕಾಂಶಗಳನ್ನು ಪಡೆಯುವುದರ ಜೊತೆಗೆ ರುಚಿಯಾದ ತಿಂಡಿಯನ್ನು ಸವಿಯಬಹುದಾಗಿದೆ.
Advertisement
Advertisement
ಬೇಕಾಗುವ ಸಾಮಗ್ರಿಗಳು:
Advertisement
*ಆಲೂಗಡ್ಡೆ 4
*ಬೀಟ್ರೋಟ್ – ಅರ್ಧ ಕಪ್
* ಬೀನ್ಸ್ – 2 ಕಪ್
*ಕ್ಯಾರೇಟ್ – 2 ಕಪ್
*ಬಟಾಣಿ – 2 ಕಪ್
*ಹಸಿಮೆಣಸು – 2
* ಈರುಳ್ಳಿ – 2
*ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
*ಮೆಣಸಿನ ಪುಡಿ – 1 ಚಮಚ
*ಅರಶಿನ ಪುಡಿ – ಸ್ವಲ್ಪ
*ಇಂಗಿನ ಪುಡಿ – ಸ್ವಲ್ಪ
*ಜೀರಿಗೆ ಪುಡಿ – ಅರ್ಧ ಚಮಚ
*ಗರಮ್ ಮಸಾಲಾ – ಅರ್ಧ ಚಮಚ
*ಲಿಂಬೆ ರಸ- ಅರ್ಧ ಚಮಚ
*ಕಡಲೆ ಹಿಟ್ಟು – 3 ಕಪ್ಗಳು
*ಅಕ್ಕಿ ಹಿಟ್ಟು – ಅರ್ಧ ಕಪ್
*ಬೇಕಿಂಗ್ ಸೋಡಾ – ಸ್ವಲ್ಪ
* ಅಡುಗೆ ಎಣ್ಣೆ- 2 ಕಪ್
Advertisement
ಮಾಡುವ ವಿಧಾನ:
* ಮೊದಲಿಗೆ ಬಟಾಣಿಯನ್ನು 6-8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ 2-3 ಬಾರಿ ಅವುಗಳನ್ನು ಚೆನ್ನಾಗಿ ತೊಳೆದು ಪಕ್ಕದಲ್ಲಿಡಿ.
* ಕ್ಯಾರೇಟ್ ಬೀನ್ಸ್, ಬೀಟ್ರೂಟ್, ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಸಳು, ಹಸಿಮೆಣಸನ್ನು ಸಣ್ಣಗೆ ಹೆಚ್ಚಿಕೊಳ್ಳಿ.
*ಆಲೂಗಡ್ಡೆ, ನೆನೆಸಿದ ಬಟಾಣಿ, ಕತ್ತರಿಸಿಟ್ಟುಕೊಂಡ ತರಕಾರಿಗಳನ್ನು ಕುಕ್ಕರ್ನಲ್ಲಿ ಸಾಕಷ್ಟು ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಬೇಯಲು ಇಡಿ. (3 ವಿಶಲ್ ಸಾಕು)
*ಆಲೂಗಡ್ಡೆಯ ಹೊರಭಾಗದ ಸಿಪ್ಪೆಯನ್ನು ತೆಗೆದು ಅದನ್ನು ಚೆನ್ನಾಗಿ ಹಿಸುಕಿಕೊಳ್ಳಿ
*ನಂತರ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮೊದಲಿಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹುರಿದುಕೊಳ್ಳಿ. ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನೆಲೆ, ಇಂಗು, ಅರಶಿನ, ಹಸಿಮೆಣಸನ್ನು ಹಾಕಿ 3-4 ನಿಮಿಷಗಳ ಕಾಲ ಮಂದ ಉರಿಯಲ್ಲಿ ಹುರಿದುಕೊಳ್ಳಿ. ನಂತರ ಗರಮ್ ಮಸಾಲಾವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರ ಮಾಡುತ್ತಾ ಜೊತೆಗೆ ಹಿಸುಕಿಕೊಂಡಿರುವಆಲೂಗಡ್ಡೆ, ಬಟಾಣಿ, ಉಪ್ಪು,ಲಿಂಬೆ ರಸ, ಮೆಣಸಿನ ಪುಡಿಯನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು 1-2 ನಿಮಿಷಗಳ ಕಾಲಚೆನ್ನಾಗಿ ಬೇಯಿಸಿರಿ.
*ನಂತರ ಒಂದು ಪಾತ್ರೆಗೆ ಕಡಲೆ ಹಿಟ್ಟು, ಇಂಗು, ಮೆಣಸಿನ ಪುಡಿ, ಅಕ್ಕಿ ಹಿಟ್ಟು, ಸ್ವಲ್ಪ ಬೇಕಿಂಗ್ ಪೌಡರ್ ಮತ್ತು ಬೇಕಾದಷ್ಟು ನೀರನ್ನು ಹಾಕಿಕೊಂಡು ಸ್ವಲ್ಪ ದಪ್ಪವಾಗಿ ಹಿಟ್ಟನ ಮಿಶ್ರಣ ತಯಾರಿಸಿಕೊಳ್ಳಿ.
* ಬಾಣಲೆಯಲ್ಲಿ ಕರಿಯಲು ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ, ನಂತರ ಈ ತರಕಾರಿ ಮಿಶ್ರಣವನ್ನು ಉಂಡೆ ಮಾಡಿಕೊಂಡು ಕಡಲೆ ಹಿಟ್ಟಿಗೆ ಮುಳುಗಿಸಿ ಮತ್ತು ಕರಿಯುವ ಎಣ್ಣೆಗೆ ಇದನ್ನು ಹಾಕಿ. ಬೋಂಡಾದ ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿದರೆ ರುಚಿಯಾದ ತರಕಾರಿ ಬೋಂಡಾ ಸವಿಯಲು ಸಿದ್ಧವಾಗುತ್ತದೆ.