ಬಾಗಲಕೋಟೆ: ಕೋವಿಡ್-19 ಸಂದರ್ಭದಲ್ಲಿ ರೋಗಿಗಳು, ರೋಗಿಗಳ ಉಪಚಾರಕರು, ಹೋಂ ಐಸೂಲೇಷನ್ ನಲ್ಲಿರುವವರು ಹಾಗೂ ನಿರ್ಗತಿಕರಿಗೆ ಅನ್ನ ನೀಡುವ ಮಹಾನ್ ಕಾರ್ಯಕ್ಕೆ ಬಾಗಲಕೋಟೆಯ ಸಂಕಲ್ಪ ಸೇವಾ ಪ್ರತಿಷ್ಠಾನ ಮುಂದಾಗಿದೆ.
Advertisement
ಕಳೆದ ಹದಿನೇಳು ದಿನಗಳಿಂದ ದಿನಿನಿತ್ಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತೆರಳಿ, ಅಲ್ಲಿರುವ ರೋಗಿಗಳಿಗೆ ರುಚಿ-ಸುಚಿಯಾದ ಉಪಹಾರ ನೀಡಲು ಬಾಗಲಕೋಟೆಯ ಈ ಯುವಕರ ಟೀಂ ಮುಂದಾಗಿದೆ. ಮೊದಲ ದಿನದಿಂದಲೂ ಅಷ್ಟೇ ಉತ್ಸಾಹದಲ್ಲಿ ನಗರದ ಗುರಣ್ಣವರ ಆಸ್ಪತ್ರೆ, ಕಟ್ಟಿ ಆಸ್ಪತ್ರೆ, ಧನುಷ್ ಆಸ್ಪತ್ರೆ, ಸುಭಾಸ್ ಪಾಟೀಲ ಆಸ್ಪತ್ರೆ, ಕೆರೂಡಿ ಆಸ್ಪತ್ರೆ, ಮಾಳಜಿ ಆಸ್ಪತ್ರೆ, ಕಂಠಿ ಆಸ್ಪತ್ರೆಗಳ ಬಳಿ ತೆರಳಿ 150 ಜನರಿಗೆ ಊಟದ ಪೊಟ್ಟಣಗಳ ಹಾಗೂ ಕುಡಿಯುವ ನೀರಿನ ಬಾಟಲ್ ಗಳನ್ನು ವಿತರಣೆ ಮಾಡುತ್ತಿದ್ದಾರೆ.
Advertisement
Advertisement
ಬಾಗಲಕೋಟೆಯ ಅಭಯ ಮನಗುಳಿ ಹಾಗೂ ಸ್ನೇಹಿತರು ಸೇರಿ ಈ ಸೇವಾ ಕಾರ್ಯಕ್ಕೆ ಮುಂದಾಗಿದ್ದಾರೆ. ಪ್ರತಿದಿನ ವಿಧ ವಿಧವಾದ ಅಡುಗೆ, ಉಪಹಾರ ತಯಾರಿಸಿ, ಊಟದ ಪೊಟ್ಟಣಗಳನ್ನು ನೀಡಲಾಗ್ತಿದೆ. ಶುದ್ಧ ಅಡುಗೆಯನ್ನು ನೀಡಲಾಗುತ್ತಿದ್ದು, ದಿನನಿತ್ಯ ಚಪಾತಿ, ಪಲ್ಯ, ಪಲಾವ್ ಹೀಗೆ ರೋಗಿಗಳಿಗೆ ಇಮ್ಮುನಿಟಿ ಹೆಚ್ಚಿಸುವ ಆಹಾರಗಳನ್ನ ನೀಡ್ತಿರೋದು ಈ ತಂಡದ ಸದಸ್ಯರ ವಿಷೇಶತೆಯಾಗಿದೆ.
Advertisement
ಈ ಯುವಕರ ತಂಡದ ಸಮಾಜಮುಖಿ ಕಾರ್ಯಕ್ಕೆ ಸದ್ಯ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಊಟ, ಉಪಹಾರ ವಿತರಣೆಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ಸಾಮಾಜಿಕ ಕಾರ್ಯಕರ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಎಂದು ಜನರಲ್ಲಿ ಅರಿವು ಸಹ ಮೂಡಿಸುತ್ತಿದ್ದಾರೆ.