– ವೈದ್ಯರ ಫೋಟೋ ಸಿಕ್ಕಾಪಟ್ಟೆ ವೈರಲ್
ದುಬೈ: ಆಗತಾನೇ ಹುಟ್ಟಿದ ಕೂಸು ವೈದ್ಯರ ಮಾಸ್ಕ್ ಬಲವಾಗಿ ಎಳೆದಿದ್ದು, ಮಾಸ್ಕ್ ತೆಗೆಯಲು ಯತ್ನಿಸಿದೆ. ಈ ಫೋಟೋ ಇದೀಗ ಸಖತ್ ವೈರಲ್ ಆಗಿದ್ದು, ಮಹಾಮಾರಿ ಕೊರೊನಾ ತೊಲಗಲಿದೆ. ಅಲ್ಲದೆ ಸದ್ಯದಲ್ಲೇ ಮಾಸ್ಕ್ ಹಾಕಿಕೊಳ್ಳದೇ ಓಡಾಡುವ ದಿಗಳು ಬರಲಿವೆ, ಇದು ಅದರ ಮುನ್ಸೂಚನೆ ಎಂಬ ಹಲವು ರಿತಿಯ ಚರ್ಚೆ ನಡೆಯುತ್ತಿದೆ.
Advertisement
ಈ ಫೋಟೋವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ ವೈದ್ಯ ಸಮೀರ್ ಚೀಬ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಇದಕ್ಕೆ ಸಾಲುಗಳನ್ನು ಬರೆದಿರುವ ವೈದ್ಯರು, ಶೀಘ್ರದಲ್ಲೇ ಮಾಸ್ಕ್ ತೆಗೆಯುವ ಮುನ್ಸೂಚನೆ ಸಿಕ್ಕಿದೆ ಎಂದಿದ್ದಾರೆ. ಕಪ್ಪು-ಬಿಳಿ ಬಣ್ಣದ ಚಿತ್ರವನ್ನು ಅವರು ಹಂಚಿಕೊಂಡಿದ್ದು, ಮುದ್ದಾದ ಫೋಟೋಗೆ ಸಾಕಷ್ಟು ಜನ ಮಾರುಹೋಗಿದ್ದಾರೆ.
Advertisement
Advertisement
ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದ್ದು, ಸಾಕಷ್ಟು ಜನ ತಮ್ಮ ಅಭಿಪ್ರಾಯ ತಿಳಿಸಿ ಫೋಟೋ ಪೋಸ್ಟ್ ಮಾಡುತ್ತಿದ್ದಾರೆ. ಪ್ರಪಂಚ ಕೊರೊನಾ ಮಣಿಸಿ ಸಹಜ ಸ್ಥಿತಿಗೆ ಮರಳಲಿದೆ. ಈ ಚಿತ್ರ ಅದರ ಸಂಕೇತವಾಗಿದೆ ಎಂದು ಹೇಳುತ್ತಿದ್ದಾರೆ. ಇನ್ನೂ ಹಲವರು ತಮ್ಮದೇ ಆದ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.
Advertisement
ಫೋಟೋ ಆಫ್ ದಿ ಇಯರ್, ಗಾಡ್ ಬ್ಲೆಸ್ ಯು ಎಂದು ಇನ್ಸ್ಟಾಗ್ರಾಮ್ ಬಳಕೆದರರೊಬ್ಬರು ತಿಳಿಸಿದ್ದಾರೆ. ತುಂಬಾ ಸುಂದರವಾದ ಹಾಗೂ ಅರ್ಥಗರ್ಭಿತ ಚಿತ್ರ ಇದಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ತುಂಬಾ ಸುಂದರ ಚಿತ್ರ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಶಿಶುಗಳು ಗರ್ಭದಲ್ಲಿರುವಾಗಲೇ ತಮ್ಮ ಗುರುತನ್ನು ರೂಪಿಸುತ್ತವೆ. ಈ ಚಿಕ್ಕ ಮಗು ಖಂಡಿತವಾಗಿಯೂ ಮಾಸ್ಕ್ ಧರಿಸುವುದನ್ನು ದ್ವೇಷಿಸುತ್ತದೆ ಎಂದು ಕಮೆಂಟ್ ಮಾಡಿದರೆ, ಸುಂದರವಾದ ಚಿತ್ರ ಡಾಕ್ಟರ್, ಹೌದು ಶೀಘ್ರದಲ್ಲೇ ಆ ದಿನ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.