– 7 ಸಾವಿರ ವರ್ಷದ ಹಿಂದಿದ್ದ ಇಂಟಲಿಜೆಂಟ್ ರಾಕ್ಷಸ
ಹೈದರಾಬಾದ್: ಟಾಲಿವುಡ್ ಯಂಗ್ ರೆಬೆಲ್ಸ್ಟಾರ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಆದಿಪುರುಷ ಸಿನಿಮಾ ಕುರಿತು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದ್ದು, ಇದರ ನಡುವೆಯೇ ಅಪ್ಡೇಟ್ಗಳ ಮೇಲೆ ಅಪ್ಡೇಟ್ ನೀಡುವ ಮೂಲಕ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಲಾಗುತ್ತಿದ್ದು, ಲಂಕೇಶನಾಗಿ ನಟ ಸೈಫ್ ಅಲಿಖಾನ್ ಚಿತ್ರತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
Advertisement
ಇತ್ತೀಚೆಗಷ್ಟೇ ಆದಿಪುರುಷನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಕುರಿತು ಮಾಹಿತಿ ನೀಡಲಾಗಿತ್ತು. ಆಗಿನಿಂದ ಅಭಿಮಾನಿಗಳಲ್ಲಿ ಕಲುತೂಹಲ ಹೆಚ್ಚಿದ್ದು, ಯಾವ ರೀತಿಯ ಸಿನಿಮಾ ಇರಬಹುದು ಎಂದು ತಲೆ ಕೆಡಿಸಿಕೊಂಡಿದ್ದರು. ಇದೀಗ ಬಿಡುಗಡೆಯಾಗಿರುವ ಹೊಸ ಪೋಸ್ಟರ್ ಇನ್ನೂ ಕುತೂಹಲ ಮೂಡಿಸಿದೆ.
Advertisement
Advertisement
ಈ ಹಿಂದೆ ಬಿಡುಗಡೆಯಾಗಿದ್ದ ಫಸ್ಟ್ ಲುಕ್ ಪೋಸ್ಟರ್ ಪುರಾಣ ಕಥೆಗಳನ್ನು ಬಿಂಬಿಸುವಂತಿತ್ತು. ಒಂದೇ ಪೋಸ್ಟ್ನ ‘ಎ’ ಅಕ್ಷರದಲ್ಲಿ ರುದ್ರ ತಾಂಡವವಾಡುತ್ತಿರುವ ಆದಿಪುರುಷ ಶಿವ, ಗಧೆ ಹಿಡಿದ ಹನುಮಂತ, ಬಿಲ್ಲು ಹಿಡಿದ ರಾಮ, ಕೆಳಗೆ ಹತ್ತು ತಲೆಗಳ ರಾವಣನ ಚಿತ್ರವಿತ್ತು. ಹೀಗಾಗಿ ಅಭಿಮಾನಿಗಳಲ್ಲಿ ಇದು ಯಾವ ರೀತಿಯ ಸಿನಿಮಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಇನ್ನೂ ವಿಶೇಷ ಎಂಬಂತೆ ಕನ್ನಡ. ತೆಲುಗು, ಹಿಂದಿ, ತಮಿಳು, ಮಲಯಾಳಂ ಒಟ್ಟು 5 ಭಾಷೆಗಳಲ್ಲಿ ಸಿನಿಮಾ ತಯಾರಾಗಲಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಅಲ್ಲದೆ 3ಡಿ ಸಿನಿಮಾ ಇದಾಗಿರಲಿದೆ.
Advertisement
ಮತ್ತೊಂದು ಪೋಸ್ಟರ್ ಬಿಡುಗಡೆ ಕುರಿತು ಬುಧವಾರ ಪ್ರಭಾಸ್ ಟ್ವೀಟ್ ಮಾಡಿದ್ದರು. 7 ಸಾವಿರ ವರ್ಷಗಳ ಹಿಂದೆ ವಿಶ್ವದ ಅತ್ಯಂತ ಬುದ್ಧಿವಂತ ರಾಕ್ಷಸ ಅಸ್ತಿತ್ವದಲ್ಲಿದ್ದ. ನಾಳೆ ಬೆಳಗ್ಗೆ 7.11 ಬಿಡುಗಡೆಯಾಗಲಿದೆ ಎಂದು ಪ್ರಭಾಸ್ ಫೋಟೋ ಹಾಕಿದ್ದರು. ಅದರಂತೆ ಇಂದು ಬೆಳಗ್ಗೆ ಮತ್ತೊಂದು ಲುಕ್ ರಿವೀಲ್ ಮಾಡಿದ್ದು, ಇದರಲ್ಲಿ ಸಹ ‘ಎ’ ಚಿತ್ರದಲ್ಲಿಯೇ ಎಲ್ಲವನ್ನೂ ಹಾಕಲಾಗಿದೆ. ಮೇಲೆ ಹತ್ತು ತಲೆಯ ರಾಕ್ಷಸ ರೀತಿಯ ವಿವಿಧ ಭಂಗಿಗಳು, ನಡುವೆ ಬಿಲ್ಲು ಹಿಡಿದ ರಾಮ, ಕೆಳಗೆ ಬಲಶಾಲಿ, ಸಮುದ್ರ ದಾಟುತ್ತಿರುವ ಹನುಮಂತನ ಚಿತ್ರವಿದೆ. ಅಲ್ಲದೆ ಚಿತ್ರದಲ್ಲಿ ಸೈಫ್ ಅಲಿ ಖಾನ್ ಲಂಕೇಶ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಬರೆಯಲಾಗಿದೆ.
7000 years ago existed the world’s most intelligent demon! #Adipurush ????#Prabhas #SaifAliKhan @omraut @itsBhushanKumar @vfxwaala @rajeshnair06 @TSeries @RETROPHILES1 pic.twitter.com/szCmYjt6KJ
— Prabhas (@PrabhasRaju) September 3, 2020
ಎ ಅಕ್ಷರದ ಕೆಳಗೆ ಸಬ್ ಟೈಟಲ್ ಸಹ ಹಾಕಿದ್ದು, ಸೆಲೆಬ್ರೇಟಿಂಗ್ ವಿಕ್ಟರಿ ಆಫ್ ಗುಡ್ ಓವರ್ ಇವಿಲ್ ಎಂದು ಬರೆಯಲಾಗಿದೆ. ಓಂ ರಾವತ್ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದು, ಯಾವ ರೀತಿ ಮೂಡಿ ಬರಲಿದೆ ಕಾದು ನೋಡಬೇಕಿದೆ.