ಕೆಲವು ಹಣ್ಣುಗಳು ಒಂದೊಂದು ಸೀಸನ್ಅಲ್ಲಿ ಮಾತ್ರ ಸಿಗುತ್ತವೆ. ಹಣ್ಣುಗಳನ್ನು ಹಾಗೆ ತಿನ್ನುವುದು ಮಾತ್ರವಲ್ಲ. ಹಣ್ಣುಗಳಿಂದ ಬಗೆಬಗೆಯ ತಿಂಡಿಗಳನ್ನು ಮಾಡಿ ಸವಿಯಬೇಕು ಎಂದು ಬೋಜನ ಪ್ರಿಯರು ಇಷ್ಟ ಪಡುತ್ತಾರೆ.
Advertisement
ಹಲಸಿನ ಹಣ್ಣಿನ ಸೀಸನ್ ಇದಾಗಿದೆ. ಹಲಸಿನ ಹಣ್ಣಿನ ಇಡ್ಲಿ, ಕಡುಬು ಎಂದು ನೀವು ಮಡಿರುತ್ತೀರಿ. ಆದರೆ ಇಂದು ಹಲಸಿನ ಹಣ್ಣಿನ ಹಲ್ವಮಾಡಲು ಇಲ್ಲಿದೆ ಮಾಡುವ ವಿಧಾನ. ಹಲ್ವಾ ಪ್ರಿಯರಿಗೆ ಹಲಸಿನ ಹಣ್ಣಿನ ಹಲ್ವಾವು ಇಷ್ಟವಾಗದಿರಲು ಸಾಧ್ಯವಿಲ್ಲ. ಹಲಸಿನ ಹಣ್ಣಿನ ಹಲ್ವ ಮಾಡಲು ಸ್ವಲ್ಪ ಸಮಯ ಹಿಡಿಯಬಹುದು ಆದರೆ ಬಹಳ ರುಚಿಯಾದ ತಿಂಡಿಗಳಲ್ಲಿ ಇದು ಒಂದಾಗಿದೆ.
Advertisement
Advertisement
ಬೇಕಾಗುವ ಸಾಮಗ್ರಿಗಳು:
* ಹಲಸಿನ ಹಣ್ಣು- 4ಕಪ್
* ಬೆಲ್ಲ- 2 ಕಪ್
* ತುಪ್ಪ- ಅರ್ಧ ಕಪ್
* ಏಲಕ್ಕಿ ಹಾಗೂ ಗೋಡಂಬಿ ಪುಡಿ
Advertisement
ಮಾಡುವ ವಿಧಾನ:
* ಮೊದಲು ಬೀಜ ತೆಗೆದ ಹಲಸಿನ ಹಣ್ಣನ್ನು ನೀರು ಸೇರಿಸದೆ ರುಬ್ಬಿಕೊಳ್ಳಬೇಕು.
* ನಂತರ ರುಬ್ಬಿಕೊಂಡ ಮಿಶ್ರಣವನ್ನು ಬಾಣಲೆಗೆ ಹಾಕಬೇಕು. ಹಣ್ಣಿನ ಪ್ರಮಾಣಕ್ಕೆ ಸರಿದೂಗುವಂತೆ ಬೆಲ್ಲವನ್ನು ಹಾಕಬೇಕು.
* ಈ ಮಿಶ್ರಣವನ್ನು ಕುದಿಸುತ್ತೀರ ಬೇಕು. ಬಣ್ಣ ಬದಲಾಗುತ್ತಾ ಬರುತ್ತದೆ. ಮೊದಲು ಕಂದು ಬಣ್ಣ, ನಂತರ ಸ್ವಲ್ಪ ಕಪ್ಪು ಬಣ್ಣಕ್ಕೆ ಬದಲಾಗುತ್ತದೆ. ಮಿಶ್ರಣ ಗಟ್ಟಿ ಹದಕ್ಕೆ ಬಂದ ನಂತರ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡುತ್ತೀರಬೇಕು.
* ಈಗ ಏಲಕ್ಕಿ ಪುಡಿ ಮತ್ತು ಗೋಡಂಬಿ ತುಂಡುಗಳನ್ನು ಸೇರಿಸಿ. ಗಟಗಟಗಿ ಹದಕ್ಕೆ ಬರುವ ವರೆಗು ಬೇಯಿಬೇಕು.
* ನಂತರ ತುಪ್ಪ ಹಚ್ಚಿದ ಬಟ್ಟಲಿಗೆ ಹಾಕಬೇಕು. ಸುಮಾರು ಒಂದು ಗಂಟೆಗಳ ನಂತರ ಹಲಸಿನ ಹಣ್ಣಿನ ಹಲ್ವ ಸವಿಯಲು ಸಿದ್ಧವಾಗುತ್ತದೆ.