ಮಾಂಸಪ್ರಿಯರು ವೀಶೆಷ ಮತ್ತು ವಿಭಿನ್ನವಾದ ಆಹಾರ ಸೇವೆನೆ ಮಾಡಲು ಇಷ್ಟ ಪಡುತ್ತಾರೆ. ಪ್ರತಿನಿತ್ಯ ಹೊಸ ಬಗೆಯ ಆಹಾರಗಳನ್ನು ತಯಾರಿಸಲು, ಸೇವಿಸಲು ನಾಲಿಗೆ ಬಯಸುತ್ತದೆ. ಚಿಕನ್, ಮಟನ್ ಕಬಾಬ್ ಮಾಡಿರುವ ನೀವು ಇಂದು ಕೊಂಚ ಡಿಫರೆಂಟ್ ಆಗಿ ಫಿಶ್ ಕಬಾಬ್ ಮಾಡಿ ಸವಿಯಿರಿ. ಮಳೆ ಇರುವುದರಿಂದ ಚಳಿ ಹೆಚ್ಚಾಗಿದೆ, ಹೀಗಾಗಿ ಮಧ್ಯಾಹ್ನ ಊಟಕ್ಕೆ ಫಿಶ್ ಕಬಾಬ್ ಇದ್ದರೆ ಚೆನ್ನಾಗಿರುತ್ತದೆ. ಇದನ್ನೂ ಓದಿ: ಮಕ್ಕಳಿಗೆ ಇಷ್ಟವಾಗುವ ಕಡಲೆ ಸಲಾಡ್ ಮಾಡಿ
Advertisement
ಬೇಕಾಗುವ ಸಾಮಗ್ರಿಗಳು:
*ಮೀನು – ಅರ್ಧ ಕೆಜಿ
* ಕಡಲೆಬೆಳೆ (ಚನ್ನಾ ದಾಲ್) – 4 ಟೀ ಸ್ಪೂನ್
*ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೀ ಸ್ಪೂನ್
*ಈರುಳ್ಳಿ ಪೇಸ್ಟ್ – 2 ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಕಡಲೆ ಹಿಟ್ಟು – 4 ಟೀ ಸ್ಪೂನ್
* ಅಡುಗೆ ಎಣ್ಣೆ – 2 ಚಮಚ
* ಕಾರದಪುಡಿ – ಅರ್ಧ ಟೀ ಸ್ಪೂನ್
Advertisement
ಮಾಡುವ ವಿಧಾನ:
* ಮೀನಿನ ತುಂಡುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. 10 ನಿಮಿಷಗಳ ಕಾಲ ಈ ತುಂಡುಗಳನ್ನು ನೀರಿನಲ್ಲಿ ಬೇಯಿಸಿಕೊಳ್ಳಿ.
Advertisement
Advertisement
* ನಂತರ ಇದು ಮೀನಿನ ಮುಳ್ಳನ್ನು ಹೊರತೆಗೆದು ನಿಮ್ಮ ಕೈಗಳಿಂದ ಚೆನ್ನಾಗಿ ಹಿಸುಕಿಕೊಳ್ಳಬೇಕು.
* ಕಡಲೆಬೆಳೆ (ಚನ್ನಾ ದಾಲ್) ಅನ್ನು ನುಣ್ಣನೆ ರುಬ್ಬಿಕೊಂಡು ಪೇಸ್ಟ್ ಸಿದ್ಧಪಡಿಸಿಕೊಳ್ಳಬೇಕು. ಇದನ್ನೂ ಓದಿ: ಇಂದು ಮಾಡಿ ಹಲಸಿನ ಹಣ್ಣಿನ ಕಡುಬು
* ಹಿಸುಕಿದ ಮೀನನ್ನು ಬೌಲ್ನಲ್ಲಿ ಹಾಕಿ ಚನ್ನಾ ದಾಲ್ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಈರುಳ್ಳಿ ಪೇಸ್ಟ್, ಕಾರದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
* ಮಿಶ್ರಣವನ್ನು ತೆಗೆದುಕೊಂಡು ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಕಟ್ಲೇಟ್ ಮಾದರಿಯಲ್ಲಿ ತಯಾರಿಸಿ. ಇದನ್ನೂ ಓದಿ: ಬಿಗ್ಬಾಸ್ ಮನೆಯಲ್ಲಿ ಮಂಜು ಮದುವೆ ಸಂಭ್ರಮ
* ಕಡಲೆಹಿಟ್ಟನ್ನು ನೀರಿನೊಂದಿಗೆ ಮಿಶ್ರ ಮಾಡಿ ದಪ್ಪ ಹಿಟ್ಟು ಮಾಡಿಕೊಂಡು ಕಬಾಬ್ ಅನ್ನು ಮುಳುಗಿಸಬೇಕು.
* ತವಾ ಬಿಸಿ ಮಾಡಿ ಎಣ್ಣೆ ಕಾದಿದ್ದರೆ ಮೀನು ಕಬಾಬ್ಗಳನ್ನು ಹಾಕಿ ಚೆನ್ನಾಗಿ ಬೇಯಿಸಿದರೆ ಫಿಶ್ ಕಬಾಬ್ ಸವಿಯಲು ಸಿದ್ಧವಾಗುತ್ತದೆ.