ಇಂದು ಮಾಂಸ ಪ್ರಿಯರಿಗೆ ರುಚಿಯಾದ ಖಾರವಾದ ಮಾಂಸಹಾರದ ಊಟ ಮಾಡಬೇಕು ಎಂದು ನಾಲಿಗೆ ಬಯಸುತ್ತದೆ. ಹೀಗಾಗಿ ನೀವು ಇಂದು ಮನೆಯಲ್ಲಿ ಚಿಕನ್ ರೋಸ್ಟ್ ಮಾಡಲು ಒಮ್ಮೆ ಟ್ರೈ ಮಾಡಿ. ಇದನ್ನೂ ಓದಿ: ಮನೆಯಲ್ಲಿ ಮಾಡಿ ಘಮಘಮಿಸುವ ಪಾಲಕ್ ಚಿಕನ್ ಕರಿ
Advertisement
ಬೇಕಾಗುವ ಸಾಮಗ್ರಿಗಳು:
* ಚಿಕನ್ – 1ಕೆಜಿ
* ಮೆಣಸಿನ ಪುಡಿ – 1 ಟೀ ಸ್ಪೂನ್
* ಗರಂ ಮಸಾಲ – 1 ಟೀ ಸ್ಪೂನ್
* ಅರಿಶಿಣ – 2 ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
* ಕೊತ್ತಂಬರಿ ಸೊಪ್ಪು
* ಪುದೀನ ಸೊಪ್ಪು
* ಅಡುಗೆ ಎಣ್ಣೆ- 1 ಕಪ್
Advertisement
ಮಾಡುವ ವಿಧಾನ:
Advertisement
* ಶುಭ್ರವಾಗಿ ತೊಳೆದ ಚಿಕನ್ ಅನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಮೆಣಸಿನಪುಡಿ, ಗರಂ ಮಸಾಲ, ಅರಿಶಿನ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಕೊತ್ತಂಬರಿ ಮತ್ತು ಪುದೀನ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಒಂದು ಗಂಟೆ ನೆನೆಸಿಡಿ.
Advertisement
* ಒಂದು ಗಂಟೆಯ ನಂತರ ಪ್ಯಾನ್ಗೆಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದಾಗ ನೆನೆಸಿದ ಚಿಕನ್ ಅನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಪ್ರೈ ಮಾಡಬೇಕು.
* ಚಿಕನ್ ಎಣ್ಣೆಯಲ್ಲೆ ಸಂಪೂರ್ಣವಾಗಿ ಬೇಯಬೇಕು, ನೀರನ್ನು ಹಾಕುವಂತಿಲ್ಲ.
* ಚಿಕನ್ ಚೆನ್ನಾಗಿ ಬೆಂದ ನಂತರ ಗ್ಯಾಸ್ ಆಫ್ ಮಾಡಿ 5 ನಿಮಿಷ ಬಿಡಿ.
* ಈಗ ರುಚಿಯಾದ ಚಿಕನ್ ರೋಸ್ಟ್ ಸವಿಯಲು ಸಿದ್ಧವಾಗುತ್ತದೆ.