ಬಿಗ್ಬಾಸ್ ಸೆಕೆಂಡ್ ಇನ್ನಿಂಗ್ಸ್ನಲ್ಲಿ 2ನೇ ವಾರದ ಎಲಿಮಿನೇಷನ್ನಲ್ಲಿ ಬಿಗ್ ಮನೆಯಿಂದ ಆಚೆ ಬಂದಿರುವ ಸ್ಪರ್ಧಿ ರಘು. ಮನೆಗೆ ಬರುತ್ತಿದ್ದಂತೆ ರಘುಗೆ ಅದ್ದೂರಿಯಾದ ಸ್ವಾಗತ ಸಿಕ್ಕಿದೆ. ಬಿಗ್ಬಾಸ್ ಜರ್ನಿ ನಂತರ ಹೊಸದೊಂದು ಪ್ರವಾಸಕ್ಕೆ ಸಿದ್ಧರಾಗಿ ನಿಂತಿದ್ದಾರೆ. ಇದನ್ನೂ ಓದಿ: ಬಿಗ್ಬಾಸ್ ಮನೆಯಿಂದ ರಘು ಔಟ್
Advertisement
ಕನ್ನಡ ಬಿಗ್ಬಾಸ್ ಮನೆಯಲ್ಲಿ 91 ದಿನಗಳ ಜರ್ನಿ ರಘು ಪಾಲಿಗೆ ಭಾನುವಾರ ಅಂತ್ಯವಾಗಿದೆ. ಸೀಸನ್ 2ರಲ್ಲಿ ಎರಡನೇ ಸ್ಪರ್ಧಿಯಾಗಿ ರಘು ಎಲಿಮಿನೇಟ್ ಆಗಿದ್ದಾರೆ. ರಘು ಮನೆಗೆ ತೆರಳುತ್ತಿದ್ದಂತೆ ಪಟಾಕಿ ಹೊಡೆಯಲಾಗಿದೆ. ಮನೆಯಲ್ಲಿ ವೆಲ್ಕಮ್ ಬ್ಯಾಕ್ ಎಂದು ಕೇಕ್ ಕತ್ತರಿಸಿ ಸ್ವಾಗತಿಸಲಾಗಿದೆ. ಈ ಫೋಟೋ ಹಾಗೂ ವೀಡಿಯೋಗಳನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು ಸಂತಸ ಹೊರ ಹಾಕಿದ್ದಾರೆ. ನಾನು ಮೈಸೂರಿಗೆ ಬರುತ್ತಿದ್ದೇನೆ ನಿಮ್ಮ ಅಮ್ಮನಿಗೆ ರುಚಿಯಾದ ಅಡುಗೆಯನ್ನು ತಯಾರಿಸಲು ಹೇಳಿ ನಿಧಿ ಎಂದು ರಘು ನಿಧಿ ಸುಬ್ಬಯ್ಯ ಅವರನ್ನು ಟ್ಯಾಗ್ ಮಾಡಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಬನ್ನಿ ರಘು ಅಮ್ಮಾ ಚಿಲ್ಲಿ ಪೋರ್ಕ್ ಮಾಡುತ್ತಾರೆ ಎಂದು ನಿಧಿ ರಘು ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ.
Advertisement
View this post on Instagram
Advertisement
ರಘು ಅವರು ಬಿಗ್ಬಾಸ್ ಮನೆಯಲ್ಲಿ ನಿಧಿ ಸುಬ್ಬಯ್ಯ, ರಘು ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಬಿಗ್ಬಾಸ್ ಮನೆಯಿಂದ ಶುರುವಾದ ಈ ಸ್ನೇಹ ಹೊರಗೆ ಬಂದ ಮೇಲೂ ಅಷ್ಟೆ ಚೆನ್ನಾಗಿದೆ. ಸಿಧಿ ಮನೆಗೆ ಹೋಗಲು ಸಿದ್ಧರಾಗಿದ್ದಾರೆ.
Advertisement
ಚಕ್ರವರ್ತಿ ಚಂದ್ರಚೂಡ್, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ರಘು ಗೌಡ, ಶಮಂತ್ ಬ್ರೋ ಗೌಡ, ವೈಷ್ಣವಿ, ಅರವಿಂದ್ ಕೆ.ಪಿ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿತ್ತು. ಮೊದಲು ಮಂಜು ಸೇವ್ ಆದರು. ನಂತರ ಅರವಿಂದ್, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ಪ್ರಿಯಾಂಕಾ ತಿಮ್ಮೇಶ್ ಸೇವ್ ಆದರು. ಕೊನೆಯಲ್ಲಿ ಚಕ್ರವರ್ತಿ ಹಾಗೂ ರಘು ಉಳಿದುಕೊಂಡರು. ಚಕ್ರವರ್ತಿ ಸೇವ್ ಆಗಿ, ರಘು ಔಟ್ ಆದರು.