ರುಚಿಯಾದ ಆಹಾರ ತಿನ್ನುವುದು ಎಂದರೆ ಎಲ್ಲರಿಗೂ ಇಷ್ಟ. ಆದರೆ ಅಡುಗೆ ಮಾಡಲು ಸುಲಭವಾಗಿರುವ ರೆಸಿಪಿಗಳನ್ನು ನಾವು ಹುಡುಕುತ್ತಿರುತ್ತೇವೆ. ಮಜ್ಜಿಗೆ ದೋಸೆ ಮಾಡಲು ತುಂಬಾ ಸುಲಭವಾಗಿದೆ ಅಷ್ಟೇ ರುಚಿಯಾಗಿದೆ. ನಿಮ್ಮ ರುಚಿಗೆಟ್ಟ ನಾಲಿಗೆಗೆ ಹೊಸ ನಳಪಾಕವನ್ನು ತಿನ್ನಲು ಬಯಸುತ್ತದೆ. ಮಜ್ಜಿಗೆ ದೋಸೆ ನಿಮಗೆ ಆರೋಗ್ಯವಂತ ಕ್ಯಾಲೋರಿಯನ್ನು ಒದಗಿಸಿ ನಾಲಿಗೆಗೆ ರುಚಿಯನ್ನು ನೀಡುತ್ತದೆ. ಸರಳ ವಿಧಾನದಲ್ಲಿರುವ ಮೊಸರು ದೋಸೆ ರೆಸಿಪಿಯನ್ನು ತಯಾರಿಸಿ ಸವಿಯಲು ಇಲ್ಲಿದೆ ಮಾಡುವ ವಿಧಾನ.
Advertisement
ಬೇಕಾಗುವ ಸಾಮಗ್ರಿಗಳು:
* ಉದ್ದಿನ ಬೇಳೆ – 1 ಕಪ್
* ಅಕ್ಕಿ – 2 ಕಪ್
* ಮೊಸರು – 2 ಕಪ್
* ಅವಲಕ್ಕಿ – 1ಕಪ್
* ರುಚಿಗೆ ತಕ್ಕಷ್ಟು ಉಪ್ಪು
*ಬೆಲ್ಲ – ಸ್ವಲ್ಪ
Advertisement
ಮಾಡುವ ವಿಧಾನ:
* ಮೊದಲಿಗೆ ಅಕ್ಕಿ , ಅವಲಕ್ಕಿ, ಉದ್ದಿನ ಬೇಳೆ 3 ಗಂಟೆಗಳ ನೆನೆಸಬೇಕು ಮತ್ತು ಇದನ್ನು ನುಣ್ಣಗೆ ರುಬ್ಬಿಕೊಳ್ಳಿ.
* ಹಿಟ್ಟಿಗೆ ಮೊಸರು ಮತ್ತು ತುರಿದ ಬೆಲ್ಲ ಹಾಗೂ ಉಪ್ಪನ್ನು ಸೇರಿಸಿ ಹಿಟ್ಟನ್ನು ಹುಳಿ ಬರುವುದಕ್ಕಾಗಿ ಎಂಟು ಗಂಟೆಗಳ ಕಾಲ ಮುಚ್ಚಿಡಿ.ಇದನ್ನೂ ಓದಿ: ನೀವೂ ಮಾಡಿ ಮಶ್ರೂಮ್ ಬಿರಿಯಾನಿ
Advertisement
* ನಂತರ ಕಾವಲಿಯನ್ನು ಬಿಸಿ ಮಾಡಿ ಮತ್ತು ಅದಕ್ಕೆ ಒಂದು ಸ್ಪೂನ್ ಎಣ್ಣೆಯನ್ನು ಹಾಕಿ ದೋಸೆ ಆಕಾರದಲ್ಲಿ ಹುಯ್ಯಿರಿ. ನಂತರ ದೋಸೆಯನ್ನು ಎರಡೂ ಬದಿಗೆ ಸ್ವಲ್ಪ ಎಣ್ಣೆ ಸವರಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
* ಈಗ ಮೊಸರು ದೋಸೆ ಸವಿಯಲು ಸಿದ್ಧವಾಗಿದೆ. ಚಟ್ನಿ ಅಥವಾ ಸಾಂಬಾರ್ ಜೊತೆಗೆ ಮಜ್ಜಿಗೆ ದೋಸೆಗೆ ಉತ್ತಮ ಕಾಂಬಿನೇಷನ್ ಆಗಿದೆ.
Advertisement