ನವದೆಹಲಿ: ನಗರದಲ್ಲಿ ಆದಾಯ ಹೆಚ್ಚಿಸಲು ಹಾಗೂ ಮದ್ಯ ಮಾಫಿಯಾವನ್ನು ತಡೆಗಟ್ಟುವ ಉದ್ದೇಶದಿಂದಾಗಿ ದೆಹಲಿ ಸರ್ಕಾರ 2021-20221ರ ಹೊಸ ಅಬಕಾರಿ ನೀತಿಯನ್ನು ಪ್ರಕಟಿಸಿದೆ.
Advertisement
ರಾಷ್ಟ್ರ ರಾಜಧಾನಿಯಲ್ಲಿ ಮದ್ಯದಂಗಡಿ ಪರವಾನಗಿ ಪಡೆದ ಪರವಾನಗಿದಾರರು ಹೋಟೆಲ್, ಕ್ಲಬ್ ಮತ್ತು ರೆಸ್ಟೋರೆಂಟ್, ಬಾರ್ಗಳಲ್ಲಿ ಬೆಳಗಿನ ಜಾವ 3ಗಂಟೆವರೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ.
Advertisement
Advertisement
ದೆಹಲಿ ಸರ್ಕಾರವು ನಗರದಲ್ಲಿ ವಿಂಗಡಿಸಿರುವ 32 ವಲಯಗಳಲ್ಲಿ ಎಲ್-7ವಿ(ಭಾರತೀಯ ಮತ್ತು ವಿದೇಶಿ ಮದ್ಯ)ಪರವಾನಗಿಗಳಿಗೆ ಟೆಂಡರ್ ನೀಡಿದೆ. ಜೊತೆಗೆ ಮದ್ಯವನ್ನು ಡೋರ್ ಡೆಲಿವರಿ ಕೂಡ ಒದಗಿಸಲಾಗುತ್ತಿದ್ದು, ಈ ಕುರಿತ ಮಾಹಿತಿ ವೆಬ್ಸೈಟ್ಗಳಲ್ಲಿ ಸಿಗಲಿದೆ.
Advertisement
ಅಬಕಾರಿಯ ಈ ಹೊಸ ನೀತಿಯನ್ನು ಜನರಿಗಾಗಿ ಜಾರಿಗೊಳಿಸಲಾಗಿದ್ದು, ಎಲ್-7ವಿ(ಭಾರತೀಯ ಮತ್ತು ವಿದೇಶಿ ಮದ್ಯ) ರೂಪದಲ್ಲಿ ಚಿಲ್ಲರೆ ಮಾರಾಟವನ್ನು ಯಾವುದೇ ಮಾರುಕಟ್ಟೆ, ಮಾಲ್, ಕಮರ್ಷಿಯಲ್ ರೋಡ್ ಮತ್ತು ಏರಿಯಾ, ಸ್ಥಳೀಯ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಇನ್ನಿತರ ರಸ್ತೆಗಳಲ್ಲಿ ತೆರೆಯಬಹುದಾಗಿದೆ. ಇದನ್ನೂ ಓದಿ: ಐಸಿಯುನಲ್ಲಿ ಐಸ್ಕ್ರೀಂ ತಿಂದ ಮಹಿಳೆ ಸಾವು