ಶ್ರೀನಗರ: ಉಗ್ರರಿಗೆ ಶಸ್ತ್ರಾಸ್ತ್ರ ತಲುಪಿಸಲು ಪಾಕಿಸ್ತಾನ ಡ್ರೋನ್ ಬಳಸುತ್ತಿದ್ದು, ಇದೀಗ ಶಸ್ತ್ರಾಸ್ತ್ರ ಸಾಗಿಸುವ ಮತ್ತೊಂದು ಡ್ರೋನ್ ಪತ್ತೆಯಾಗಿದೆ. ಇತ್ತೀಚೆಗಷ್ಟೇ ಇದೇ ರೀತಿಯ ಡ್ರೋನ್ ಸಿಕ್ಕಿತ್ತು.
Two consignments of arms & ammunition have been recovered in Akhnoor sector, around 12 kms away from the border. The weapons were meant to hand over to terrorists in Kashmir valley. Initial probe suggests Jaish-e-Mohammed is behind this: Jammu SSP Shridhar Patil https://t.co/FXAzGvX3cM pic.twitter.com/ykqUYL2x4B
— ANI (@ANI) September 22, 2020
Advertisement
ಈ ಕುರಿತು ಜಮ್ಮು ಕಾಶ್ಮಿರ ಪೊಲೀಸರು ಮಾಹಿತಿ ನೀಡಿದ್ದು, ಕಳೆದ ರಾತ್ರಿ ಅಖ್ನೂರ್ ಗ್ರಾಮದ ಬಳಿ ರೈಫಲ್ಸ್ ಹಾಗೂ ಪಿಸ್ತೂಲುಗಳು ಪತ್ತೆಯಾಗಿವೆ. ಪುಲ್ವಾಮಾ ದಾಳಿ ಸೇರಿದಂತೆ ಪ್ರಮುಖ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ಪಾತ್ರವಿರುವ ಕುರಿತು ಪುರಾವೆಗಳು ಲಭ್ಯವಾಗಿವೆ ಎಂದು ತಿಳಿಸಿದ್ದಾರೆ.
Advertisement
ರಾತ್ರಿ ವೇಳೆ ಪಾಕಿಸ್ತಾನಿ ಡ್ರೋನ್ ಶಸ್ತ್ರಾಸ್ತ್ರಗಳನ್ನು ಬಿಟ್ಟಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಮ್ಮು ಕಾಶ್ಮಿರ ಪೊಲೀಸರು ಆ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಎರಡು ಎಕೆ ರೈಫಲ್ಸ್, ಒಂದು ಪಿಸ್ತೂಲು, ಮೂರು ಎಕೆ ಮ್ಯಾಗಜಿನ್ ಗಳು ಹಾಗೂ 90 ಸುತ್ತು ಗುಂಡುಗಳನ್ನು ಝದ್ ಸೋಹಲ್ ಗ್ರಾಮದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
Police and Army have recovered drone dropped packages in the border area of Akhnoor sector. Two AK-47 assault rifles,
three AK magazines, 90 rounds of live AK 7.62 mm ammunition and one pistol recovered pic.twitter.com/YB01qqbADJ
— ANI (@ANI) September 22, 2020
Advertisement
ಗಡಿಯಿಂದ ಸುಮಾರು 12 ಕಿ.ಮೀ.ದೂರದಲ್ಲಿರುವ ಅಖ್ನೂರಿನಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಎರಡು ಸರಕುಗಳು ಪತ್ತೆಯಾಗಿವೆ. ಈ ಶಸ್ತ್ರಾಸ್ತ್ರಗಳನ್ನು ಕಾಶ್ಮೀರ ಕಣಿವೆಯ ಭಯೋತ್ಪಾದಕರಿಗಾಗಿ ಬಿಟ್ಟಿರಬಹುದು. ಇದರ ಹಿಂದೆ ಜೈಶ್-ಎ-ಮೊಹಮ್ಮದ್ ಕೈವಾಡವಿದೆ ಎಂಬುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಜಮ್ಮುವಿನ ಹಿರಿಯ ಪೊಲೀಸ್ ಅಧಿಕಾರಿ ಶ್ರೀಧರ್ ಪಾಟೀಲ್ ತಿಳಿಸಿದ್ದಾರೆ.
The arms and ammunition airdropped by a Pakistani drone in a village in Akhnoor region, Jammu and Kashmir. pic.twitter.com/1fiDeW30Jc
— ANI (@ANI) September 22, 2020
ಕಳೆದ ವರ್ಷ ಅಕ್ಟೋಬರ್ ನಲ್ಲಿ ಸಹ ಪಂಜಾಬ್ ಗಡಿಯಲ್ಲಿ ಪಾಕಿಸ್ತಾನ ಮೂಲದ ಡ್ರೋನ್ ಪತ್ತೆಯಾಗಿತ್ತು. ಇದಾದ ಬಳಿಕ ಸೇನೆ ತೀವ್ರ ಕಟ್ಟೆಚ್ಚರ ವಹಿಸಿದೆ. ಅಲ್ಲಿಯೂ ಸಹ ಎಕೆ-47 ರೈಫಲ್, ಗ್ರೆನೇಡ್ಗಳು ಹಾಗೂ ಸ್ಯಾಟಲೈಟ್ ಫೋನ್ಗಳನ್ನು ಡ್ರೋನ್ ಮೂಲಕ ಕಳುಹಿಸಲಾಗಿತ್ತು. ಇದನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.