– ಬೆಂಗಳೂರಿನಿಂದಲೇ ಸೇವೆ ಆರಂಭ
– ಮದ್ಯ ಡೆಲಿವರಿ ಸೇವೆ ಆರಂಭಿಸಿದ ಸ್ವಿಗ್ಗಿ, ಝೊಮ್ಯಾಟೊ
ನವದೆಹಲಿ: ಇ-ಕಾಮರ್ಸ್ ಫೇಮಸ್ ಕಂಪನಿ ಅಮೆಜಾನ್ ಇದೀಗ ಫುಡ್ ಡೆಲಿವರಿಗೂ ಲಗ್ಗೆ ಇಟ್ಟಿದ್ದು, ಝೊಮ್ಯಾಟೊ, ಸ್ವಿಗ್ಗಿಯಂತೆ ಹೊಸ ಅಮೆಜಾನ್ ಫುಡ್ ಎಂಬ ಸೇವೆಯನ್ನು ಆರಂಭಿಸಿದೆ. ಬೆಂಗಳೂರಿನಿಂದಲೇ ತನ್ನ ಸೇವೆಯನ್ನು ಪ್ರಾರಂಭ ಮಾಡಿದ್ದು, ಝೊಮ್ಯಾಟೊ, ಸ್ವಿಗ್ಗಿಗೆ ಟಕ್ಕರ್ ಕೊಡಲು ಸಜ್ಜಾಗಿದೆ.
Advertisement
ನಮ್ಮ ಗ್ರಾಹಕರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸುರಕ್ಷತೆಯ ಉನ್ನತ ಮಾನದಂಡಗಳಿಗೆ ಬದ್ಧರಾಗಿದ್ದೇವೆ. ಶುಚಿತ್ವದ ಖಾತ್ರಿಯಿರುವ ರೆಸ್ಟೊರೆಂಟ್ಗಳಿಂದ ಯಾರ ಸಂಪರ್ಕಕ್ಕೂ ಬಾರದಂತೆ ಸುರಕ್ಷಿತವಾಗಿ ಆರ್ಡರ್ ಮಾಡಿದ ಆಹಾರವನ್ನು, ಬೆಂಗಳೂರಿನ ಆಯ್ದ ಪಿನ್ಕೋಡ್ಗಳಲ್ಲಿ ನಾವು ಅಮೆಜಾನ್ ಫುಡ್ ಸೇವೆಯನ್ನು ಪ್ರಾರಂಭಿಸುತ್ತಿದ್ದೇವೆ. ಸ್ಥಳೀಯ ರೆಸ್ಟೋರೆಂಟ್ಗಳಿಂದ ಮತ್ತು ನಮ್ಮ ಉನ್ನತ ನೈರ್ಮಲ್ಯ ಪ್ರಮಾಣೀಕರಣವನ್ನು ದೃಢೀಕರಿಸಿದ ಕ್ಲೌಡ್ ಅಡುಗೆ ಮನೆಗಳಿಂದ ಗ್ರಾಹಕರಿಗೆ ಆಹಾರವನ್ನು ಆರ್ಡರ್ ಮಾಡಲು ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತದೆ ಎಂದು ಅಮೆಜಾನ್ ತನ್ನ ಆ್ಯಪ್ನಲ್ಲಿ ಪ್ರಕಟಿಸಿದೆ.
Advertisement
Advertisement
ಕಳೆದ ಫೆಬ್ರವರಿಯಲ್ಲಿಯೇ ಆರಂಭಿಸಬೇಕಾಗಿದ್ದ ಅಮೆಜಾನ್ ಫುಡ್ ಸೇವೆಯನ್ನು ಕೊರೊನಾ ವೈರಸ್ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಸಾಂಕ್ರಾಮಿಕ ರೋಗದ ಹಿನ್ನೆಲೆ ಆನ್ಲೈನ್ ಡೆಲಿವರಿ ಆ್ಯಪ್ಗಳಾದ ಸ್ವಿಗ್ಗಿ, ಝೊಮ್ಯಾಟೊ, ಬಿಗ್ ಬಾಸ್ಕೆಟ್ ಮತ್ತು ಗ್ರೋಫರ್ಸ್ ನಂತಹ ಇತರ ಸೇವೆಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯ ವಸ್ತುಗಳ ಡೆಲಿವರಿಯಲ್ಲಿ ಬ್ಯುಸಿಯಾಗಿವೆ. ಅಲ್ಲದೇ ಸ್ವಿಗ್ಗಿ ಮತ್ತು ಝೊಮ್ಯಾಟೊ ಜಾರ್ಖಂಡ್ ರಾಜಧಾನಿ ರಾಂಚಿನಲ್ಲಿ ಮದ್ಯ ಮತ್ತು ಮದ್ಯಯುಕ್ತ ಪಾನೀಯಗಳ ಸೇವೆಗಳ ಡೆಲಿವರಿ ಆರಂಭಿಸಿದೆ.
Advertisement
ಮದ್ಯ ಆರ್ಡರ್ ಮಾಡುವ ಗ್ರಾಹಕರು ತಮ್ಮ ವಯಸ್ಸು, ಸರ್ಕಾರ ವಿತರಿಸಿರುವ ಗುರುತಿನ ಪತ್ರ ಮತ್ತು ಸೆಲ್ಫಿಯೊಂದಿಗೆ ದೃಢೀಕರಿಸಬೇಕು. ಸ್ವಿಗ್ಗಿಯಲ್ಲಿ ‘ವೈನ್ ಶಾಪ್ಸ್’ ಎಂಬ ಹೊಸ ಆಪ್ಷನ್ ಅನ್ನು ಹೊಂದಿದ್ದು, ಗ್ರಾಹಕರು ಮನೆಯಿಂದಲೇ ಮದ್ಯವನ್ನು ಆರ್ಡರ್ ಮಾಡಿದರೆ ಡೆಲಿವರಿಯನ್ನು ಮನೆ ಬಾಗಲಿದೆ ತಲುಪಿಸಲಾಗುತ್ತದೆ.
ಸದ್ಯ ಬೆಂಗಳೂರಿನ ಬೆಳ್ಳಂದೂರು, ಹರಳೂರು, ಮಾರತ್ಹಳ್ಳಿ ಮತ್ತು ವೈಟ್ಫೀಲ್ಡ್ ನ ಕೆಲವು ಭಾಗಗಳಲ್ಲಿ ಈ ಸೇವೆಯನ್ನು ಅಮೆಜಾನ್ ಫುಡ್ ಶುರು ಮಾಡಿದೆ. ಕಂಪನಿಯು ತನ್ನ ಆಹಾರ ಸೇವೆಗಳನ್ನು ನಗರದ ಉಳಿದ ಭಾಗಗಳಲ್ಲಿ ವಿಸ್ತರಿಸುವುದೇ ಎಂಬ ಬಗ್ಗೆ ಇನ್ನೂ ಸ್ಪಷ್ಟೀಕರಣ ಸಿಕ್ಕಿಲ್ಲ.