ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹೈಕಮಾಂಡ್ ಷರತ್ತು ವಿಧಿಸಿರುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಜುಲೈ 26ರವರೆಗೆ ಸಣ್ಣ-ಪುಟ್ಟ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಸಿಎಂ ಅಗಿ ಇರುವವರೆಗೆ ಯಾವುದೇ ಮಹತ್ವದ ದೊಡ್ಡ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂಬ ಷರತ್ತು ವಿಧಿಸಿದೆ.
Advertisement
Advertisement
ಷರತ್ತು ಏನು?
ಹಣಕಾಸು ವಿಚಾರವಾಗಿ ದೊಡ್ಡ ನಿರ್ಧಾರ ಕೈಗೊಳ್ಳುವಂತಿಲ್ಲ. ದೊಡ್ಡ ಮಟ್ಟದ ಅನುದಾನಗಳನ್ನು ಬಿಡುಗಡೆ ಮಾಡಬಾರದು. ಇದರ ಜೊತೆ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುವಂತಿಲ್ಲ.
Advertisement
ವಿಶೇಷ ಯೋಜನೆಗಳಿಗೂ ಅನುಮೋದನೆ ನೀಡಬಾರದು ಮತ್ತು ದೊಡ್ಡ ಪ್ರಾಜೆಕ್ಟ್ ಫೈಲ್ಗಳನ್ನು ಯಾವುದೇ ಕಾರಣಕ್ಕೂ ಕ್ಲಿಯರ್ ಮಾಡಬಾರದು.
Advertisement
ಅಧಿಕಾರಿಗಳ ವರ್ಗಾವಣೆಯಲ್ಲೂ ಪ್ರಮುಖ ನಿರ್ಧಾರ ಮಾಡುವಂತಿಲ್ಲ. ಪ್ರಮುಖ ಸ್ಥಳಗಳ ಸ್ಥಾನಗಳಿಗೆ ಅಧಿಕಾರಿಗಳ ನಿಯೋಜನೆ ಮಾಡಬಾರದು. ಮುಖ್ಯವಾಗಿ ಸರ್ಕಾರದ ಮಟ್ಟದಲ್ಲಿ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಇದನ್ನೂ ಓದಿ : ಕನಕದಾಸರ ಏಕಶಿಲಾ ವಿಗ್ರಹಕ್ಕೆ 10 ಕೋಟಿ ನೀಡಿ – ಸಿಎಂಗೆ ಮನವಿ