ನೆಲಮಂಗಲ: ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಅಂಗವಾಗಿ ಮೇಲಣಗವಿ ಮಠದಿಂದ ನಟ ಕಿಚ್ಚ ಸುದೀಪ್ಗೆ ಶಿವಗಂಗಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Advertisement
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಶಿವಗಂಗೆಯ ಮೇಲಣಗವಿ ಮಠದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯಲ್ಲಿ ನಟ ಸುದೀಪ್ ಗೆ ಪ್ರತಿಷ್ಟಿತ ಶಿವಗಂಗಾ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
Advertisement
Advertisement
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ನಟ ಸುದೀಪ್, ಕೊರೊನಾ ಅರಿವು ಮೂಡಿಸಿದರು. ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಮಾರಣಾಂತಿಕ ರೋಗದ ಬಗ್ಗೆ ಅರಿವಿರಲಿ, ಮಾಸ್ಕ್ ಹಾಕಿ ಎಂದು ಅಭಿಮಾನಿಗಳಿಗೆ ಕರೆ ನೀಡಿದರು. ಬಹಳ ತೂಕ ತೆಗೆದುಕೊಂಡು ಮನೆಗೆ ಹೋಗತ್ತಿದ್ದೇನೆ ಈ ಪ್ರಶಸ್ತಿಯಿಂದ ಕುಟುಂಬದ ಬಗ್ಗೆ ಹೆಮ್ಮೆ ಇರಲಿ ಎಲ್ಲರೂ ಅಭಿಮಾನದಿಂದ ಶರಣಾಗೋಣ ಎಂದರು.
Advertisement
ಈ ಬಾರಿ ‘ಶಿವಗಂಗಾ ಶ್ರೀ’ ಪ್ರಶಸ್ತಿಯನ್ನು ಕನ್ನಡ ಚಿತ್ರರಂಗದ ನಟ ಕಿಚ್ಚ ಸುದೀಪ್ ಅವರಿಗೆ ನೀಡುತ್ತಿರುವುದು ಮತ್ತು ಚಿತ್ರರಂಗದಲ್ಲಿ ಅವರು 25 ವರ್ಷ ಸೇವೆಯಲ್ಲಿರುವುದು ಅವರ ಮತ್ತೊಂದು ಸಾಧನೆಯ ಗರಿಯಾಗಿದೆ ಎಂದು ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಲಣಗವಿ ಮಠದ ಶ್ರೀಗಳು, ಕೋವಿಡ್ ಮಧ್ಯೆಯೂ ಸರಳವಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿದ್ದೇವೆ. ಕಳೆದ ಬಾರಿ ಶಿವಗಂಗಾ ಶ್ರೀ ಪ್ರಶಸ್ತಿಗೆ ಭಾಜನರಾದ ಸಾವಯವ ಕೃಷಿ ಸಾಧಕಿ ಕವಿತಾ ಮಿಶ್ರಾ, ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ರನ್ನು ಸನ್ಮಾನಿಸಲಾಯಿತು. ಎಲ್ಲರೂ ಕೊರೊನಾ ಬಗ್ಗೆ ಜಾಗೃತರಾಗಿರಿ ಎಂದು ಶ್ರೀಗಳು ತಿಳಿಸಿದರು.