ಕಳೆದ ವಾರ ದೀಪಾವಳಿ ಸಂಭ್ರಮದಲ್ಲಿ ಸಿಹಿಯೂಟ ಮಾಡಿರುತ್ತೀರಿ. ನಾಳೆ ಭಾನುವಾರ ರಜೆ ಬಾಡೂಟ ಇರಲೇಬೇಕು. ಚಿಕನ್ ನಲ್ಲಿಯೇ ಏನಾದ್ರೂ ವೆರೈಟಿ ಟ್ರೈ ಮಾಡಬೇಕು ಅಂತಾ ಪ್ಲಾನ್ ಮಾಡಿದ್ದೀರಾ ? ಹಾಗಾದ್ರೆ ಕೋಲ್ಕತ್ತಾ ಶೈಲಿಯ ರೇಜನಾ ಚಿಕನ್ ಗ್ರೇವಿ ಮಾಡಿ.
Advertisement
ಬೇಕಾಗುವ ಸಾಮಾಗ್ರಿಗಳು
ಚಿಕನ್ – 1 ಕೆಜಿ
ಮೊಸರು – 1 ಕಪ್
ಬೆಳ್ಳುಳ್ಳಿ, ಶುಂಠಿ ಪೇಸ್ಟ್- 3 ಟೀ ಸ್ಪೂನ್
ಗ್ರೀನ್ ಚಿಲ್ಲಿ ಪೇಸ್ಟ್ – 2 ಟೀ ಸ್ಪೂನ್ (ಮೂರು)
ಪೆಪ್ಪರ್ ಪೌಡರ್- 1/2 ಟೀ ಸ್ಪೂನ್
ಉಪ್ಪು – 2 ಟೀ ಸ್ಪೂನ್
ತುಪ್ಪ- 2 ಟೀ ಸ್ಪೂನ್
ಗಸಗಸೆ- 2 ಟೀ ಸ್ಪೂನ್
ಗೋಡಂಬಿ- 10 ರಿಂದ 12
ಎಣ್ಣೆ- 5 ರಿಂದ 6 ಟೀ ಸ್ಪೂನ್
ಏಲಕ್ಕಿ – 5
ಲವಂಗ – 2
ಕಾಳು ಮೆಣಸು – 5
ಒಣ ಮೆಣಸಿನಕಾಯಿ – 5
ಎರಡು ಈರುಳ್ಳಿ ಪೇಸ್ಟ್
ಕೇವರಾ ವಾಟರ್ – 1 ಟೀ ಸ್ಪೂನ್ (ಬೇಕಿದ್ದಲ್ಲಿ ಮಾತ್ರ ಬಳಸಬಹುದು)
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಮಿಕ್ಸಿಂಗ್ ಬೌಲ್ ನಲ್ಲಿ ಚೆನ್ನಾಗಿ ತೊಳೆದುಕೊಂಡಿರುವ ದೊಡ್ಡ ದೊಡ್ಡ ಪೀಸ್ ಗಳ ಚಿಕನ್ ಹಾಕಿಕೊಳ್ಳಿ
* ಚಿಕನ್ ಹಾಕಿರೋ ಮಿಕ್ಸಿಂಗ್ ಬೌಲ್ ಗೆ ಮೊಸರು, ಬೆಳ್ಳುಳ್ಳಿ-ಪೇಸ್ಟ್, ಗ್ರೀನ್ ಚಿಲ್ಲಿ ಪೇಸ್ಟ್, ಪೆಪ್ಪರ್ ಪೌಡರ್, ಉಪ್ಪು ಮತ್ತು ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತಟ್ಟೆ ಮುಚ್ಚಿ ಎರಡು ಗಂಟೆ ಎತ್ತಿಡಿ. ಮಿಶ್ರಣವೆಲ್ಲ ಚಿಕನ್ ಗೆ ಚೆನ್ನಾಗಿ ಮೆತ್ತಿಕೊಳ್ಳುತ್ತದೆ.
Advertisement
* ಮಿಕ್ಸಿ ಜಾರಿಗೆ ಎರಡು ಟೇಬಲ್ ಸ್ಪೂನ್ ಗಸಗಸೆ ಮತ್ತು 10 ರಿಂದ 12 ಗೋಡಂಬಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬುವಾಗ ಮೂರರಿಂದ ನಾಲ್ಕು ಟೀ ಸ್ಪೂನ್ ನೀರು ಸೇರಿಸಿದ್ರೆ ಪೇಸ್ಟ್ ಚೆನ್ನಾಗಿ ಆಗುತ್ತದೆ.
* ಈಗ ಸ್ಟೌವ್ ಮೇಲೆ ಪ್ಯಾನ್ ಇರಿಸಿ 5 ರಿಂದ 6 ಟೀ ಸ್ಪೂನ್ ಎಣ್ಣೆ ಹಾಕಿ. (ಎಣ್ಣೆ ಬದಲಾಗಿ ತುಪ್ಪ ಬಳಸಬಹುದು)
* ಎಣ್ಣೆ ಬಿಸಿ ಆಗುತ್ತಿದ್ದಂತೆ ಏಲಕ್ಕಿ, ಲವಂಗ, ಒಣ ಮೆಣಸಿನಕಾಯಿ ಮತ್ತು ಕಾಳು ಮೆಣಸು ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.
* ಇದೇ ಪ್ಯಾನ್ ಗೆ ಈರುಳ್ಳಿ ಪೇಸ್ಟ್ ಮಿಕ್ಸ್ ಮಾಡಿ, ಹಸಿ ವಾಸನೆ ಹೋಗುವರೆಗೂ 8 ರಿಂದ 10 ನಿಮಿಷ ಫ್ರೈ ಮಾಡಿಕೊಳ್ಳಬೇಕು.
* ಮಸಾಲೆ ಘಮ ಘಮ ಎಂದು ಬರುತ್ತಿದ್ದಂತೆ ಮಿಶ್ರಣದಲ್ಲಿರುವ ಚಿಕನ್ ಪೀಸ್ ಗಳನ್ನು ಒಂದೊಂದಾಗಿ ಹಾಕಿ ಪ್ಲಿಪ್ ಮಾಡುತ್ತಿರಬೇಕು.
* ಚಿಕನ್ ಹಾಕಿದ ನಂತರ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿದ ನಂತರ ಈ ಮೊದಲು ರುಬ್ಬಿಟ್ಟಿಕೊಂಡಿರುವ ಗೋಡಂಬಿ ಮತ್ತು ಗಸಗಸೆ ಪೇಸ್ಟ್ ಹಾಕಿ ಕಲಕಿ.
* ನಂತರ 1 ಕಪ್ ನಷ್ಟು ನೀರು ಹಾಕಿ 10 ರಿಂದ 12 ನಿಮಿಷ ಕುದಿಸಿದ್ರೆ ಕೇವರಾ ವಾಟರ್ ಬೆರಸಿದ್ರೆ ಕೋಲ್ಕತ್ತಾ ಶೈಲಿಯ ರೇಜಲಾ ಚಿಕನ್ ಗ್ರೇವಿ ಸವಿಯಲು ಸಿದ್ಧ.