ನವದೆಹಲಿ: ಬೇರೆ ಕಡೆಯಲ್ಲಿ ಸಾಲ ಪಡೆಯುವ ಉದ್ದೇಶದಿಂದ ಬ್ಯಾಂಕಿನಲ್ಲಿ ಅಡಮಾನ ಇಟ್ಟಿರುವ ಕಂಪನಿ ಶೇರುಗಳನ್ನು ಮಾರಾಟ ಮಾಡಿ 24.13 ಕೋಟಿ ಹಣವನ್ನು ಬ್ಯಾಂಕಿಗೆ ವಂಚಿಸಿರುವ ಘಟನೆ ನಡೆದಿದೆ.
ಆರೋಪಿಯನ್ನು ದೆಹಲಿಯ ಪಿತಾಂಪುರ ನಿವಾಸಿ ಪ್ರದೀಪ್ ಕುಮಾರ್ ಮಿತ್ತಲ್ (46) ಎಂದು ಗುರುತಿಸಲಾಗಿದೆ. 2013 ರಲ್ಲಿ ಆರೋಪಿ ಕಂಪನಿಗಾಗಿ 24.13 ಕೋಟಿ ಮೌಲ್ಯದ ಸಾಲವನ್ನು ಬ್ಯಾಂಕ್ನಿಂದ ಪಡೆದಿದ್ದಾನೆ. ತನ್ನ ಕಾರ್ಖಾನೆಯ ಆವರಣದಲ್ಲಿರುವ ಕಚ್ಚಾ ವಸ್ತುಗಳು, ಅರೆ ಸುಸಜ್ಜಿತ ಮತ್ತು ಅಪೂರ್ಣ ಸರಕುಗಳನ್ನು ಅಡಮಾನ ಇಡುವ ಮೂಲಕವಾಗಿ ಸಾಲ ಪಡೆದುಕೊಂಡಿದ್ದಾನೆ.
Advertisement
Advertisement
ಶೇರುಗಳು ಮತ್ತು ಕೆಲವಷ್ಟು ದಾಖಲೆಗಳನ್ನು ಬ್ಯಾಂಕ್ಗೆ ಸಲ್ಲಿಸಲು ಮಿತ್ತಲ್ ಒಪ್ಪಿಕೊಂಡಿದ್ದನು. ಆದರೆ ದಾಖಲೆ ನೀಡುವಲ್ಲಿ ವಿಫಲನಾದನು. 2018 ಮೋಸದ ದೂರಿನ ಮೇರೆಗೆ ಆರೋಪಿಯ ಕಂಪನಿ ವಿರುದ್ಧ ತನಿಖೆ ಆರಂಭಿಸಲಾಗಿತ್ತು.
Advertisement
ದಾಖಲೆಗಳನ್ನು ಪರಿಶೀಲನೆಗೆ ಬಂದಾಗ ಕಾರ್ಖಾನೆಯ ಆವರಣದಲ್ಲಿ ಬಹಳ ಕಡಿಮೆ ಸ್ಟಾಕ್ ಕಂಡುಬಂದಿದೆ. ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ ಎಂದು ಬ್ಯಾಂಕ್ ಆರೋಪಿಸಿದೆ.
Advertisement
ನಂತರ ಕಂಪನಿಯಲ್ಲಿ ಪರಿಶೀಲನೆ ನಡೆಸಿದಾಗ 12-15 ಲಕ್ಷ ಸ್ಟಾಕ್ ಅಷ್ಟೇ ಉಳಿದಿದೆ ಎಂದು ತಿಳಿದುಬಂದಿದೆ. ಆಪಾದಿತ ಕಂಪನಿಯ ನಿರ್ದೇಶಕರು ಅಡಮಾನ ಇಟ್ಟಿರುವ ಸ್ಟಾಕ್ ಅನ್ನು ಮಾರಾಟಮಾಡಿ ಬ್ಯಾಂಕಿಗೆ ವಂಚಿಸಿರುವುದು ತಿಳಿದು ಬಂದಿದೆ. ಕೊನೆಯ ಸ್ಟಾಕ್ ಹೇಳಿಕೆಯನ್ನು 2014 ರಲ್ಲಿ ಬ್ಯಾಂಕಿಗೆ ಸಲ್ಲಿಸಲಾಗಿದೆ. ಕಂಪನಿಯಲ್ಲಿ 11.43 ಕೋಟಿ ಇತ್ತು ಎಂದು ತನಿಖೆಯ ಸಮಯದಲ್ಲಿ ಮಿತ್ತಲ್ ಕಂಪನಿಯನ್ನು ನೋಡಿಕೊಳ್ಳುತ್ತಿರುವ ಪ್ರಮುಖ ವ್ಯಕ್ತಿ ಎಂದು ತಿಳಿದುಬಂದಿದೆ.
ಕಂಪನಿಯ ನಿರ್ದೇಶಕರು 2013 ಕಚ್ಚಾ ವಸ್ತುಗಳು, ಅರೆ ಸಿದ್ಧಪಡಿಸಿದ ಸರಕುಗಳು, ಸಾಗಣೆಯಲ್ಲಿನ ಸರಕುಗಳನ್ನು ಅಡಮಾನ ಇಟ್ಟಿದ್ದಾರೆ. ಕೆಲವು ಆಸ್ತಿಗಳನ್ನು ಮೇಲಾಧಾರವಾಗಿ ಅಡಮಾನ ಇಟ್ಟು ಬ್ಯಾಂಕಿನಿಂದ ಸಾಲ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಒಪಿ ಮಿಶ್ರಾ ಹೇಳಿದ್ದಾರೆ.
ಬ್ಯಾಂಕ್ಗೆ ವಂಚನೆ ಮಾಡಿರುವ ಆರೋಪದ ಮೇಲೆ ಕಂಪನಿಯ ನಿರ್ದೇಶಕನಾದ ಪ್ರದೀಪ್ ಕುಮಾರ್ ಮಿತ್ತಲ್ನನ್ನು ಬಂಧಿಸಲಾಗಿತ್ತು. ನಂತರ ನಗರ ನ್ಯಾಯಾಲಯದ ಆದೇಶದಂತೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.