ಉಡುಪಿ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಮುಂದುವರೆದಿದೆ. ಕಳೆದ ಐದು ದಿನಗಳಿಂದ ಮಳೆಯಾಗುತ್ತಿದ್ದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ನಾಲ್ಕು ದಿಮ ವಿಸ್ತರಣೆ ಮಾಡಲಾಗಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗಲಿದೆ. ದಿನಕ್ಕೆ 100 ಮಿಲಿಮೀಟರ್ ಗೂ ಹೆಚ್ಚು ಮಳೆ ಬೀಳಲಿದ್ದು, ಆರೆಂಜ್ ಅಲರ್ಟ್ ವಿಸ್ತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸರಾಸರಿ 28 ಮಿಲಿ ಮೀಟರ್ ಮಳೆಯಾಗಿದೆ. ಏಳು ತಾಲೂಕಿನಲ್ಲಿ ಒಟ್ಟು 21 ಮನೆಗಳಿಗೆ ಹಾನಿಯಾಗಿದೆ. ಮೋಡ ಮುಸುಕಿದ ವಾತಾವರಣ ಮುಂದುವರೆದಿದೆ. ಗಾಳಿ ಜೊತೆ ಮಳೆ ಇನ್ನೂ ಒಂದು ವಾರ ಮುಂದುವರಿಯಲಿದೆ. ಉಡುಪಿ ಜಿಲ್ಲೆಯ ನಾಲ್ಕು ತಾಲೂಕಿನಲ್ಲಿ ಎರಡು ದಿನ ನಾಡದೋಣಿ ಮೀನುಗಾರಿಕೆ ಸ್ಥಗಿತ ಮಾಡಲಾಗಿದೆ.
Advertisement
Advertisement
ನದಿ ಸಮುದ್ರ ತೀರದಲ್ಲಿ ಜಿಲ್ಲಾಡಳಿತದಿಂದ ಕಟ್ಟೆಚ್ಚರ ರವಾನೆ ಮಾಡಿದ್ದು, ತೀರದ ಜನ ಮುಂಜಾಗೃತೆ ವಹಿಸಬೇಕು. ಅಪಾಯದ ಸಂದರ್ಭದಲ್ಲಿ ಎತ್ತರ ಪ್ರದೇಶಗಳಿಗೆ ಬರಬೇಕು ಎಂದು ಸೂಚನೆ ನೀಡಲಾಗಿದೆ. ಪ್ರವಾಸಿಗರು ನದಿ ಸಮುದ್ರ ತೀರಕ್ಕೆ ಬರಬಾರದು ಎಂದು ಜಿಲ್ಲಾಡಳಿತ ವಿನಂತಿಸಿದೆ.
Advertisement
ವಿಶಾಲ ಗಾಣಿಗ ಮರ್ಡರ್ ಕೇಸ್- ಪೊಲೀಸರ ನಾಲ್ಕು ತಂಡ ರಚನೆhttps://t.co/vFUyom2wnn#udupi #Woman #KannadaNews
— PublicTV (@publictvnews) July 13, 2021