ಬಿಗ್ಬಾಸ್ ಮನೆಯಲ್ಲಿ ಒಬ್ಬೊರಿಗೊಬ್ಬರು ಜಗಳ ಮಾಡಿಕೊಂಡು ಮಾತುಬಿಟ್ಟಿದ್ದ ಅರವಿಂದ್ ಮತ್ತು ನಿಧಿ ಸುಬ್ಬಯ್ಯ ಅವರಿಗೆ ವಾರದ ಕಥೆ ಕಿಚ್ಚನ ಜೊತೆ ವಿಕೇಂಡ್ ಎಪಿಸೋಡ್ನಲ್ಲಿ ಸುದೀಪ್ ಅರವಿಂದ್ಗೆ ಕಥೆ ಮೂಲಕ ತಮ್ಮ ತಪ್ಪನು ತಿಳಿಸಿಕೊಟ್ಟಿದ್ದಾರೆ.
Advertisement
ಅರವಿಂದ್ ಅವರಿಗೆ ಒಂದು ಕಥೆ ಹೇಳುತ್ತೇನೆ ಎಂದು ಮಾತು ಪ್ರಾರಂಭಿಸಿದ ಕಿಚ್ಚ, ಕಥೆ ಹೇಳುವ ಮೊದಲು ಒಂದು ಸನ್ನಿವೇಶ ಅರವಿಂದ್ ನಿಮಗೆ ತಿಳಿಸಿಕೊಡುತ್ತೇನೆ, ಮಂಜು ಅವರು ಅಡುಗೆ ಮನೆಯಲ್ಲಿದ್ದರು ಈ ವೇಳೆ ನಿಮ್ಮಲ್ಲಿ ಮಾತುಕತೆ ಆಗುತ್ತಿತ್ತು ಈ ಸಂದರ್ಭ ನೀವು ಮಂಜು ಅವರಿಗೆ ಒಂದು ಸಲಹೆ ನೀಡುತ್ತೀರಿ ಮಂಜು ನೀನು ಕ್ಯಾರೆಕ್ಟರ್ ಬಗ್ಗೆ ಮಾತನಾಡಬಾರದಿತ್ತು ಅಲ್ಲಿ ತಪ್ಪು ಮಾಡಿದ್ದೆ ಎಂದು ತಿಳಿಸಿದಾಗ ನಿಧಿ ಕೂಡ ಹೌದು ನಾವು ಮಾತನಾಡಿದ್ವಿ ಎಂದು ಅರವಿಂದ್ ಮತ್ತು ನಿಧಿ ಒಪ್ಪಿಕೊಂಡರು.
Advertisement
Advertisement
ನಾನು ಒಂದು ಶೂಟಿಂಗ್ಗೆ ಹೋಗಿದ್ದೆ ಆ ಸಂದರ್ಭ ಪರಿಚಯದವರೊಬ್ಬರು ಮಾತುಕತೆ ನಡೆಸುತ್ತಿರುವಾಗ ನನಗೆ ನೀನು ಮುಚ್ಚುಕೊಂಡು ಇರಿ ಎಂದು ಹೇಳಿದರು. ಆಗ ನನ್ನ ಪಕ್ಕ ಇದ್ದ ಸೆಕ್ಯೂರಿಟಿ ಅವರು ಏನು ಹೇಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು. ಆಗ ನಾನು ಗೌರವ ಪೂರಕವಾಗಿ ಹೀಗೆ ಹೇಳಿದ್ದು ಎಂದರು. ನಂತರ ಸೆಕ್ಯೂರಿಟಿ ಅವರು ಒಂದು ಬಾರಿಸಿದರು. ಆಗ ನಾನು ಏನ್ ಮಾಡಿದ್ದೆ ಎಂದು ಕೇಳಿದೆ. ಆಗ ಸೆಕ್ಯೂರಿಟಿ ಅವರು ನಾನು ಗೌರವ ಪೂರಕವಾಗಿ ವಾಪಸ್ ಕೊಟ್ಟೆ ಎಂದು ಸುದೀಪ್ ಅವರು ಕಥೆ ಮುಗಿಸಿದರು.
Advertisement
ಅರವಿಂದ್ ಮತ್ತು ನಿಧಿ ನೀವು ಹೇಳಿಕೊಟ್ಟ ಪಾಠವನ್ನು ನೀವೇ ಮರೆತಿದ್ದೀರಿ. ಅರವಿಂದ್ ಬೈಕ್ ರೇಸ್ನಲ್ಲಿ ಭಾರತವನ್ನು ಪ್ರತಿನಿಧಿಸುವವರು ಅವರಿಗೆ ನೀನು ಪ್ರಶಸ್ತಿ ಪಡೆದು ತೋರಿಸು ಎಂದು ಹೇಳಿದ್ದು ಸರಿಯಲ್ಲ. ನಿಧಿ ಅವರು ನಿಮ್ಮ ಕ್ಷೇತ್ರದಲ್ಲಿ ನೀವು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿಲ್ಲ ಹೀಗಿದ್ದಾಗ. ಆ ರೀತಿ ಹೇಳಬಾರದಿತ್ತು. ಅರವಿಂದ್ ನೀವು ಕೂಡ ಆ ರೀತಿ ಹೇಳಬಾರದು ನೀವಿಬ್ಬರು ಕೂಡ ನಿಮ್ಮ, ನಿಮ್ಮ ಕ್ಷೇತ್ರದಲ್ಲಿ ಮುಖ್ಯಸ್ಥರೆ. ನೀವಿಬ್ಬರು ಕೂಡ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದೀರಿ ಇದು ನಮಗೆ ಹೆಮ್ಮೆ ಇದೆ ನೀವಿಬ್ಬರು ಕೂಡ ನೇರವಾಗಿ ಮಾತನಾಡುವುದರಿಂದಾಗಿ ಈ ರೀತಿಯ ತಪ್ಪಾಗಿದೆ. ಹಾಗಾಗಿ ಇಬ್ಬರೂ ಕೂಡ ನಿಮ್ಮ ತಪ್ಪುಗಳನ್ನು ತಿಳಿದುಕೊಂಡು ಮಾತನಾಡಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಮೊದಲ ಮಹಿಳಾ ಕ್ಯಾಪ್ಟನ್ ಡಿಯುಗೆ ಫುಲ್ ಸರ್ಪ್ರೈಸ್
ಸುದೀಪ್ ಅವರು ನೀಡಿದ ಸಲಹೆಯನ್ನು ಪಡೆದುಕೊಂಡ ಅರವಿಂದ್ ಮತ್ತು ನಿಧಿ ಅವರು ಒಬ್ಬರಿಗೊಬ್ಬರು ಕ್ಷಮೆ ಕೇಳುತ್ತಾ ಮತ್ತೆ ಮಾತನಾಡಲು ಪ್ರಾರಂಭಿಸಿದ್ದಾರೆ.