ಕಿರುತೆರೆಯ ಅತೀ ಶೋ ‘ಬಿಗ್ ಬಾಸ್ ಕನ್ನಡ 11’ಕ್ಕೆ (Bigg Boss Kannada 11) ತೆರೆಬಿದ್ದಿದೆ. ಹನುಮಂತ ಲಮಾಣಿ (Hanumantha) ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಹನುಮಂತನ ಯಶಸ್ಸಿನ ಬಗ್ಗೆ ಝೀ ಕನ್ನಡ ವಾಹಿನಿ ಅಭಿನಂದನೆ ತಿಳಿಸಿದೆ. ಇದನ್ನೂ ಓದಿ:ಎಷ್ಟೇ ಕುತಂತ್ರ ಮಾಡಿದ್ರು ಮೇಲೊಬ್ಬ ನೋಡ್ತಿದ್ದಾನೆ- ಪವಿತ್ರಾ ಗೌಡ ಟಾಂಗ್ ಕೊಟ್ಟಿದ್ಯಾರಿಗೆ?
ಪ್ರೀತಿಯ ಹನುಮಂತ, ನಮ್ಮ ಸರಿಗಮಪ ವೇದಿಕೆಗೆ ಈ ಅದಮ್ಯ ಪ್ರತಿಭೆಯನ್ನು ಹುಡುಕಿ, ಬೆಳಕಿಗೆ ತಂದ ಜೀ ಕನ್ನಡಕ್ಕೆ ನಿಮ್ಮ ಬಗ್ಗೆ ಹೆಮ್ಮೆ ಇದೆ. ನಿಮ್ಮ ಗೆಲುವಿಗೆ ನಮ್ಮ ಅಭಿನಂದನೆಗಳು. ನಿಮ್ಮಂಥ ನೆಲಮೂಲದ ಪ್ರತಿಭೆಯನ್ನು ಹುಡುಕಿ, ಬೆಳಕಿಗೆ ತಂದ ಜೀ ಕನ್ನಡ ನಿಮ್ಮ ಗೆಲುವನ್ನು ಸಂಭ್ರಮಿಸುತ್ತದೆ. ಹನುಮಂತ ಅವರೇ ನಿಮ್ಮ ಗೆಲುವಿಗೆ ಹಾರ್ದಿಕ ಅಭಿನಂದನೆಗಳು ಎಂದು ಝೀ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಶುಭಕೋರಿ ಪೋಸ್ಟ್ ಮಾಡಿದ್ದಾರೆ.
View this post on Instagram
Zee ಕನ್ನಡ ಕುಟುಂಬಕ್ಕೆ ನಿಮ್ಮ ಹನುಮಂತನಿಂದ ತುಂಬು ಹೃದಯಪೂರ್ವಕವಾದ ಧನ್ಯವಾದಗಳು. ಈ ನಿಮ್ಮ ಪ್ರೀತಿ ಪ್ರೋತ್ಸಾಹ ಆಶೀರ್ವಾದದಿಂದ ನಾನು ಇಲ್ಲಿಯವರೆಗೆ ಬೆಳೆಯಲು ಸಾಧ್ಯವಾಯಿತು. ನಿಮ್ಮ ಈ ಪ್ರೀತಿ ಬೆಂಬಲಕ್ಕೆ ನಾನು ಎಂದೆಂದಿಗೂ ಚಿರಋಣಿಯಾಗಿರುತ್ತೇನೆ. ತುಂಬು ಹೃದಯದ ಧನ್ಯವಾದಗಳು ಎಂದು ಹನುಮಂತ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಈ ಹಿಂದೆ 2019ರಲ್ಲಿ ಝೀ ವಾಹಿನಿಯ ‘ಸರಿಗಮಪ ಸೀಸನ್ 15’ರಲ್ಲಿ ಗಾಯನ ಮೂಲಕ ಹನುಮಂತ ಗುರುತಿಸಿಕೊಂಡರು. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಭಗವಹಿಸಿದ್ದರು. ಇದೀಗ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಕನ್ನಡ 11ಕ್ಕೆ ಬಂದಿದ್ದ ಹನುಮಂತ ಶೋ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. 5 ಕೋಟಿಗೂ ಅಧಿಕ ವೋಟ್ ಪಡೆದುಕೊಂಡಿದ್ದಾರೆ.