ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ: ಅಫ್ಘಾನಿಸ್ತಾನದ ಮಹಿಳಾ ಮೇಯರ್

Public TV
3 Min Read
mayor zarifa

ಕಾಬೂಲ್: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ ಎಂದು ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಜರಿಫಾ ಗಫಾರಿ ಆತಂಕವನ್ನು ಕ್ಯಕ್ತಪಡಿಸಿದ್ದಾರೆ.

ಜರಿಫಾ ಗಫಾರಿ ತನ್ನ 27ನೇ ವಯಸ್ಸಿನಲ್ಲಿ ಮೇಯರ್ ಹುದ್ದೆಗೇರಿ ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಎನ್ನುವ ಖ್ಯಾತಿಗೆ ಪಾತ್ರರಾದವರು. 2018ರಲ್ಲಿ ಮೇಯರ್ ಗಾದಿಗೆ ಏರಿದ್ದ ಜರಿಫಾ ತನ್ನ ದೇಶದ ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದವರು.

TERROR

ಕೆಲ ವಾರಗಳ ಹಿಂದೆ ತಾಲಿಬಾನ್ ದೇಶದ ಜಿಲ್ಲೆಗಳನ್ನು ವಶಪಡಿಸಿಕೊಳ್ಳುವುದರಲ್ಲಿ ತೊಡಗಿದ್ದಾಗಲೂ ಅವರು ಆಶಾಭಾವವನ್ನು ಹೊಂದಿದ್ದರು. ಆಫ್ಘನ್ ಸೇನೆ ತಾಲಿಬಾನ್ ಅನ್ನು ಹಿಮ್ಮೆಟ್ಟಿಸಲಿದೆ ಎಂದೇ ನಂಬಿದ್ದರು. ಕೇವಲ ಎರಡೇ ವಾರಗಳ ಅವಧಿಯಲ್ಲಿ ಅವರ ಆಶಾಗೋಪುರ ಕುಸಿದು ಧರಾಶಾಯಿಯಾಗಿದೆ. ಈ ಸಮಯದಲ್ಲಿ ಅವರು ಮಾಧ್ಯಮಕ್ಕೆ ನೀಡಿರುವ ಸಂದರ್ಶನ ಅಫ್ಘಾನಿಸ್ತಾನದಲ್ಲಿ ಮುಂಬರಲಿರುವ ಭೀಕರ ಕ್ಷಣಗಳಿಗೆ ಕೈಗನ್ನಡಿ ಹಿಡಿದಂತಿದೆ. ಇದನ್ನೂ ಓದಿ: ತಾಲಿಬಾನ್ ಉಗ್ರರ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ, ಇರಾನ್ ಬೆಂಬಲ

Taliban Occupy Afghan Presidential Palace afghanistan

ತಾಲಿಬಾನಿಗಳು ನಾನಿರುವಲ್ಲಿಗೇ ಬಂದು ನನ್ನನ್ನು ಕೊಲ್ಲುವುದನ್ನೇ ಎದುರು ನೋಡುತ್ತಿದ್ದೇನೆ. ಏಕೆಂದರೆ ತಾಲಿಬಾನಿಗಳ ಕಣ್ಣು ಮೊದಲು ಬೀಳುವುದೇ ನನ್ನಂಥವಳ ಮೇಲೆ. ತಾಲಿಬಾನಿಗಳ ರಾಜ್ಯದಲ್ಲಿ ಶಿಕ್ಷೆಗೆ ಒಳಗಾಗಲು ದೇಶದ್ರೋಹದ ಕೆಲಸವನ್ನೇ ಮಾಡಬೇಕೆಂದಿಲ್ಲ. ಇಲ್ಲಿ ಹೆಣ್ಣಾಗಿ ಹುಟ್ಟಿದರೆ ಸಾಕು. ನನ್ನನ್ನಾಗಲಿ ನನ್ನ ಕುಟುಂಬವನ್ನಾಗಲಿ ರಕ್ಷಣೆ ಮಾಡಲು ಯಾರೂ ಇಲ್ಲ. ನನ್ನ ಸಹಾಯಕ್ಕೆ ಯಾರೂ ಬಾರರು. ಅದು ನನಗೆ ಚೆನ್ನಾಗಿ ಗೊತ್ತಿದೆ. ಹಾಗೆಂದು ನಾನು ಓಡಿಹೋಗಲು ಆಗುವುದಿಲ್ಲ. ಓಡಿ ಹೋದರೂ ಎಲ್ಲಿಗೇ ಎಂದು ಓಡಲಿ. ಎಲ್ಲೆಡೆ ಅವರೇ ತುಂಬಿಕೊಂಡಿರುವಾಗ ಎಲ್ಲಿ ಅವಿತುಕೊಳ್ಳಲಿ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಗ್ರರಿಗೆ ಆಟ, ಮಹಿಳೆಯರಿಗೆ ಪ್ರಾಣ ಸಂಕಟ – ಷರಿಯತ್ ಏನು ಹೇಳುತ್ತದೆ? ತಾಲಿಬಾನ್ ಕಾನೂನು ಏನು?

talibanies amusement park

ದನಿಯೆತ್ತರಿಸಿ ಮಾತನಾಡುವ, ರಾಜಕೀಯದಲ್ಲಿ ಉನ್ನತ ಹುದ್ದೆಗೇರಿರುವ ಹೆಣ್ನನ್ನು ತಾಲಿಬಾನಿಗಳು ಎಂದಿಗೂ ಉಳಿಸುವುದಿಲ್ಲ. ನನ್ನ ಸೇನೆಯಲ್ಲಿ ಜನರಲ್ ಹುದ್ದೆಯ ಅಧಿಕಾರಿಯಾಗಿದ್ದವರು. ಅವರನ್ನು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಇದುವರೆಗೂ ನನ್ನ ಮೇಲೆ ಮೂರು ಬಾರಿ ಕೊಲೆ ಯತ್ನಗಳು ನಡೆದಿವೆ. ಪ್ರಜಾಪ್ರಭುತ್ವ ಸರ್ಕಾರ ಇದ್ದ ಸಮಯದಲ್ಲೇ ತಾಲಿಬಾನಿಗಳು ಅವರ ಕಡೆಯವರಿಮ್ದ ನನ್ನನ್ನು ಕೊಲ್ಲಲು ಶತಪ್ರಯತ್ನ ನಡೆಸಿದ್ದರು. ಈ ಬಾರಿ ಅವರದೇ ಸರ್ಕಾರ ಬರುತ್ತಿದೆ. ರಾಜಧಾನಿಗೆ ತಾಲಿಬಾನ್ ಮುತ್ತಿಗೆ ಹಾಕುತ್ತಿದ್ದಂತೆಯೇ ಸರ್ಕಾರ ಹಾಗೂ ಸೇನೆಯ ಉನ್ನತ ಮಟ್ಟದ ಅಧಿಕಾರಿಗಳು ಮುಳುಗುತ್ತಿದ್ದ ಹಡಗನ್ನು ತ್ಯಜಿಸಿದಂತೆ ಸುರಕ್ಷಿತ ಸ್ಥಳಗಳಿಗೆ ತಪ್ಪಿಸಿಕೊಂಡು ಹೋದರು. ಆದರೆ ನನ್ನಂಥವರಿಗೆ ಬೇರೆಲ್ಲೂ ಹೋಗಿ ಅವಿತುಕೊಳ್ಳುವ ಶಕ್ತಿ ಇಲ್ಲ. ಇದನ್ನೂ ಓದಿ: ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಕ್ಕಳಂತೆ ಆಟವಾಡಿದ ತಾಲಿಬಾನಿಗಳು

afghan women 3

ಅಫ್ಘಾನಿಸ್ತಾನಕ್ಕೆ ತಾಲಿಬಾನ್ ಬಂಡುಕೋರರು ನುಗ್ಗಿ ದಾಂಧಲೆ ಶುರುವಿಟ್ಟುಕೊಂಡ ಸಂದರ್ಭದಲ್ಲಿ ದೇಶದ ವಿವಿಧ ಪ್ರಾಂತ್ಯಗಳಿಂದ ಜನರು ವಲಸೆ ಬಂದಿದ್ದು ರಾಜಧಾನಿ ಕಾಬೂಲಿಗೆ. ದೇಶದ ಯಾವುದೇ ಮೂಲೆಯಲ್ಲಿ ತಾಲಿಬಾನಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಇಡೀ ದೇಶ ಅವರ ತೆಕ್ಕೆಗೆ ಜಾರುವುದಿಲ್ಲ ಎನ್ನುವ ಒಂದೇ ಒಂದು ನಂಬಿಕೆಯಿಂದ ಅವರು ಕಾಬೂಲಿಗೆ ಬಂದಿದ್ದರು. ಅವರು ಕಾಬೂಲಿನ ಬೀದಿಗಳಲ್ಲಿ ಕುಟುಂಬ ಸಹಿತ ಬಿಡಾರ ಹೂಡಿದ್ದರು. ಇದನ್ನೂ ಓದಿ: ಅಫ್ಘಾನ್ ಸೇನೆ ಹೋರಾಟ ಮಾಡದೇ ಇರುವಾಗ ನಮ್ಮವರು ಬಲಿಯಾಗುವುದರಲ್ಲಿ ಅರ್ಥವಿಲ್ಲ : ಬೈಡನ್

afghan women 2

ಅವರೆಲ್ಲರ ಪ್ರಾರ್ಥನೆ ಅಲ್ಲಾಹ್ ಕಿವಿ ಮುಟ್ಟಿಲ್ಲ. ದೇಶ ತಾಲಿಬಾನ್ ತೆಕ್ಕೆಗೆ ಜಾರಿದೆ. ಕಾಬೂಲಿನ ಬೀದಿಗಳಲ್ಲಿ ನೆಲೆನಿಂತಿರುವ ಮಂದಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತಮ್ಮ ಊರುಗಳಿಗೆ ಮರಳುತ್ತಾರೆ. ತಾಲಿಬಾನಿ ರಾಜ್ಯಭಾರಕ್ಕೆ ತಲೆಬಾಗುತ್ತಾರೆ. ಇಲ್ಲವೇ ಅವರ ವಿರೋಧ ಕಟ್ಟಿಕೊಂಡು ಮಸಣ ಸೇರುತ್ತಾರೆ. ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ನಮ್ಮ ಆಡಳಿತದಲ್ಲಿ ಯಾವುದೇ ಅಪಾಯ ಒದಗುವುದಿಲ್ಲ ಎಂದು ತಾಲಿಬಾನ್ ಹೇಳಿದೆ ಎಂಬುದೇನೋ ನಿಜ. ಆದರೆ ಈವರೆಗಿನ ವಿದ್ಯಮಾನಗಳನ್ನು ಗಮನಿಸಿದರೆ ತಾಲಿಬಾನ್ ತನ್ನ ಯಾವ ಮಾತನ್ನು ಪಾಲಿಸಿದೆ ಎನ್ನುವುದರ ಲೆಕ್ಕ ಸಿಗುವುದಿಲ್ಲ. ಇದನ್ನೂ ಓದಿ: ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ಸರ್ಕಾರದ ನೆರವು

afghan women 1

ಅಫ್ಘಾನ್ ಸರ್ಕಾರ ಮತ್ತು ಸೇನೆ ಜೊತೆ ಕೆಲಸ ನಿರ್ವಹಿಸಿದವರಿಗೆ ಕ್ಷಮೆ ನೀಡಲಾಗುವುದು ಎಂದು ತಾಲಿಬಾನ್ ತಿಳಿಸಿದೆ. ಆದರೆ ಇನ್ನೊಂದೆಡೆ ಈಗಾಗಲೇ ತಾಲಿಬಾನ್ ತನ್ನ ವಿರೋಧಿಗಳನ್ನು ಮಟ್ಟ ಹಾಕುವ ಸಲುವಾಗಿ ಮಾರಣಹೋಮ ಶುರು ಮಾಡಿದೆ ಎನ್ನುವ ವರದಿಗಳು ಕೇಳಿಬರುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *