InternationalLatestMain Post

ಉಗ್ರರಿಗೆ ಆಟ, ಮಹಿಳೆಯರಿಗೆ ಪ್ರಾಣ ಸಂಕಟ – ಷರಿಯತ್ ಏನು ಹೇಳುತ್ತದೆ? ತಾಲಿಬಾನ್ ಕಾನೂನು ಏನು?

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಕೊಂಡ ಬೆನ್ನಲ್ಲೇ ಅಲ್ಲಿನ ಜನ ಭಯಗೊಂಡಿದ್ದಾರೆ. ಅದರಲ್ಲೂ ಮಹಿಳೆಯರು ಸಿಕ್ಕಾಪಟ್ಟೆ ಭಯಗೊಂಡಿದ್ದು ಅವರ ಬಗ್ಗೆ ಈಗಾಗಲೇ ವಿಶ್ವಾದ್ಯಂತ #AfganistanWomen ಹೆಸರಿನಲ್ಲಿ ಜನ ಅನುಕಂಪ ವ್ಯಕ್ತಪಡಿಸಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಜನರು ಅಫ್ಘಾನ್ ಮಹಿಳೆಯರ ಬಗ್ಗೆ ಅನುಕಂಪ ವ್ಯಕ್ತಪಡಿಸಲು ಕಾರಣ ತಾಲಿಬಾನ್ ಕಾನೂನುಗಳು. ಅಮೆರಿಕ ಸೇನೆಯ ದಾಳಿಯ ಬಳಿಕ 20 ವರ್ಷಗಳ ಕಾಲ ಪ್ರಜಾಪ್ರಭುತ್ವ ಆಡಳಿತದಲ್ಲಿತ್ತು. ಈಗ ಆಡಳಿತ ಉಗ್ರರ ಕೈ ಸೇರಿದ್ದರಿಂದ ಹಿಂದೆ ಇದ್ದ ತಾಲಿಬಾನ್ ಕಾನೂನು ಮತ್ತೆ ಜಾರಿಯಾಗಿದೆ. ಈ ಕಾನೂನುಗಳ ಅರಿವು ಮಹಿಳೆಯರಿಗೆ ಇರುವ ಕಾರಣ ಭಯಗೊಂಡಿದ್ದಾರೆ. ಹೀಗಾಗಿ ಷರಿಯತ್ ಏನು ಹೇಳುತ್ತದೆ? ತಾಲಿಬಾನ್ ಕಾನೂನು ಏನಿದೆ ಎನ್ನುವುದನ್ನು ವಿವರಿಸಲಾಗಿದೆ.

ಷರಿಯತ್ ಕಾನೂನು ಎಂದರೇನು?
ಷರಿಯತ್ ಕಾನೂನು ಇಸ್ಲಾಂನ ಕಾನೂನು ವ್ಯವಸ್ಥೆಯಾಗಿದೆ. ಇದು ಕುರಾನ್, ಇಸ್ಲಾಂನ ಕೇಂದ್ರ ಪಠ್ಯ, ಮತ್ತು ಫತ್ವಾಗಳಿಂದ ಕೂಡಿದ್ದು  ಇಸ್ಲಾಮಿಕ್ ವಿದ್ವಾಂಸರ ತೀರ್ಪುಗಳನ್ನು ಒಳಗೊಂಡಿದೆ.

ಷರಿಯತ್ ಕಾನೂನು ಮುಸ್ಲಿಮರ ಪ್ರಾರ್ಥನೆ, ಉಪವಾಸ ಮತ್ತು ಬಡವರಿಗೆ ದೇಣಿಗೆ ಸೇರಿದಂತೆ ಪಾಲಿಸಬೇಕಾದ ನಿತ್ಯ ಜೀವನದ ನಿಯಮಗಳನ್ನು ಹೇಳುತ್ತದೆ. ದೇವರ ಇಚ್ಛೆಯಂತೆ ಮುಸ್ಲಿಮರು ತಮ್ಮ ಜೀವನವನ್ನು ಹೇಗೆ ನಡೆಸಬೇಕು ಎಂಬ ಪ್ರತಿಯೊಂದು ಅಂಶವನ್ನು ವಿವರಿಸುತ್ತದೆ.

ಕುಟುಂಬ ಕಾನೂನು, ಹಣಕಾಸು ಮತ್ತು ವ್ಯಾಪಾರ ಇತರ ಕ್ಷೇತ್ರಗಳಲ್ಲಿ ಮುಸ್ಲಿಮರು ಮಾರ್ಗದರ್ಶನಕ್ಕಾಗಿ ಷರಿಯತ್ ಆಧರಿಸಬಹುದು. ಷರಿಯಾ ಕಾನೂನಿನಲ್ಲಿ ಅಪರಾಧಗಳನ್ನು ಹದ್ ಮತ್ತು ತಜೀರ್ ಎಂದು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ‘ಹದ್’ ಅಪರಾಧಗಳು ನಿಗಧಿತ ದಂಡಗಳೊಂದಿಗೆ ಗಂಭೀರ ಅಪರಾಧಗಳಾಗಿವೆ. ‘ತಜೀರ್’ ಅಪರಾಧಗಳು, ಇಲ್ಲಿ ಶಿಕ್ಷೆಯನ್ನು ನ್ಯಾಯಾಧೀಶರ ವಿವೇಚನೆಗೆ ಬಿಡಲಾಗುತ್ತದೆ. ಕಳ್ಳತನ ಹದ್ ಅಪರಾಧಗಳ ವ್ಯಾಪ್ತಿಯಲ್ಲಿದ್ದು, ಅಪರಾಧಿಯ ಕೈಯನ್ನು ಕತ್ತರಿಸುವ ಮೂಲಕ ಶಿಕ್ಷೆಗೆ ಒಳಪಡಿಸಬಹುದು ಮತ್ತು ಕಲ್ಲೆಸೆಯುವ ಮೂಲಕ ಮರಣದಂಡನೆಯನ್ನು ವಿಧಿಸಬಹುದು.

ಷರಿಯತ್ ಏನ್ ಹೇಳುತ್ತೆ?
ಮುಸ್ಲಿಂ ಮಹಿಳೆಯರಿಗೆ ಮುಸ್ಲಿಮೇತರ ಪುರುಷನನ್ನು ಮದುವೆಯಾಗಲು ಅವಕಾಶವಿಲ್ಲ. ಮುಸ್ಲಿಂ ಮಹಿಳೆಯರಿಗೆ ಪತಿಗೆ ಅವಿಧೇಯರಾಗಲು ಅವಕಾಶವಿಲ್ಲ. ಮಹಿಳೆ ಗಂಡನಿಲ್ಲದೆ ಅಥವಾ ರಕ್ತ ಸಂಬಂಧಿ ಇಲ್ಲದೇ ಎಂದಿಗೂ ಮನೆಯಿಂದ ಹೊರಹೋಗುವಂತಿಲ್ಲ.

ಪುರುಷ ಮತ್ತು ಮಹಿಳೆಯು ಸ್ವಂತ ಸಂಗಾತಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪುರುಷ ಅಥವಾ ಮಹಿಳೆಯೊಂದಿಗೆ ಸಂಪರ್ಕ ಹೊಂದಲು ಅವಕಾಶ ಇಲ್ಲ. ಮಹಿಳೆಯರು ಪುರುಷರೊಂದಿಗೆ ದೀರ್ಘ ಕಣ್ಣಿನ ಸಂಪರ್ಕ ಹೊಂದುವಂತಿಲ್ಲ, ಇದು ಅನೈತಿಕ ಭಾವನೆಗಳಿಗೆ ಮೊದಲ ಹೆಜ್ಜೆಯಾಗಬಹುದು. ಇದನ್ನೂ ಓದಿ: ತಾಲಿಬಾನ್ ಉಗ್ರರ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ, ಇರಾನ್ ಬೆಂಬಲ

ಮೈಗೆ ಅಂಟಿಕೊಳ್ಳಬಹುದಾದ ಅಥವಾ ಅಂಗಾಂಗಳು ಕಾಣುವ ರೀತಿಯ ಬಟ್ಟೆಗಳನ್ನು ಧರಿಸುವಂತಿಲ್ಲ. ಸುಗಂಧ ದ್ರವ್ಯಗಳು, ಮೇಕಪ್, ಆಭರಣಗಳು ಅಥವಾ ತುಂಬಾ ಅಲಂಕಾರಿಕ ಬಟ್ಟೆಗಳಂತಹ ಪುರುಷರ ಗಮನವನ್ನು ತನ್ನ ಕಡೆಗೆ ತಿರುಗಿಸುವಂತಹ ಯಾವುದೇ ವಸ್ತುವನ್ನು ಧರಿಸುವುದನ್ನು ಇಸ್ಲಾಂ ನಿಷೇಧಿಸುತ್ತದೆ. ಇದನ್ನೂ ಓದಿ: ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಕ್ಕಳಂತೆ ಆಟವಾಡಿದ ತಾಲಿಬಾನಿಗಳು

ಸುಗಂಧ ದ್ರವ್ಯವನ್ನು ಧರಿಸಿದ ಮಹಿಳೆ ಹಾದುಹೋದರೆ, ಅವಳು ಎಲ್ಲಾ ಗಮನವನ್ನು ತನ್ನ ಕಡೆಗೆ ತಿರುಗಿಸುತ್ತಾಳೆ. ಮುಸ್ಲಿಂ ಮಹಿಳೆ ಪ್ರದರ್ಶನಕ್ಕೆ ವಸ್ತುವಲ್ಲ ಬದಲಾಗಿ ಆಕೆ ಗೌರವದ ಸಂಕೇತ. ನಖಾಬ್ ಅಥಾವ ಪರ್ದಾ ಇಲ್ಲದೇ ಮಹಿಳೆಯರು ಹೊರಗಡೆ ಹೋಗುವಂತಿಲ್ಲ.

ತಾಲಿಬಾನ್ ನಿಯಮಗಳು ಏನು?
ರಕ್ತ ಸಂಬಂಧಿ ಜೊತೆಗಿಲ್ಲದೆ ಬುರ್ಕಾ ಧರಿಸದೇ ಮಹಿಳೆ ಹೊರ ಬರುವಂತಿಲ್ಲ. ಮಹಿಳೆ ಹೈಹೀಲ್ಡ್ ಚಪ್ಪಲಿಗಳನ್ನು ಧರಿಸುವಂತಿಲ್ಲ. ಅದರ ಸಪ್ಪಳ ಪುರುಷನ ಕಿವಿಗೆ ಬೀಳಬಹುದು.

ಸಾರ್ವಜನಿಕ ಸ್ಥಳದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುವಂತಿಲ್ಲ. ಮಹಿಳೆಯ ಧ್ವನಿ ಪರ ಪುರುಷನಿಗೆ ಕೇಳಬಾರದು. ಮನೆಯಲ್ಲಿನ ಮಹಿಳೆಯರು ಹೊರಗಿನ ಪುರುಷರಿಗೆ ಕಾಣಬಾರದು. ಆ ನಿಟ್ಟಿನಲ್ಲಿ ನೆಲ ಮಹಡಿ, ಮೊದಲ ಮಹಡಿ ಮನೆಗಳ ಕಿಟಕಿಯ ಗ್ಲಾಸ್ ಗಳಿಗೆ ಬಣ್ಣ ಬಳಿಯಬೇಕು. ಇದನ್ನೂ ಓದಿ: ಅಫ್ಘಾನ್ ಸೇನೆ ಹೋರಾಟ ಮಾಡದೇ ಇರುವಾಗ ನಮ್ಮವರು ಬಲಿಯಾಗುವುದರಲ್ಲಿ ಅರ್ಥವಿಲ್ಲ : ಬೈಡನ್

ಮಹಿಳೆಯರ ಫೋಟೋ ತೆಗೆಯುವುದು, ಪ್ರಿಂಟ್ ಮಾಡುವುದಕ್ಕೆ ನಿರ್ಬಂಧ. ಈ ನಿಯಮ ಉಲ್ಲಂಘಿಸಿದರೆ ಅವರನ್ನು ಶಿಕ್ಷಿಸುವ ಅಧಿಕಾರ ಅಲ್ಲಿನ ಧಾರ್ಮಿಕ ಮುಖಂಡರಿಗೆ ಇರಲಿದೆ.

Leave a Reply

Your email address will not be published. Required fields are marked *

Back to top button