ಹುಬ್ಬಳ್ಳಿ: ಸೌಂದರ್ಯ ಕಾಣದಿರಲು ಹಾಗೂ ತಮ್ಮ ರಕ್ಷಣೆಗಾಗಿ ಹಿಜಬ್‍ನ್ನು ಧರಿಸುತ್ತಾರೆ ಎಂದಿದ್ದೆ. ಈ ನನ್ನ ಹೇಳಿಕೆಯನ್ನು ತಪ್ಪಾಗಿ ತಿಳಿದುಕೊಂಡು ಗೊಂದಲ ಸೃಷ್ಟಿ ಮಾಡಲಾಗಿದೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಸಮರ್ಥಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು ಹಿಜಬ್ ಹಾಕದೇ ಇದ್ದರೆ ರೆಪ್ ಆಗುತ್ತೆ ಎಂದು ಹೇಳಿಲ್ಲ. ಬೇರೆಯವರು ಗೊಂದಲ ಸೃಷ್ಟಿ ಮಾಡಿಕೊಂಡರೆ ನಾನು ಏನು ಮಾಡಲಿ? ಹಿಜಬ್ ಹಾಕಿದರೆ ಬ್ಯೂಟಿ ಕಾಣಲ್ಲ, ಸೇಫ್ಟಿಗಾಗಿ ಹಾಕ್ಕೊತಾರೆ ಎಂದು ಹೇಳಿದ್ದೆ. ಬೇರೆಯವರ ಕಣ್ಣು ಬೀಳಬಾರದು ಎಂದು ತಲೆ ಮತ್ತು ಮುಖವನ್ನು ಮುಚ್ಚಿಕೊಳ್ಳುತ್ತಾರೆ ಅಷ್ಟೇ ಎಂದು ಹೇಳಿದರು.
ನಮ್ಮಲ್ಲಿ ರೇಪ್ ರೆಟ್ ಜಾಸ್ತಿ ಇದೆ. ಈ ಹೇಳಿಕೆಯನ್ನು ತಪ್ಪಾಗಿ ತಿಳಿದುಕೊಂಡು ಗೊಂದಲ ಸೃಷ್ಟಿ ಮಾಡಿಕೊಳ್ಳಲಾಗಿದೆ. ಕೆಲವರು ಹಿಜಬ್ ಹಾಕುತ್ತಾರೆ, ಕೆಲವರು ಹಾಕಲ್ಲ. ಇಸ್ಲಾಂನಲ್ಲಿ ಹಿಜಬ್ ಹಾಕಬೇಕು ಎಂದು ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಮುಗಿಯದ ಸಮವಸ್ತ್ರ ಸಮರ – ವಿವಿಧ ಜಿಲ್ಲೆಗಳಲ್ಲಿ ಹಿಜಬ್ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿಯರು
ದೇಶದಲ್ಲಿ ರೇಪ್ ರೆಟ್ ಜಾಸ್ತಿ ಇದೆ. ಬೇರೆ ದೇಶಕ್ಕೆ ಹೋಲಿಸಿದರೆ ನಮ್ಮಲ್ಲಿ ಜಾಸ್ತಿ ಇದೆ. ಹಿಜಬ್ ಧರಿಸುವುದರಿಂದ ಏನು ಎಂದು ಹೇಳಿದ್ದೇನೆ ಅಷ್ಟೇ. ಉದಾಹರಣೆಗೆ ಹೆಲ್ಮೆಟ್ ಹಾಕಿಕೊಳ್ಳೊರು ಸೆಫ್ಟಿಗಾಗಿ ಅಲ್ಲವೇ. ಹೆಲ್ಮೆಟ್ ಹಾಕಲು ಸರ್ಕಾರ ಆದೇಶ ಮಾಡಿದ್ದಾರೆ. ನ್ಯಾಯಾಲಯದಲ್ಲಿ ಹಿಜಬ್ ಆದೇಶಕ್ಕೆ ತಲೆ ಬಾಗುತ್ತೇವೆ. ಅದಕ್ಕೆ ಸ್ವಾಗತ ಮಾಡುತ್ತೇವೆ ಎಂದರು. ಇದನ್ನೂ ಓದಿ: ಬುರ್ಖಾ ಪದ್ಧತಿ ಇಲ್ಲದೆ ಇರೋದಕ್ಕೇ ದೇಶದಲ್ಲಿ ರೇಪ್ ಹೆಚ್ಚಾಗ್ತಿದೆ: ಜಮೀರ್ ವ್ಯಾಖ್ಯಾನ
ಸಿಎಂ ಇಬ್ರಾಹಿಂ ಪಕ್ಷ ಬಿಡಲ್ಲ ಎಂದು ನಿನ್ನೆಯೇ ಹೇಳಿದ್ದೆ. ಅವರ ಹಾಗೂ ಸಿದ್ದರಾಮಯ್ಯನವರ ಸಂಬಂಧ ಹಾಗಿದೆ ಎಂದು ಹೇಳಿದರು.