ಬೆಂಗಳೂರು: ಕಾಂಗ್ರೆಸ್ ನಲ್ಲಿ ಮುಸ್ಲಿಮ್ ನಾಯಕರ ಕಿತ್ತಾಟ ನಿಲ್ಲುವ ಸಾಧ್ಯತೆಗಳು ಕಂಡು ಬರುತ್ತಿಲ್ಲ.
ಸಚಿವ ಜಮೀರ್ ವಿರುದ್ಧ ರೋಷನ್ ಬೇಗ್, ತನ್ವೀರ್ ಸೇಠ್ ಅಸಮಾಧಾನ ಹೊರ ಹಾಕುತ್ತಿದ್ದು, ಹಜ್ ಖಾತೆ ಜಮೀರ್ ಬಳಿ ಇರೋದು ಬೇಡವೇ ಬೇಡ ಎಂದು ರೋಷನ್ ಬೇಗ್ ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲದೇ ಹಜ್ ಖಾತೆಯನ್ನು ಖಾದರ್ ಗೆ ನೀಡುವಂತೆ ರೋಷನ್ ಬೇಗ್ ಹೊಸ ರಾಗ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಹಜ್ ಖಾತೆ ಅನ್ನುವುದು ಯಾತ್ರಿಕರನ್ನು ಕಳುಹಿಸಿ ಕೊಡುವುದು. ಕೆಲವು ಮುಸ್ಲಿಮ್ ಸಮುದಾಯದ ದುರ್ಬಲ ವರ್ಗದವರಿಗೆ ನೆರವಾಗುತ್ತದೆ. ಈ ಖಾತೆಯ ಮೂಲಕ ಜಮೀರ್ ಸಮುದಾಯ ಲಾಭ ಪಡೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಜಮೀರ್ ಬಳಿ ಈ ಖಾತೆ ಇರುವುದು ಬೇಡ ಎಂದು ರೋಷನ್ ಬೇಗ್ ಪಟ್ಟು ಹಿಡಿದ್ದಾರೆ ಎನ್ನಲಾಗಿದೆ.
Advertisement
ಸೋಮವಾರ ರಾತ್ರಿ ಸಚಿವ ಯುಟಿ ಖಾದರ್ ಜೊತೆ ರೋಷನ್ ಬೇಗ್ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಜಿ.ಪರಮೇಶ್ವರ್ ಮತ್ತು ವೇಣುಗೋಪಾಲ್ ಬಳಿ ಈ ಬಗ್ಗೆ ಚರ್ಚೆ ನಡೆಸಿದ್ದು, ಈ ಖಾತೆಯನ್ನು ಜಮೀರ್ ಬಳಿ ಇರುವುದು ಬೇಡ. ಯಾರಿಗಾದರೂ ಕೊಡಿ ಅಥವಾ ಖಾದರ್ ಗೆ ಕೊಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
Advertisement
ಒಟ್ಟಿನಲ್ಲಿ ಜಮೀರ್ ವಿರುದ್ಧದ ರೋಷನ್ ಬೇಗ್ ರಣತಂತ್ರ ಯಶಸ್ವಿಯಾಗುತ್ತಾ? ಈ ಪ್ರತಿಷ್ಠೆಯ ಫೈಟ್ ನಲ್ಲಿ ಜಮೀರ್ ಗೆಲ್ತಾರಾ? ರೋಷನ್ ಬೇಗ್ ಗೆಲ್ತಾರಾ.? ಅನ್ನೋದನ್ನು ಕಾದು ನೋಡಬೇಕಿದೆ.
Advertisement
https://www.youtube.com/watch?v=1XyltNonwdU