ಮೊದಲ ಹೆಜ್ಜೆಯಲ್ಲೇ ಭರವಸೆಯ ಛಾಪು ಮೂಡಿಸಿದ ಝೈದ್ ನಟನೆ

Public TV
2 Min Read
FotoJet 2 31

ಝೈದ್ ಖಾನ್ (Zaid Khan) ಹಾಗೂ ಸೋನಲ್ ಮೊಂತೆರೋ (Sonal Montero) ನಟನೆಯ  ಬನಾರಸ್ ಸಿನೆಮಾ ಸಾಕಷ್ಟು ಕ್ರೇಜ್ ಗಳೊಂದಿಗೆ ಬಿಡುಗಡೆಗೊಂಡು, ಕನ್ನಡವೂ ಸೇರಿದಂತೆ ಪಂಚ ಭಾಷೆಯಲ್ಲೂ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ. ನಿರ್ದೇಶಕ ಜಯತೀರ್ಥ (Jayathirtha) ಬನಾರಸ್ ಗೆ (Banaras) ಆಕ್ಷನ್ ಕಟ್ ಹೇಳ್ತಿದ್ದಾರೆ ಅಂದಾಗ ಹೆಚ್ಚಾಗಿದ್ದ ಕುತೂಹಲ ಮೂಡಿಕೊಳ್ಳೋದು ಸಹಜ. ಈ ಚಿತ್ರಕ್ಕೆ ಝೈದ್ ಖಾನ್ ನಾಯಕರಾಗ್ತಿದ್ದಾರೆ ಅಂದಾಗ ಚರ್ಚೆ ಬೇರೆಯದ್ದೇ ಮಟ್ಟಕ್ಕೆ ತಲುಪಿತ್ತು. ಯಾಕಂದ್ರೆ, ಹಣವಿದ್ದವರಿಗೆ ಈ ಸಿನೆಮಾಗಳೆಲ್ಲ ಶೋಕಿಗಾಗಿ, ಹಣದ ಬಲ ಪ್ರದರ್ಶನದಲ್ಲಿ ಸಿನೆಮಾ ಮುಗಿದು ಹೋಗತ್ತೆ ಅನ್ನೋ ಬೇರೆಯದ್ದೇ ತರಹದ ಮಾತುಗಳು, ವಿಮರ್ಶೆಗಳು ಕೇಳಿಬಂದಿದ್ದವು. ಜೊತೆಗೆ ಬಾಯ್ಕಾಟ್ ಬನಾರಸ್ ಎಂಬ ವಿರೋಧಗಳ ಕೂಗು ಸಹ ಜೋರಾಗಿನೇ ಇತ್ತು. ಆದ್ರೆ ಇವರೆಲ್ಲರ ಮಾತನ್ನ, ನಂಬಿಕೆಯನ್ನ, ವಿರೋಧ ಗಳನ್ನ ಗೆದ್ದು ಝೈದ್ ತಾನೊಬ್ಬ ಅದ್ಭುತ ನಟನೆಂಬುದನ್ನ ಪ್ರೂವ್ ಮಾಡಿದ್ದಾರೆ.

FotoJet 1 37

ಈಗ ಪಂಚ ಭಾಷೆಗಳಲ್ಲೂ ತೆರೆಕಂಡು ಮಿನುಗುತ್ತಿರುವ ಬನಾರಸ್ ಬಗೆಗಿನ ಪಾಸಿಟಿವ್ ಮಾತುಗಳೇ ಸಿನೆಮಾದ ಮಿಂಚಿನ ಓಟಕ್ಕೆ ನಾಂದಿ ಹಾಡಿವೆ. ಕರ್ನಾಟಕದಲ್ಲಂತೂ ಬನಾರಸ್ ನೋಡಿದ ಸಿನಿಪ್ರಿಯರಿಗೆ ಝೈದ್ ನಟನೆ ನುರಿತ ಕಲಾವಿದನಂತೆ ಕಾಣಿಸಿದೆ. ಹಾಗಾಗಿಯೇ ಝೈದ್ ನಟನೆಯನ್ನ ಮೆಚ್ಚಿ ಕೊಂಡಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ಬಹುಶಃ ಝೈದ್ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡುವ ಮೊದಲು ವಹಿಸಿದ್ದ ಶ್ರಮ, ಶ್ರದ್ದೆಯೇ. ಶ್ರೀಮಂತರ ಮನೆಯಿಂದ ಯಾರೇ ಸಿನಿಮಾ ರಂಗಕ್ಕೆ ಬಂದರೂ ಕೂಡಾ ಅದೊಂದು ತೆರೆನಾದ ಚಿಕಿತ್ಸಕ ನೋಟ ಅವರತ್ತ ನೆಟ್ಟಿರುವುದು ಸಹಜ.  ಹಣಬಲ ಒಂದರಿಂದಲೇ ಅಂಥವರು ಜಯಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂಬಂತಹ ವಿಮರ್ಶೆಗಳೂ ಮೊದಲು ಝೈದ್ ಖಾನ್ ಬಗ್ಗೆಯೂ  ಇದ್ದದ್ದು ಸುಳ್ಳಲ್ಲ. ಆದ್ರೆ ಸಿನೆಮಾ ನೋಡಿದ ಮೇಲಂತು ಝೈದ್ ಓರ್ವ ಭರವಸೆಯ ನಟ, ಬನಾರಸ್ ನಾಯಕನಾಗಿ ಆತ ಅದ್ಭುತವಾಗಿ ನಟಿಸಿದ್ದಾರೆಂಬ ಮೆಚ್ಚುಗೆ ಪ್ರೇಕ್ಷಕರ ಕಡೆಯಿಂದಲೇ ವ್ಯಾಪಕವಾಗಿ ಕೇಳಿ ಬರುತ್ತಿದೆ.

FotoJet 49

ಈ ಹಿಂದೆ ಝೈದ್ ಬಗ್ಗೆ ಸ್ಟಾರ್ ನಟರೊಬ್ಬರು ಬನಾರಸ್ ಸಿನೆಮಾವನ್ನ ನೋಡಿ,  ಝೈದ್ ಖಾನ್ ಈಗಾಗಲೇ ಮೂರ್ನಾಲಕ್ಕು ಸಿನಿಮಾ ಮಾಡಿದ್ದಾರೇನೋ ಅಂತ ಫೀಲ್ ಆಗುವಂತೆ ನಟಿಸಿದ್ದಾರೆಂದೂ ಹೇಳಿದ್ದರು. ಬನಾರಸ್ ಅನ್ನು ಕಣ್ತುಂಬಿಕೊಂಡ ಪ್ರತಿಯೊಬ್ಬರಿಗೂ ದರ್ಶನ್ ಹೇಳಿರೋದು ಅಕ್ಷರಶಃ ನಿಜವೆನ್ನಿಸಿದಂತೆ ನಟಿಸಿದ್ದಾರೆ ಝೈದ್. ಇದನ್ನೂ ಓದಿ: ಕನ್ನಡತಿ ಅನುಷಾ ಶೆಟ್ಟಿ ಜೊತೆ ತೆಲುಗು ಸ್ಟಾರ್ ನಾಗಶೌರ್ಯ ಮದುವೆ

banaras 2 1

ಸದ್ಯ ಬನಾರಸ್ ಪ್ರಭೆ  ಕರ್ನಾಟಕದ ಉದ್ದಗಲಕ್ಕೂ ಹಬ್ಬಿದ್ದು,  ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ಝೈದ್ ಸಿನಿಮಾ ಮಂದಿರಗಳಿಗೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಸಿನೆಮಾ ನೋಡಿ ಅವರ ಪ್ರತಿಕ್ರಿಯೆಯನ್ನು ಎಂಜಾಯ್ ಮಾಡ್ತಿದ್ದಾರೆ.ಈ ಮೂಲಕ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲೂ ಪ್ರೇಕ್ಷಕ ವರ್ಗವೇ ನಿರ್ಧರಿಸಿದಂತೆ  ಚಿತ್ರರಂಗಕ್ಕೆ ಝೈದ್ ಖಾನ್  ಒಂದೊಳ್ಳೆ ಭರವಸೆಯ ನಟನೆಂಬುದನ್ನ ಮೊದಲ ಸಿನೆಮಾದಲ್ಲೇ ಒಪ್ಪಿಕೊಂಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *