Bengaluru CityCinemaKarnatakaLatestMain PostSouth cinema

ಕನ್ನಡತಿ ಅನುಷಾ ಶೆಟ್ಟಿ ಜೊತೆ ತೆಲುಗು ಸ್ಟಾರ್ ನಾಗ ಶೌರ್ಯ ಮದುವೆ

ಟಾಲಿವುಡ್‌ನ(Tollywood) ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟ ನಾಗ ಶೌರ್ಯ(Nagashourya) ಇದೀಗ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಮದುವೆಯ ಸುದ್ದಿಯ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ತೆಲುಗಿನ ಯಂಗ್ ಹೀರೋ ನಾಗ ಶೌರ್ಯ, ಬೆಂಗಳೂರಿನ(Bengaluru) ಯುವತಿ ಅನುಷಾ ಶೆಟ್ಟಿ(Anusha Shetty) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಕರ್ನಾಟಕ ಮೂಲದ ಇಂಟೀಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಅನುಷಾ ಶೆಟ್ಟಿ ಜೊತೆ ಹೊಸ ಬಾಳಿಗೆ ನಾಗ ಶೌರ್ಯ ಕಾಲಿಡುತ್ತಿದ್ದಾರೆ. ಅಂದಹಾಗೆ ನವೆಂಬರ್ 20ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ.

ನಟ ನಾಗ್ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಗುತ್ತಿದ್ದು, ನವೆಂಬರ್ 19, 20ರಂದು  ಅದ್ದೂರಿ ಮದುವೆ ನಡೆಯಲಿದೆ. ಈ ಮದುವೆಗೆ ಕುಟುಂಬದವರು, ಆಪ್ತರು ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ. ತೆಲುಗು ಚಿತ್ರರಂದಿಂದ ಯಾರೆಲ್ಲ ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ:ಸಮಂತಾ ಬಾಳಲ್ಲಿ ಆಶಾಕಿರಣ: ನಾಗ ಚೈತನ್ಯ ಮನಸ್ಸು ಮಾಡಲಿ ಎಂದು ಫ್ಯಾನ್ಸ್

 

View this post on Instagram

 

A post shared by Naga Shaurya (@nagashaurya_universe)

ನಾಗ್ ಮತ್ತು ಅನುಷಾ ಶೆಟ್ಟಿ ಮದುವೆ ನವೆಂಬರ್ 19, 20ರಂದು ಬೆಂಗಳೂರಿನ ವಿಟ್ಟಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ  ಮ್ಯಾರಿಯಟ್ ಹೋಟೆಲ್‌ನಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿದೆ. ನಾಗ್, ಅನುಷಾ ಮದುವೆ (ನ.20)ರಂದು 11.25ರ ಶುಭ ಮುಹೂರ್ತದಲ್ಲಿ ನಡೆಯಲಿದೆ. ಸದ್ಯ ಈ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ.

Live Tv

Leave a Reply

Your email address will not be published. Required fields are marked *

Back to top button