ಯುವಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡ್ತಾರೆ: ಜಹೀರ್

Public TV
1 Min Read
yuvaraj singh

ಮುಂಬೈ: 2019ರ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಇದೇ ವೇಳೆ ಎಲ್ಲಾ ತಂಡಗಳು ಟೂರ್ನಿಗೆ ಸಿದ್ಧತೆ ನಡೆಸುತ್ತಿವೆ.

ಐಪಿಎಲ್ ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡ ಕೂಡ ಈ ಬಾರಿ ಕಪ್ ಮೇಲೆ ಕಣ್ಣಿಟ್ಟಿದ್ದು, ಕಳೆದ ಟೂರ್ನಿಯಲ್ಲಿ ಸೋಲಿಗೆ ಕಾರಣವಾಗಿದ್ದ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಯುವರಾಜ್ ಸಿಂಗ್ ಅವರನ್ನ ಕರೆ ತಂದಿದೆ.

ಯುವಿ ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಂಬೈ ಇಂಡಿಯನ್ಸ್ ತಂಡ ಜಹೀರ್ ಖಾನ್, ಯುವರಾಜ್ ಸಿಂಗ್ ಕಮ್ ಬ್ಯಾಕ್ ಈ ಬಾರಿಯ ಟೂರ್ನಿಯಲ್ಲಿ ಹೆಚ್ಚಿನ ಪರಿಣಾಮ ಉಂಟು ಮಾಡಲಿದೆ. ಅಲ್ಲದೇ ಯುವರಾಜ್ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮಥ್ರ್ಯ ಹೊಂದಿದ್ದಾರೆ. ಪಂದ್ಯದ ಮೇಲೆ ನಿಯಂತ್ರಣವನ್ನು ಸಾಧಿಸಬಲ್ಲ ಆಟಗಾರರನ್ನೇ ಗುರುತಿಸಿ ಆಯ್ಕೆ ಮಾಡಿದ್ದೇವೆ. ರೋಹಿತ್ ಆರಂಭಿಕರಾಗಿ ಕಣಕ್ಕೆ ಇಳಿಯುವ ನಿರ್ಧಾರ ಮಾಡಿದ ಬಳಿಕ ನಮಗೆ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬವುದು ಮುಖ್ಯ ಉದ್ದೇಶವಾಗಿತ್ತು. ಅಲ್ಲದೇ ಅನುಭವಿ ಆಟಗಾರರ ಅಗತ್ಯವೂ ಇತ್ತು. ಯುವಿ ಸಾಮಥ್ರ್ಯವೂ ಅರಿವಿದ್ದ ಕಾರಣ ಅವರು ಆಯ್ಕೆ ಆಗಿದ್ದಾರೆ ಎಂದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ಯಶಸ್ವಿ ಪಡೆದ ತಂಡವಾಗಿದೆ. 4ನೇ ಕಪ್ ಗೆಲ್ಲುವ ಹುಮ್ಮಸಿನಲ್ಲಿರುವ ಮುಂಬೈ ತಂಡ ಕಳೆದ ಬಾರಿ 5ನೇ ಸ್ಥಾನದಲ್ಲಿ ತನ್ನ ಹೋರಾಟವನ್ನು ಅಂತ್ಯಗೊಳಿಸಿತ್ತು. ಈ ಬಾರಿಯ ಟೂರ್ನಿಯಲ್ಲಿ ಮುಂಬೈ ತಂಡ ಮಾರ್ಚ್ 24 ರಂದು ತಮ್ಮ ಮೊದಲ ಪಂದ್ಯವನ್ನು ಆಡಲಿದೆ.

Share This Article
Leave a Comment

Leave a Reply

Your email address will not be published. Required fields are marked *