Cricket

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭುವನೇಶ್ವರ್ ಕುಮಾರ್, ಜಹೀರ್-ಸಾಗರಿಕಾ ಸರಳ ವಿವಾಹ: ಫೋಟೋಗಳಲ್ಲಿ ನೋಡಿ

Published

on

Share this

ನವದೆಹಲಿ: ಟೀಂ ಇಂಡಿಯಾದಲ್ಲಿ ಯಶಸ್ವಿ ಬೌಲರ್ ಗಳಾಗಿ ಮಿಂಚಿರುವ ಭುವನೇಶ್ವರ್ ಕುಮಾರ್ ಹಾಗೂ ಮಾಜಿ ವೇಗದ ಬೌಲರ್ ಜಹೀರ್ ಖಾನ್ ತಮ್ಮ ಪ್ರೇಯಸಿಯರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭುವನೇಶ್ವರ್ ಕುಮಾರ್ ತಮ್ಮ ಬಹುಕಾಲದ ಗೆಳತಿ ನೂಪುರ್ ನಗರ್ ಜೊತೆ ಸಪ್ತಪದಿ ತುಳಿದರು. ಈ ವಿವಾಹ ಸಮಾರಂಭದಲ್ಲಿ ಭಾರತ ತಂಡದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು, ರಾಜಕಾರಣಿಗಳು ಆಪ್ತ ಕುಟುಂಬ ವರ್ಗದ ಗೆಳೆಯರು ಭಾಗವಹಿಸಿದ್ದರು.

 

ಪ್ರಸ್ತುತ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭುವಿ, ಎರಡನೇ ಹಾಗೂ ಮೂರನೇ ಪಂದ್ಯದಿಂದ ವಿನಾಯ್ತಿ ಪಡೆದಿದ್ದಾರೆ. ನವೆಂಬರ್ 26 ಮತ್ತು 30 ರಂದು ಕ್ರಮವಾಗಿ ಬುಲಂದರ್ ಹಾಗೂ ದೆಹಲಿಯಲ್ಲಿ ಔತಣ ಕೂಟವನ್ನು ಏರ್ಪಡಿಸಲಾಗಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ದೆಹಲಿಯಲ್ಲಿ ಇರಲಿರುವ ಟೀಂ ಇಂಡಿಯಾ ಆಟಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ಚಕ್ ದೇ ಇಂಡಿಯಾ ಖ್ಯಾತಿಯ ನಟಿ ಸಾಗರಿಕಾ ಘಟ್ಕೆ ಕೂಡ ಮುಂಬೈನಲ್ಲಿ ಸರಳ ವಿವಾಹ ಮಾಡಿಕೊಂಡಿದ್ದಾರೆ. ಗುರುವಾರ ಮುಂಬೈನ ವಿವಾಹ ನೋಂದಣಿ ಕಚೇರಿಗೆ ತೆರಳಿದ್ದ ಜಹೀರ್ ಹಾಗೂ ಸಾಗರಿಕಾ ತಮ್ಮ ವಿವಾಹ ನೋಂದಣಿ ಮಾಡಿಸಿದರು.

ಇನ್ನು ಸರಳ ಮದುವೆ ಸಮಾರಂಭದಲ್ಲಿ ಜಹೀರ್ ಮತ್ತು ಸಾಗರಿಕಾ ಅವರ ಕುಟುಂಬಸ್ಥರು ಹಾಗೂ ಕೆಲವೇ ಆಪ್ತರು ಮಾತ್ರ ಉಪಸ್ಥಿತರಿದ್ದರು. ಈ ಕುರಿತು ಸಂತೋಷ ಹಂಚಿಕೊಂಡಿರುವ ಜಹೀರ್ ಆಪ್ತ ಅಜ್ನಾನ ಶರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಅಪರೂಪದ ಕ್ಷಣಗಳನ್ನು ಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ದಂಪತಿ, ಸಾಗರಿಕಾ ಗೆಳತಿ ನಟಿ ವಿದ್ಯಾ ಮಲ್ವಾಡೆ, ಬಾಲಿವುಡ್ ನಿರ್ದೇಶಕ ಅಭಿಷೇಕ್ ಕಪೂರ್ ದಂಪತಿ, ಕ್ರಿಕೆಟಿಗ ಯುವರಾಜ್ ಸಿಂಗ್ ಪತ್ನಿ ನಟಿ ಹೇಝಲ್ ಕೀಚ್ ಹಾಗೂ ಕ್ರಿಕೆಟಿಗ ಹರ್ಭಜನ್ ಸಿಂಗ್ ಭಾಗವಹಿಸಿದ್ದರು.

 

 

View this post on Instagram

23.11.2017 ❤️

A post shared by Sagarika Ghatge Khan (@sagarikaghatge) on

View this post on Instagram

Lucky to get some winter sun #londonlove ❤️

A post shared by Sagarika Ghatge Khan (@sagarikaghatge) on

Click to comment

Leave a Reply

Your email address will not be published. Required fields are marked *

Advertisement
Advertisement