ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸಿನಿಮಾಗಳಿಗಿಂತ ತಮ್ಮ ಖಾಸಗಿ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. ಜಹೀರ್ ಇಕ್ಬಾಲ್ ಜತೆ ಸೋನಾಕ್ಷಿ ಹೆಸರು ಕೇಳಿ ಬರುತ್ತಿತ್ತು. ಇಬ್ಬರ ಡೇಟಿಂಗ್ ವಿಚಾರ ಬಿಟೌನ್‌ನಲ್ಲಿ ಸಖತ್ ಸುದ್ದಿ ಮಾಡಿತ್ತು. ಈಗ ತಮ್ಮ ಸಂಬಂಧದ ಬಗ್ಗೆ ಸೋನಾಕ್ಷಿ ಬರ್ತಡೇಗೆ ವಿಶೇಷವಾಗಿ ವಿಶ್ ಮಾಡುವ ಮೂಲಕ ಅಧಿಕೃತವಾಗಿ ನಟ ಜಹೀರ್ ತಿಳಿಸಿದ್ದಾರೆ.
`ದಬಾಂಗ್’ ಚಿತ್ರದ ಮೂಲಕ ಬಾಲಿವುಡ್ ಪರಿಚಿತರಾದ ನಟಿ ಸೋನಾಕ್ಷಿ ಸಿನ್ಹಾ ಬಳಿಕ ಸಾಲು ಸಾಲು ಸಿನಿಮಾಗಳ ಮೂಲಕ ಗುರುತಿಸಿಕೊಂಡರು. ಈಗಲೂ ಸಾಕಷ್ಟು ಚಿತ್ರಗಳಲ್ಲಿ ಆಕ್ಟೀವ್ ಇರುವ ಸೋನಾಕ್ಷಿ ಸದ್ಯ ತಮ್ಮ ಲವ್ ಲೈಫ್ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಕೆಲ ವರ್ಷಗಳಿಂದ ಜಹೀರ್ ಇಕ್ಬಾಲ್ ಜತೆ ಡೇಟಿಂಗ್‌ನಲ್ಲಿದ್ದರು. ಈ ಕುರಿತು ಸಾಕಷ್ಟು ಸುದ್ದಿಯಾಗಿತ್ತು. ಆ ಸುದ್ದಿಗೆ ಬ್ರೇಕ್ ಹಾಕಿ, ತಮ್ಮ ಪ್ರೀತಿಯ ಕುರಿತು ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ನಟ ಜಹೀರ್ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪರ್ ಶರ್ಮಾ ಪರ ಧ್ವನಿ ಎತ್ತಿದ ಕಂಗನಾ ರಣಾವತ್
ಸೋನಾಕ್ಷಿ ಸಿನ್ಹಾ ಜೂನ್ 2ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. 35ನೇ ವರ್ಷಕ್ಕೆ ಕಾಲಿಟ್ಟಿರೋ ಸಂದರ್ಭದಲ್ಲಿ ಜಹೀರ್ ವಿಶೇಷವಾಗಿ ಸೋನಾಕ್ಷಿಗೆ ವಿಶ್ ಮಾಡಿದ್ದಾರೆ. ಹ್ಯಾಪಿ ಬರ್ತಡೇ ಸೋನ್ಸ್, ನನ್ನ ಕೊಲ್ಲದಿದ್ದಕ್ಕಾಗಿ ಧನ್ಯವಾದಗಳು. ಐ ಲವ್ ಯೂ ಎಂದು ತಿಳಿಸುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೂ ಗುಡ್ ನ್ಯೂಸ್ ಕೊಟ್ಟಿದ್ದಾರೆ.
View this post on Instagram
ಜಹೀರ್ ಇಕ್ಬಾಲ್ ನೋಟ್‌ಬುಕ್, ಕಮಲ್ ಖಾನ್ ಚಿತ್ರಗಳಲ್ಲಿ ನಟಿಸಿದ್ದಾರೆ. `ಡಬಲ್ ಎಕ್ಸಲ್’ ಚಿತ್ರದಲ್ಲಿ ಸೋನಾಕ್ಷಿ ಮತ್ತು ಜಹೀರ್ ಒಟ್ಟಿಗೆ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರ ರಿಲೀಸ್ ಆಗಲಿದೆ.