ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದ ಯಜುವೇಂದ್ರ ಚಹಲ್ ಈ ಹಿಂದೆ ನಾನು ಆರ್‌ಸಿಬಿ ಪರ ಮಾತ್ರ ಐಪಿಎಲ್ ಆಡಲು ಬಯಸುತ್ತೇನೆ ಎಂದಿದ್ದರು. ಆದರೆ ಇದೀಗ ಆರ್‌ಸಿಬಿ ತಂಡ ಚಹಲ್‍ರನ್ನು ಮೆಗಾ ಹರಾಜಿಗೆ ಬಿಟ್ಟುಕೊಟ್ಟಿದೆ. ಇದರಿಂದಾಗಿ ಚಹಲ್ ಮುಂದಿನ ಐಪಿಎಲ್‍ನಲ್ಲಿ ಬೇರೆ ತಂಡದ ಪರ ಆಡುವರೇ? ಅಥವಾ ಐಪಿಎಲ್‍ನಿಂದ ದೂರ ಉಳಿಯಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
Advertisement
2014ರ ಐಪಿಎಲ್ ನಂತರ 2021 ಐಪಿಎಲ್ ವರೆಗೆ ಚಹಲ್ ಆರ್‌ಸಿಬಿ ತಂಡದ ಪ್ರಮುಖ ಬೌಲರ್ ಆಗಿ ಮಿಂಚಿ ಟೀಂ ಇಂಡಿಯಾಗೂ ಎಂಟ್ರಿಕೊಟ್ಟಿದ್ದರು. ಐಪಿಎಲ್‍ನಲ್ಲಿ ಆರ್‌ಸಿಬಿ ಪರ ಮಿಂಚುಹರಿಸಿದ ಚಹಲ್ ಒಟ್ಟು 113 ಪಂದ್ಯಗಳಿಂದ 139 ವಿಕೆಟ್ ಪಡೆದು ಯಶಸ್ವಿ ಬೌಲರ್ ಆಗಿ ಗುರುತಿಸಿಕೊಳ್ಳುವುದರೊಂದಿಗೆ ಕೊಹ್ಲಿಯ ನಂಬಿಕೆಯ ಬೌಲರ್ ಆಗಿದ್ದರು. ಇದನ್ನೂ ಓದಿ: ಕನ್ನಡಿಗ ಮಯಾಂಕ್ ಶತಕ – ಸುಸ್ಥಿತಿಯಲ್ಲಿ ಟೀಂ ಇಂಡಿಯಾ
Advertisement
Advertisement
ಆರ್‌ಸಿಬಿ ತಂಡದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಚಹಲ್ ಈ ಹಿಂದೆ ನಾನು ಆರ್‌ಸಿಬಿ ಪರ ಮಾತ್ರ ಐಪಿಎಲ್ ಆಡಲು ಬಯಸುತ್ತೇನೆ ಎಂದಿದ್ದರು. ಆದರೆ ಇದೀಗ 15ನೇ ಆವೃತ್ತಿಗೂ ಮುನ್ನ ಐಪಿಎಲ್ ತಂಡಗಳು ರಿಟೈನ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಚಹಲ್‍ರನ್ನು ಹರಾಜಿಗೆ ಬಿಟ್ಟುಕೊಟ್ಟಿದೆ. ಈ ಮೂಲಕ ಚಹಲ್ ಹರಾಜಿನಲ್ಲಿ ಬೇರೆ ತಂಡ ಖರೀದಿಸಿದರೆ ಆ ತಂಡದ ಪರ ಕಣಕ್ಕಿಳಿಯುವರೇ? ಅಥವಾ ಐಪಿಎಲ್‍ನಿಂದ ದೂರ ಉಳಿಯಲಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಈ ನಡುವೆ ಮತ್ತೆ ಆರ್‌ಸಿಬಿ ತಂಡ ಚಹಲ್‍ರನ್ನು ಖರೀದಿಸಿ ಅವರ ಆಸೆಯನ್ನು ಪೂರೈಸುವುದೇ ಎಂಬ ನಿರೀಕ್ಷೆ ಕೂಡ ಅಭಿಮಾನಿಗಳಲ್ಲಿ ಮೂಡಿದೆ. ಏನೇ ಆದರೂ ಈ ಬಗ್ಗೆ ಸ್ಪಷ್ಟತೆಗಾಗಿ ಜನವರಿಯಲ್ಲಿ ನಡೆಯಲಿರುವ ಹರಾಜಿನವರೆಗೆ ಕಾಯಲೇಬೇಕು. ಇದನ್ನೂ ಓದಿ: ಒಂದೇ ವರ್ಷದಲ್ಲಿ 4000% ಸಂಬಳ ಹೈಕ್ – ಇದು ಅಯ್ಯರ್ ಸಾಧನೆ
Advertisement