ಮುಂಬೈ: ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡಿದ್ದ ಯುವರಾಜ್ ಸಿಂಗ್ ಮತ್ತೆ ಬ್ಯಾಟಿಂಗ್ ನಡೆಸಲು ಸಿದ್ಧತೆ ನಡೆಸಿದ್ದು, ಕೆನಡಾ ಗ್ಲೋಬಲ್ ಟಿ20 ಟೂರ್ನಿಗೆ ಸಹಿ ಹಾಕಿದ್ದಾರೆ.
ಟೂರ್ನಿಯ ಟೊರೆಂಟೊ ನ್ಯಾಷನಲ್ಸ್ ತಂಡದ ಪರ ಯುವರಾಜ್ ಆಡುವುದು ಖಚಿತವಾಗಿದ್ದು, ಬಿಸಿಸಿಐ ಕೂಡ ಯುವಿಗೆ ಅನುಮತಿಯನ್ನು ನೀಡಿದೆ. ಜುಲೈ 25 ರಿಂದ ಆರಂಭವಾಗುವ ಟೂರ್ನಿಯಲ್ಲಿ ಯುವರಾಜ್ ಭಾಗವಹಿಸುತ್ತಿದ್ದಾರೆ.
Advertisement
For all #YuvrajSingh fans! ????#TorontoNationals get @YUVSTRONG12 for #GT2019. pic.twitter.com/jbnsXHWDmb
— GT20 Canada (@GT20Canada) June 20, 2019
Advertisement
ಈಗಾಗಲೇ ಟೂರ್ನಿಯಲ್ಲಿ ಕ್ರಿಸ್ ಗೇಲ್, ಬ್ರೆಂಡನ್ ಮೆಕಲಮ್, ರುಸೆಲ್, ಸುನೀಲ್ ನರೇನ್, ಕ್ರಿಸ್ ಲೀನ್, ಡ್ವೇನ್ ಬ್ರಾವೋ, ಡುಪ್ಲೆಸಿಸ್, ಶಾಹಿದ್ ಆಫ್ರಿದಿ, ಶಕೀಬ್ ಹಲ್ ಹಸನ್ ಸೇರಿದಂತೆ ಹಲವು ಆಟಗಾರರು ಭಾಗವಹಿಸುತ್ತಿದ್ದಾರೆ. ಇವರಲ್ಲಿ ಬ್ರೆಂಡನ್ ಮೆಲಕಮ್ ಅವರು ಮಾತ್ರ ಟೊರೆಂಟೊ ನ್ಯಾಷನಲ್ಸ್ ಪರ ಆಡುತ್ತಿದ್ದಾರೆ.
Advertisement
Could it get better! ???? #YuvrajSingh @YUVSTRONG12 #GT2019 pic.twitter.com/hXOf3IaSoC
— GT20 Canada (@GT20Canada) June 20, 2019
Advertisement
ಈ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸುತ್ತಿದ್ದು, 22 ಪಂದ್ಯಗಳು ಟೂರ್ನಿಯಲ್ಲಿ ನಡೆಯಲಿದೆ. ಜೂನ್ 10 ರಂದು ಯುವಿ ಅಂತರಾಷ್ಟ್ರಿಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದರು. ಅಲ್ಲದೇ ಈ ವೇಳೆ ತಾವು ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದರು. ಇದರಂತೆ ಕೆನಡಾ ಟಿ20 ಲೀಗ್ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]