ಮುಂಬೈ: ಅಂತರಾಷ್ಟ್ರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ ಮಾಡಿದ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ವಿದೇಶಿ ಕ್ರಿಕೆಟ್ ಟಿ20 ಟೂರ್ನಿಗಳಲ್ಲಿ ಭಾಗವಹಿಸಲು ಬಿಸಿಸಿಐನಿಂದ ಅನುಮತಿ ಕೋರಿದ್ದಾರೆ.
ಕಳೆದ ವಾರವಷ್ಟೇ ಯುವರಾಜ್ ಸಿಂಗ್ ನಿವೃತ್ತಿ ಘೋಷಣೆ ಮಾಡಿದ್ದರು. ಅಲ್ಲದೇ ಇದೇ ವೇಳೆ ಕ್ರಿಕೆಟ್‍ಗಾಗಿ ವಿದೇಶಿ ಟಿ20 ಟೂರ್ನಿಗಳಲ್ಲಿ ಆಡುವುದಾಗಿ ತಿಳಿಸಿದ್ದರು. ಇದರಂತೆ ಸದ್ಯ ಯುವರಾಜ್ ಬಿಸಿಸಿಐನಿಂದ ಅನುಮತಿ ಕೋರಿದ್ದಾರೆ.
Advertisement
Advertisement
ಟೀಂ ಇಂಡಿಯಾ ಕ್ರಿಕೆಟ್ ಸ್ಥಾನ ಸಿಗುವುದು ಅನುಮಾನ ವ್ಯಕ್ತವಾದ ಬೆನ್ನಲ್ಲೇ ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸಲು ನಿಯಮಗಳು ಅಡ್ಡಿ ಉಂಟಾಗುವ ಉದ್ದೇಶದಿಂದ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. ಈ ಹಿಂದೆ ವಿರೇಂದ್ರ ಸೆಹ್ವಾಗ್ ಹಾಗೂ ಜಹೀರ್ ಖಾನ್ ನಿವೃತ್ತಿ ಪಡೆದು ಯುಎಇಯಲ್ಲಿ ನಡೆದ ಟಿ10 ಲೀಗ್‍ನಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದರು.
Advertisement
ಇರ್ಫಾನ್ ಫಠಾಣ್ ಕೂಡ ಈ ಹಿಂದೆ ಕೆರೆಬಿಯನ್ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸಲು ಹೆಸರು ನಮೂದಿಸಿದ್ದರು. ಆದರೆ ಫಸ್ಟ್ ಕ್ಲಾಸ್ ಕ್ರಿಕೆಟ್‍ನಲ್ಲಿ ಇರ್ಫಾನ್ ಆಡುತ್ತಿದ್ದ ಕಾರಣ ಬಿಸಿಸಿಐ ಅನುಮತಿ ನೀಡಿರಲಿಲ್ಲ. ಕಳೆದ 2 ವರ್ಷಗಳ ಹಿಂದೆ ಹಾಂಗ್ ಕಾಂಗ್ ಟಿ20 ಟೂರ್ನಿಯಲ್ಲಿ ಯೂಸುಫ್ ಅವರ ಅನುಮತಿ ನಿರಾಕರಿಸಲಾಗಿತ್ತು.
Advertisement
ಸದ್ಯ 37 ವರ್ಷದ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದರು. ಕ್ರಿಕೆಟ್‍ನಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಯುವಿ ಬಿಸಿಸಿಐ ನೊಂದಿಗೆ ಒಪ್ಪಂದ ಹೊಂದಿರುವ ಕಾರಣ ಅನುಮತಿ ಲಭಿಸುತ್ತ ಇಲ್ಲವಾ ಎಂದು ಕಾದು ನೋಡಬೇಕಿದೆ.