ಮುಂಬೈ: ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಪರ ಆಡಿದ್ದ ಯುವರಾಜ್ ಸಿಂಗ್ ವಿದೇಶಿ 20 ಟೂರ್ನಿಗಳತ್ತ ಮುಖ ಮಾಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ನಿವೃತ್ತಿ ಘೋಷಿಸಲು ಚಿಂತನೆ ನಡೆಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಫಾರ್ಮ್ ಸಮಸ್ಯೆಯಿಂದ ಟೀಂ ಇಂಡಿಯಾ ತಂಡದಿಂದ ದೂರವೇ ಉಳಿದಿರುವ ಯುವಿ ಮತ್ತೆ ತಂಡಕ್ಕೆ ಆಯ್ಕೆ ಆಗುವುದು ಕಷ್ಟಸಾಧ್ಯ ಎಂದು ಹಲವು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತ ಈ ಬಾರಿಯ ಐಪಿಎಲ್ ನಲ್ಲೂ ಯುವಿ ಕೇವಲ 4 ಪಂದ್ಯಗಳನಷ್ಟೇ ಆಡಲು ಅವಕಾಶ ಲಭಿಸಿತ್ತು.
Advertisement
Advertisement
ಸದ್ಯ ಯುವಿಗೆ ಗ್ಲೋಬಲ್ ಟಿ20 ಹಾಗೂ ಐರ್ಲೆಂಡ್ ನಲ್ಲಿ ನಡೆಯಲಿರುವ ಯುರೋ ಟಿ20 ಟೂರ್ನಿಗಳಿಂದ ಆಫರ್ ಲಭಿಸಿದ್ದು, ಈ ಸರಣಿಗಳಲ್ಲಿ ಭಾಗವಹಿಸ ಬೇಕಾದರೆ ಯುವಿ ನಿಯಮಗಳ ಅನ್ವಯ ನಿವೃತ್ತಿ ಘೋಷಿಸಬೇಕಾಗುತ್ತದೆ. ಯುವಿ ಫಸ್ಟ್ ಕ್ಲಸ್ ಕ್ರಿಕೆಟ್ ಹಾಗೂ ಬಿಸಿಸಿಐ ಟಿ20 ಅಂತರಾಷ್ಟ್ರಿಯ ಪಂದ್ಯಗಳಲ್ಲಿ ಆಡಲು ಒಪ್ಪಂದ ಮಾಡಿಕೊಂಡಿದ್ದು, ಪರಿಣಾಮ ವಿದೇಶಿ ಟೂರ್ನಿಗಳಲ್ಲಿ ಆಡಲು ಬಿಸಿಸಿಐ ಅನುಮತಿ ಅಗತ್ಯವಿದೆ.
Advertisement
ಕೆಲದಿನಗಳ ಹಿಂದೆಯಷ್ಟೇ ಟೀಂ ಇಂಡಿಯಾ ಹಿರಿಯ ಆಟಗಾರ ಇರ್ಫಾನ್ ಪಠಾಣ್ ಅವರು ಕೆರಿಬಿಯನ್ ಲೀಗ್ ನಲ್ಲಿ ಆಡಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇರ್ಫಾನ್ ಫಸ್ಟ್ ಕ್ಲಸ್ ಕ್ರಿಕೆಟ್‍ಗೆ ನಿವೃತಿ ಘೋಷಣೆ ಮಾಡಿರದ ಕಾರಣ ಬಿಸಿಸಿಐ ಹೆಸರನ್ನು ಹಿಂಪಡೆಯುವಂತೆ ಸೂಚಿಸಿತ್ತು. ಯುವರಾಜ್ ಸಿಂಗ್ ಅವರಿಗೂ ಇದೇ ನಿಯಮಗಳು ಅನ್ವಯವಾಗುವುದಿರಂದ ಯುವಿ ನಿವೃತ್ತಿ ಘೋಷಿಸಿ ವಿದೇಶಿ ಟೂರ್ನಿಗಳಲ್ಲಿ ಆಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ, ಇರ್ಫಾನ್ ಹೆಸರನ್ನು ಡ್ರಾಪ್ ಮಾಡುವಂತೆ ಹೇಳಿರುವುದರಿಂದ ಯುವರಾಜ್ ಅವರಿಗೂ ಈ ನಿಯಮಗಳನ್ನು ಪರಿಶೀಲಿಸಬೇಕಿದೆ. ಅವರು ಪ್ರಥಮ ದರ್ಜೆ ಕ್ರಿಕೆಟ್ ವಿದಾಯ ಹೇಳಿದರೂ ಕೂಡ ಬಿಸಿಸಿಐ ಅಡಿಯಲ್ಲಿ ಟಿ20 ಮಾದರಿಗೆ ನೋಂದಾಯಿಸಲಾಗಿರುವ ಸಕ್ರೀಯ ಆಟಗಾರರಾಗಿದ್ದಾರೆ ಎಂದು ಹೇಳಿದ್ದಾರೆ.