ಯುವರಾಜ್ ಸಿಂಗ್ ವಿರುದ್ಧ ತಮ್ಮನ ಪತ್ನಿಯಿಂದ ದೂರು ದಾಖಲು

Public TV
1 Min Read
YUVARAJ SINGH1

ನವದೆಹಲಿ: ಕಿರುಕುಳದ ಆರೋಪದ ಮೇಲೆ ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ ಅವರ ಕಿರಿಯ ಸಹೋದರನ ಪತ್ನಿ ದೂರು ದಾಖಲಿಸಿದ್ದಾರೆ.

ಬಿಗ್‍ಬಾಸ್ ನ 10ನೇ ಸೀಜನ್ ಸ್ಪರ್ಧಿಯೂ ಆಗಿದ್ದ ಯುವಿ ಸಹೋದರ ಜೋರಾವರ್ ಸಿಂಗ್ ಪತ್ನಿಯಾದ ಆಕಾಂಕ್ಷಾ ಶರ್ಮಾ, ಅತ್ತೆ ಶಾಬ್ನಂ ಸಿಂಗ್, ಪತಿ ಜರೋವರ್ ಸಿಂಗ್ ಹಾಗೂ ಭಾವ ಯುವರಾಜ್ ಸಿಂಗ್ ವಿರುದ್ಧ ಆಗಸ್ಟ್ ನಲ್ಲಿ ಡೊಮೆಸ್ಟಿಕ್ ವೈಲೆನ್ಸ್ ಆರೋಪದ ಮೇಲೆ ದೂರು ದಾಖಲಿಸಿದ್ದು, ಇದಕ್ಕೆ ಅಕ್ಟೋಬರ್ 21ರೊಳಗೆ ಉತ್ತರಿಸುವಂತೆ ಗುರಗಾಂವ್ ಕೋರ್ಟ್ ಯುವರಾಜ್ ಸಿಂಗ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

c0ac2b23 edf4 4bc7 97a1 58bc69900ed1

ಈ ಬಗ್ಗೆ ಸ್ಥಳೀಯ ಎಸ್‍ಡಿಎಂ ಅಥವಾ ಮಹಿಳಾ ಪೊಲೀಸ್ ತನಿಖೆ ನಡೆಸಿ, ಸಂಬಂಧಪಟ್ಟ ಕೋರ್ಟ್ ಗೆ ವರದಿ ಸಲ್ಲಿಸಲಿದ್ದಾರೆ. ನಂತರ ಕೋರ್ಟ್ ಮುಂದಿನ ತನಿಖೆ ಹೇಗೆ ನಡೆಸಬೇಕೆಂಬ ಬಗ್ಗೆ ನಿರ್ಧರಿಸಲಿದೆ.

ಈ ವಿಚಾರದ ಬಗ್ಗೆ ಆಕಾಂಕ್ಷಾ ಶರ್ಮಾ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ನಾನು ಈಗ ಮಾತನಾಡುವುದಿಲ್ಲ. ಅಕ್ಟೋಬರ್ 21 ರಂದು ವಿಚಾರಣೆಯಾದ ಬಳಿಕ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಆಕಾಂಕ್ಷಾ ಪರ ವಕೀಲರಾದ ಸ್ವಾತಿ ಸಿಂಗ್ ಮಲ್ಲಿಕ್ ಅವರು ಈ ಬಗ್ಗೆ ಮಾತನಾಡಿ, ಹೌದು ಆಕಾಂಕ್ಷಾ ಅವರು ಪತಿ, ಅತ್ತೆ ಮತ್ತು ಭಾವನ ಮೇಲೆ ಕಿರುಕುಳದ ಕೇಸ್ ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Yuvraj Singh with his mother

ಯುವಿ ಹೇಗೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾತಿ, ನೋಡಿ ಕಿರುಕುಳ ಎಂದರೆ ಬರಿ ದೈಹಿಕ ಕಿರುಕುಳವಲ್ಲ. ಅದು ಮಾನಸಿಕವಾಗಿರಬಹುದು ಹಾಗೂ ಹಣಕಾಸಿನ ವಿಚಾರದ ಹಿಂಸೆಯಾಗಿರಬಹುದು. ನನ್ನ ಕಕ್ಷಿದಾರರು ಜೋರಾವರ್ ಮತ್ತು ಅವರ ತಾಯಿಯಿಂದ ಅನುಭವಿಸಿದ ನೋವಿಗೆ ಯುವರಾಜ್ ಅವರು ಮೂಕ ಪ್ರೇಕ್ಷಕರಾಗಿದ್ದರು ಎಂದು ಹೇಳಿದರು.

yuvrajzorawar 3

Share This Article
Leave a Comment

Leave a Reply

Your email address will not be published. Required fields are marked *