ಬೆಂಗಳೂರು: ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘದ ವತಿಯಿಂದ ಇಲ್ಲಿನ ಗಾಂಧಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಲೇಖಕ ಹಾಗೂ ಪತ್ರಕರ್ತ ಡಾ.ಶರಣು ಹುಲ್ಲೂರು ಅವರಿಗೆ 2021ನೇ ಸಾಲಿನ `ಯುವ ಸಾಹಿತ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Advertisement
ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂದಿ ಶಾಂತಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ಕುಮಾರಪಾರ್ಕ್ನ ಗಾಂಧಿಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣು ಹುಲ್ಲೂರು ಅವರ `ಅನಂತವಾಗಿರು’ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗಜಾನನ ಶರ್ಮಾ ಅವರಿಗೆ `ಸಾಹಿತ್ಯ ರತ್ನ’, ಜಮೀಲ್ ಸಾವಣ್ಣ ಅವರಿಗೆ `ಪುಸ್ತಕ ರತ್ನ’ ಹಾಗೂ ಡಾ.ವಿಜಯಮ್ಮ ಅವರಿಗೆ `ಮುದ್ರಣ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಪ್ರಶಸ್ತಿಗಳು ತಲಾ 10 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದವು. ಇದನ್ನೂ ಓದಿ: ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ ಪ್ರಕರಣ – ಆರೋಗ್ಯ ಇಲಾಖೆಗೆ ಪತ್ರ ಬರೆದ ಡಿಹೆಚ್‍ಒ
Advertisement
Advertisement
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅವರು, ರಾಜ್ಯ ಸರ್ಕಾರ ಲೇಖಕರು, ಪ್ರಕಾಶಕರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ನಮ್ಮ ಬೇಡಿಕೆಗಳಿಗೆ ಸ್ಪಂಧಿಸುತ್ತಿಲ್ಲ. ಪ್ರತಿ ವರ್ಷ ನೀಡುವ 15 ಕೋಟಿ ರೂ.ಗಳ ಅನುದಾನದಲ್ಲಿ ಇನ್ನೂ 10 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದರಿಂದ ಪ್ರಕಟಣೆಗೆ ಸಜ್ಜಾಗಿರುವ ಎಷ್ಟೋ ಪುಸ್ತಕಗಳು ಮೂಲೆ ಸೇರುತ್ತಿವೆ. ಪೇಪರ್ ಬೆಲೆ ಹೆಚ್ಚಾಗುತ್ತಿದ್ದು ಮುಂದಿನ ದಿನಗಳಲ್ಲಿ ಪುಸ್ತಕ ಪ್ರಕಟಣೆಗೂ ಕಷ್ಟವಾಗಲಿದೆ ಎಂದು ಆತಂಕಪಟ್ಟರು.
Advertisement
ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಬೇಕು. ನಮ್ಮ ಬೇಡಿಕೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಬೇಕು. ಪ್ರತಿವರ್ಷ 15 ಕೋಟಿ ರೂ.ಗಳ ಅನುದಾನ ಮೀಸಲಿಡುವ ಜೊತೆಗೆ 500 ಪುಸ್ತಕಗಳನ್ನು ಸರ್ಕಾರದಿಂದಲೇ ಖರೀದಿಸುವಂತೆ ಒತ್ತಾಯಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಮೊದಲೆಲ್ಲಾ ಪ್ರಸಿದ್ಧ ಲೇಖಕರ ಪುಸ್ತಕಗಳು ಮಾತ್ರವೇ ಹೊರಬರುತ್ತಿದ್ದವು. ಕನ್ನಡ ಪುಸ್ತಕ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರವೇ ಉದಯೋನ್ಮುಖ ಲೇಖಕರೂ ಬೆಳಕಿಗೆ ಬರುವಂತಾಯಿತು. ಇಂದು ತಂತ್ರಜ್ಞಾನಗಳು ಬೆಳೆದಂತೆ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಯಾವುದೇ ಲೇಖಕರು, ಪ್ರಕಾಶಕರಿಗೆ ತೊಂದರೆ ಆದಾಗ ಮತ್ತೊಬ್ಬರು ಜೊತೆಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಅಫೇರ್ ಆರೋಪ ನಂತರ `ಅಣ್ಣ-ತಂಗಿ’ ಆಗಿಬಿಟ್ರಾ ನರೇಶ್-ಪವಿತ್ರಾ!
ಡಿ.ಕೆ.ಮಂಜುಳಾ ಅವರ `ಮುಕ್ತೆ’, ಕಂವೀ ಅವರ `ರಾಯಲ ಸೀಮಾ ಕಥೆಗಳು’, ಬಿ.ಓಬಯ್ಯ ಅವರ `ಬಯಕೆಯ ಬೆನ್ನೇರಿ’, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರ `ತೌಲನಿಕ ಸಾಹಿತ್ಯ ಮೀಮಾಂಸೆ’, ಕೇಶವ ರೆಡ್ಡಿ ಹಂದ್ರಾಳರ `ಬೆರಕೆ ಸೊಪ್ಪು’ ಹಾಗೂ ಹೃದಯಶಿವ ಅವರ `ಕ್ಲ್ಯಾಪ್‌ಬೋರ್ಡ್’ ಕೃತಿಗಳನ್ನು ಹಿರಿಯ ಪತ್ರಕರ್ತ ರವೀಂದ್ರ ಭಟ್ ಲೋಕಾರ್ಪಣೆಗೊಳಿಸಿದರು. ಇದನ್ನೂ ಓದಿ: ಶಾಸಕರು ತುಲಾಭಾರ ಮಾಡುವಷ್ಟು ಹಣ ಮಾಡ್ಕೊಂಡಿದ್ದಾರೆ, ಆದರೆ ಅವರಿಗೆ ಆಸ್ಪತ್ರೆ ಬೇಡ: ಚಕ್ರವರ್ತಿ ಸೂಲಿಬೆಲೆ
ವೇದಿಕೆಯಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೊಡೇ ಪಿ.ಕೃಷ್ಣ, ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಕಾರ್ಯದರ್ಶಿ ಆರ್.ದೊಡ್ಡೆಗೌಡ ಮೊದಲಾದವರು ಪಾಲ್ಗೊಂಡಿದ್ದರು.