CinemaDistrictsKarnatakaLatestLeading NewsMain PostMysuruSandalwood

ಯುವ ದಸರಾದಲ್ಲಿ ಅಪ್ಪು ನಮನ- ಗಂಧದ ಗುಡಿ ಟೀಸರ್ ನೋಡಿ ಕಣ್ಣೀರಿಟ್ಟ ಅಶ್ವಿನಿ

- ಕರ್ನಾಟಕ ರತ್ನನ ನೆನೆದ ಮೈಸೂರು ಜನ

– ಪುನೀತ್ ಹಾಡಿಗೆ ಸೊರೆಗೊಂಡ ಪ್ರೇಕ್ಷಕರ ಕಣ್ಮನ

ಮೈಸೂರು: ಅಭಿಮಾನಿಗಳ ಆರಾಧ್ಯದೈವ, ಕೋಟಿ ಹೃದಯಗಳ ಒಡೆಯ, ನಗುವಿನ ಪರಮಾತ್ಮ, ಕನ್ನಡದ ಕಂದ, ಕರ್ನಾಟಕ ರತ್ನ ಡಾ. ಪುನೀತ್ ರಾಜ್‍ಕುಮಾರ್ (Dr. Puneeth Raj Kumar). ಈ ಹೆಸರು ಕೇಳಿದ್ದೇನೆ ರೋಮಾಂಚನವಾಗುತ್ತೆ. ಹೀಗಿರುವಾಗ ಮೈಸೂರಿನ ಯುವ ದಸರಾ (Yuva Dasara) ದಲ್ಲಿ ಇಡೀ ರಾತ್ರಿ ಅಪ್ಪುಮಯವಾಗಿತ್ತು.

ಅಪ್ಪು.. ಅಪ್ಪು.. ಅಪ್ಪು.. ಎಲ್ಲೇ ನೋಡಿದ್ರೂ ಅಪ್ಪು.. ಎಲ್ಲೇ ಕೇಳಿದ್ರೂ ಅಪ್ಪು. ಕರ್ನಾಟಕ ರತ್ನ.. ಕನ್ನಡದ ಕಂದ.. ಡಾ. ಪುನೀತ್ ರಾಜ್‍ಕುಮಾರ್ ಅಗಲಿ 11 ತಿಂಗಳೇ ಕಳೆದಿದೆ. ಆದರೂ ಅಪ್ಪುವಿನ ಮೇಲಿನ ಅಭಿಮಾನ, ಪ್ರೀತಿ ಮಾತ್ರ ಕಿಂಚಿತ್ತು ಕಡಿಮೆ ಆಗಿಲ್ಲ. ಅದ್ದೂರಿ ಮೈಸೂರು ಯುವ ದಸರಾ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಈ ಬಾರಿಯ 6 ದಿನಗಳ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಮೇಳೈಸಿದ ದಸರಾ ವೈಭವ – ರಂಗೋಲಿ ಸ್ಪರ್ಧೆಯಲ್ಲಿ ಮಿಂಚಿದ ನಾರಿಯರು

‘ಅಪ್ಪು ನಮನ’ ಹೆಸರಲ್ಲಿ ಉದ್ಘಾಟಿಸಲಾಗಿದೆ. ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneeth Raj Kumar), ರಾಘಣ್ಣ, ದೀಪ ಬೆಳಗುವ ಮೂಲಕ ಚಾಲನೆ ಕೊಟ್ಟರು. ಯುವ ದಸರಾಗೆ ಚಾಲನೆ ಸಿಕ್ಕೊಡನೆ ಕೂಗಿ ಬಂದಿದ್ದು ಒಂದೇ ಕೂಗು ಅದು ಅಪ್ಪು.. ಅಪ್ಪು.. ಒಂದ್ಕಡೆ ಅಪ್ಪು ಹಾಡುಗಳಿಗೆ ಕಲಾವಿದರು ನೃತ್ಯ ಮಾಡ್ತಿದ್ರೇ ಇನ್ನೊಂದೆಡೆ ಯುವಕರು ಅಪ್ಪು ಭಾವಚಿತ್ರ ಹಿಡಿದು, ಮೊಬೈಲ್ ಟಾರ್ಚ್ ಹಾಕಿಕೊಂಡು ಕುಣಿದು ಕುಪ್ಪಳಿಸಿದ್ರು. ಇದನ್ನೂ ಓದಿ: ಪ್ರಮೋದಾ ದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ – ಫೋಟೋ ವೈರಲ್

ಅನುಶ್ರೀ (Anushree) ನಿರೂಪಣೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ಕೊಟ್ಟಿತ್ತು. ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕ ವಿಜಯ್ ಪ್ರಕಾಶ್, ಕುನಾಲ್ ಗಾಂಜಾವಾಲ, ಚೈತ್ರ, ಅನುರಾಧ ಭಟ್‍ರವರ ಗಾಯನ ಎಲ್ಲರ ಮನ ಸೆಳೆಯಿತು. ಅಪ್ಪು ಚಿತ್ರದ ಹಾಡಿಗೆ ನೃತ್ಯ ನೆರೆದಿದ್ದವರನ್ನು ಹುಚ್ಚೆದ್ದು ಕುಣಿಯುವಂತೆ ಮಾಡ್ತು. ಕಾರ್ಯಕ್ರಮದಲ್ಲಿ ಅಪ್ಪುವಿನ ಕನಸು ಗಂಧದಗುಡಿ ಟೀಸರ್ ಪ್ರಸಾರ ವೇಳೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಭಾವುಕರಾಗಿ ಕಣ್ಣೀರಿಟ್ಟರು. ಇದು ಎಂಥವರನ್ನು ಒಮ್ಮೆ ಮೌನವಾಗಿರುವಂತೆ ಮಾಡ್ತು.

Live Tv

Leave a Reply

Your email address will not be published. Required fields are marked *

Back to top button