ಚಿಕ್ಕು ಅಥವಾ ಸಪೋಟಾ ಹಣ್ಣಿನ ಹೆಸರು ಕೇಳಿದಾಗಲೇ ಬಾಯಲ್ಲಿ ನೀರೂರುತ್ತದೆ ಅಲ್ವಾ? ನಾವಿಂದು ಚಿಕ್ಕು ಬಳಸಿ ಸಿಹಿಯಾದ ಖೀರ್ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಚಿಕ್ಕುವಿನ ಸ್ವಾದ ಒಂದು ಬಾರಿ ಖೀರ್ ರೂಪದಲ್ಲೂ ಸವಿದು ನೋಡಿ. ಚಿಕ್ಕು ಖೀರ್ (Chikoo Kheer)ಮಾಡುವ ವಿಧಾನ ಹೀಗಿದೆ.
Advertisement
ಬೇಕಾಗುವ ಪದಾರ್ಥಗಳು:
ಚಿಕ್ಕು ಹಣ್ಣುಗಳು – 4
ಹಾಲು – ಒಂದೂವರೆ ಲೀಟರ್
ಅಕ್ಕಿ – 3 ಟೀಸ್ಪೂನ್
ಸಕ್ಕರೆ – 2 ಟೀಸ್ಪೂನ್
ಕತ್ತರಿಸಿದ ಒಣ ಹಣ್ಣುಗಳು – 4 ಟೀಸ್ಪೂನ್ (ಗೋಡಂಬಿ, ಪಿಸ್ತಾ, ಬಾದಾಮಿ ಯಾವುದಾದರೂ ಬಳಸಬಹುದು) ಇದನ್ನೂ ಓದಿ: ಸಿಂಪಲ್ ಆಗಿ ಮಾಡಿ ಬ್ರೆಡ್ ಹಲ್ವಾ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಅಕ್ಕಿಯನ್ನು ತೊಳೆದು, ಅರ್ಧ ಕಪ್ ನೀರಿನಲ್ಲಿ ಹಾಕಿ ನೆನೆಸಿಡಿ.
* ಚಿಕ್ಕು ಹಣ್ಣುಗಳನ್ನು ಸಿಪ್ಪೆಯಿಂದ ಬೇರ್ಪಡಿಸಿ, ಅರ್ಧಕ್ಕೆ ಕತ್ತರಿಸಿ, ಬೀಜಗಳನ್ನು ತೆಗೆದು ಹೋಳುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
* ಈಗ ತಳವಿರುವ ಪ್ಯಾನ್‌ನಲ್ಲಿ ಹಾಲನ್ನು ಬಿಸಿ ಮಾಡಿ, ತಳ ಸುಡದಂತೆ ಆಗಾಗ ಚಮಚದಿಂದ ಕೈಯಾಡಿಸಿ.
* ಹಾಲು ಕುದಿ ಬಂದ ಬಳಿಕ ಉರಿಯನ್ನು ಕಡಿಮೆ ಮಾಡಿ.
* ಈಗ ನೆನೆಸಿಟ್ಟ ಅಕ್ಕಿಯನ್ನು ನೀರಿನಿಂದ ಬೇರ್ಪಡಿಸಿ, ಕುದಿಯುತ್ತಿರುವ ಹಾಲಿಗೆ ಹಾಕಿ.
* ಅಕ್ಕಿ ಚೆನ್ನಾಗಿ ಬೇಯುವವರೆಗೆ ಸುಮಾರು 35-40 ನಿಮಿಷಗಳ ವರೆಗೆ ಕುದಿಸಿಕೊಳ್ಳಿ. (ಆಗಾಗ ಚಮಚದಿಂದ ಕೈಯಾಡಿಸುವುದನ್ನು ಮರೆಯಬೇಡಿ)
* ಈಗ ಸಕ್ಕರೆ ಸೇರಿಸಿ, 5 ನಿಮಿಷ ಬೇಯಿಸಿ.
* ಉರಿಯನ್ನು ಆಫ್ ಮಾಡಿ, ಖೀರ್ ಅನ್ನು ತಣ್ಣಗಾಗಲು ಬಿಡಿ.
* ಖೀರ್ ಸಂಪೂರ್ಣ ತಣ್ಣಗಾದ ಬಳಿಕ ಚಿಕ್ಕು ಪ್ಯೂರಿಯನ್ನು ಸೇರಿಸಿ ಮಿಶ್ರಣ ಮಾಡಿ.
* ಖೀರ್ ಅನ್ನು ಬೇಕೆಂದರೆ ನೀವು ಫ್ರಿಡ್ಜ್‌ನಲ್ಲಿ 3-4 ಗಂಟೆಗಳ ವರೆಗೆ ಇಡಬಹುದು.
* ಖೀರ್ ಅನ್ನು ಬೌಲ್‌ಗಳಿಗೆ ಸುರಿದು, ಒಣ ಹಣ್ಣುಗಳಿಂದ ಅಲಂಕರಿಸಿ ಸವಿಯಿರಿ. ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಮಾಡಿ ರುಚಿಕರವಾದ ಬೆಲ್ಲದ ಪರೋಟ