ನವದೆಹಲಿ: ಒಂದು ವಾರದ ಹಿಂದೆ ಬೃಂದಾವನದಲ್ಲಿ ರಾತ್ರಿಯ ಸಮಯದಲ್ಲಿ ಚಿತ್ರೀಕರಣಕ್ಕೆ ನಿರ್ಬಂಧಿಸಲಾಗಿದ್ದು, ಅದನ್ನು ಮೀರಿ ಶೂಟಿಂಗ್ ಮಾಡಿದ ಯೂಟ್ಯೂಬ್ ಚಾನೆಲ್ ನಿರ್ವಾಹಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬೃಂದಾವನದ ಧಾರ್ಮಿಕ ತಾಣವಾದ ‘ನಿಧಿವನ್ ರಾಜ್’ ಒಳಗೆ ಯಾರಿಗೂ ವೀಡಿಯೋ ಮಾಡಲು ಅವಕಾಶವಿಲ್ಲ. ಅದರೂ ಸಹ ಗೌರವ್‍ಜೋನ್ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಗೌರವ್ ಶರ್ಮಾ ವೀಡಿಯೋವನ್ನು ಶೂಟ್ ಮಾಡಲಾಗಿದೆ. ಈ ಹಿನ್ನೆಲೆ ಶರ್ಮಾ ಅವರನ್ನು ದೆಹಲಿಯ ಅವರ ನಿವಾಸದಲ್ಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಬೃಂದಾವನದ ‘ನಿಧಿವನ್ ರಾಜ್’ ಅಲ್ಲಿ ರಾತ್ರಿಯ ಸಮಯದಲ್ಲಿ ರಾಧೆ ಮತ್ತು ಭಗವಾನ್ ಶ್ರೀಕೃಷ್ಣ ‘ರಾಸ ಲೀಲಾ’ ಆಡುವ ಪವಿತ್ರ ಸ್ಥಳವಾಗಿದೆ. ಅದಕ್ಕೆ ಆ ಸಮಯದಲ್ಲಿ ಯಾರನ್ನು ಸ್ಥಳಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಆದರೆ ಶರ್ಮಾ ಅವರು ಆ ಜಾಗವನ್ನು ಅಪವಿತ್ರ ಮಾಡಿದಲ್ಲದೇ ನವೆಂಬರ್ 9 ರಂದು ಯೂಟ್ಯೂಬ್ ನಲ್ಲಿ ವೀಡಿಯೋವನ್ನು ಅಪ್‍ಲೋಡ್ ಮಾಡಿದ್ದಾರೆ. ಆದರೆ ಚಿತ್ರೀಕರಣವನ್ನು ಪುರೋಹಿತರು ವಿರೋಧಿಸಿದ ನಂತರ ಅದನ್ನು ಡಿಲೀಟ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಡಿ, ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು 5 ವರ್ಷ ವಿಸ್ತರಿಸಿದ ಕೇಂದ್ರ
Advertisement
‘ನಿಧಿವನ್ ರಾಜ್’ ಅರ್ಚಕ ರೋಹಿತ್ ಗೋಸ್ವಾಮಿ ಅವರ ದೂರಿನ ಮೇರೆಗೆ ಬೃಂದಾವನ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 295 ಎ ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 ರ ಅಡಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆ ಶರ್ಮಾ ಅವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆತನ ಜೊತೆಗಿದ್ದವರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾರ್ತಾಂಡ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.
Advertisement
ನವೆಂಬರ್ 6 ರ ರಾತ್ರಿ ಶೂಟಿಂಗ್ ಮಾಡಿದ್ದು, ಈ ವೇಳೆ ಶರ್ಮಾ ಅವರ ಸೋದರಸಂಬಂಧಿ ಪ್ರಶಾಂತ್, ಸ್ನೇಹಿತರಾದ ಮೋಹಿತ್ ಮತ್ತು ಅಭಿಷೇಕ್ ಅವರೊಂದಿಗೆ ‘ಪವಿತ್ರ’ ಸ್ಥಳದಲ್ಲಿ ವೀಡಿಯೋವನ್ನು ಚಿತ್ರೀಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಹಿಂದೆಯು ಶರ್ಮಾ ಅವರು, ಇದೇ ವರ್ಷದ ಮೇ ತಿಂಗಳಲ್ಲಿ ನಾಯಿ ಡಾಲರ್ ಅನ್ನು ಬಲೂನ್‍ಗಳಿಗೆ ಕಟ್ಟಿ ಗಾಳಿಯಲ್ಲಿ ತೇಲುವಂತೆ ವೀಡಿಯೋವನ್ನು ಮಾಡಿ ತಮ್ಮ ಚಾನೆಲ್‍ನಲ್ಲಿ ಪೋಸ್ಟ್ ಮಾಡಿದರು. ಈ ಪರಿಣಾಮ ಅವರನ್ನು ಬಂಧಿಸಲಾಗಿತ್ತು. ನಂತರ ವೀಡಿಯೋವನ್ನು ಡಿಲೀಟ್ ಮಾಡಿ ತನ್ನ ಕೃತ್ಯಕ್ಕೆ ಕ್ಷಮೆ ಯಾಚಿಸಿದ್ದರು. ಇದನ್ನೂ ಓದಿ: ಇಂದಿನಿಂದ ಶಬರಿಮಲೆ ಯಾತ್ರೆ ಆರಂಭ – 2 ಡೋಸ್ ಲಸಿಕೆ ಕಡ್ಡಾಯ