ಬೆಂಗಳೂರು ಮೂಲದ ಖ್ಯಾತ ಯೂಟ್ಯೂಬರ್ ನಿಹಾರಿಕಾ ಎನ್.ಎಂ (Niharika) ವಿಭಿನ್ನ ಕಂಟೆಂಟ್‌ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಇದೀಗ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ಎಂಟ್ರಿ ಕೊಡಲು ನಿಹಾರಿಕಾ ರೆಡಿಯಾಗಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ತಾಯಿಯ ಪಾತ್ರದಲ್ಲಿ ವಿಜಯ ಶಾಂತಿ
ನಿಹಾರಿಕಾ ಈಗ ಕಂಟೆಂಟ್ ಕ್ರಿಯೇಟರ್‌ನಿಂದ ನಾಯಕಿಯಾಗಿ ಬಡ್ತಿ ಪಡೆಯುತ್ತಿದ್ದಾರೆ. ತೆಲುಗು ಅಲ್ಲ, ಬದಲಿಗೆ ತಮಿಳು ಚಿತ್ರದ (Tamil Films) ಮೂಲಕ ಎಂಟ್ರಿ ಕೊಡ್ತಿದ್ದಾರೆ. ನಿಹಾರಿಕಾ ನಾಯಕಿಯಾಗಿ ನಟಿಸಲಿರುವ ಸಿನಿಮಾವನ್ನು ದಕ್ಷಿಣದ ಪ್ರಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ನಿರ್ಮಾಣ ಮಾಡುತ್ತಿದೆ. ಅಥರ್ವ (Actor Atharva)ಈ ಚಿತ್ರದ ನಾಯಕನಾಗಿದ್ದು, ಆಕಾಶ್ ಭಾಸ್ಕರನ್ ಈ ಚಿತ್ರವನ್ನ ನಿರ್ದೇಶಿಸಲಿದ್ದಾರೆ.
View this post on Instagram
ಇನ್ನೂ ಹೆಸರಿಡದ ಈ ಚಿತ್ರ ಪಕ್ಕಾ ಹಾಸ್ಯ ಪ್ರಧಾನ ಸಿನಿಮಾವಾಗಿದೆ. ರೊಮ್ಯಾನ್ಸ್ ಜೊತೆಗೆ ಕಾಮಿಡಿ ಇರುವ ರೋಡ್ ಟ್ರಿಪ್ ಈ ಚಿತ್ರದ ಜೀವಾಳ. ಸಂಗೀತ ನಿರ್ದೇಶಕ ಎಸ್.ಥಮನ್ ಈ ಚಿತ್ರದ ಸಂಗೀತ ನಿರ್ದೇಶಕರು. ಈ ಚಿತ್ರದಲ್ಲಿ ಅವರು ಪಾತ್ರವೊಂದನ್ನು ಕೂಡ ನಿರ್ವಹಿಸುತ್ತಿದ್ದಾರೆ. ಚಿತ್ರದ ತಾಂತ್ರಿಕ ವಿಭಾಗದಲ್ಲಿ ಯಾರೆಲ್ಲ ಕೆಲಸ ಮಾಡಲಿದ್ದಾರೆ ಅನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸ ಆರಂಭವಾಗಿದ್ದು, ಶೀಘ್ರದಲ್ಲಿಯೇ ಚಿತ್ರದ ಮುಹೂರ್ತ ನೆರವೆರಲಿದೆ.
ಅಂದಹಾಗೆ, ನಿಹಾರಿಕಾ ಬೇಡಿಕೆ ಎಷ್ಟಿದೆ ಎಂದರೆ, ನ್ಯಾಷನಲ್ ಸ್ಟಾರ್ ಯಶ್ (Yash) ‘ಕೆಜಿಎಫ್ 2’ ಚಿತ್ರದ ಬಿಡುಗಡೆ ಸಮಯದಲ್ಲಿ, ನಿಹಾರಿಕಾ ಅವರನ್ನ ಚಿತ್ರದ ಪ್ರಚಾರಕ್ಕೆ ಬಳಸಿಕೊಂಡಿದ್ದರು. ಆ ಕಾಲಕ್ಕೆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು. ತೆಲುಗಿನ ಮಹೇಶ್ ಬಾಬು, ವಿಜಯ್ ದೇವರಕೊಂಡ (Vijay Devarakonda) ಅವರಿಂದ ಹಿಡಿದು ಬಾಲಿವುಡ್‌ನ ರಣ್‌ಬೀರ್ ಕಪೂರ್, ಪ್ರಿಯಾಂಕಾ ಚೋಪ್ರಾವರೆಗೂ ನಿಹಾರಿಕಾ ಜೊತೆ ಸಿನಿಮಾ ಪ್ರಚಾರ ಮಾಡಿಸಿಕೊಂಡಿದ್ದಾರೆ. ಇದೀಗ ನೆಚ್ಚಿನ ಯೂಟ್ಯೂಬರ್ ನಾಯಕಿಯಾಗಿರೋದು ಸಹಜವಾಗಿ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.