ವಿಜಯಪುರ: ಟ್ರ‍್ಯಾಕ್ಟರ್‌ನಲ್ಲಿ ಲೋಡ್ ಮಾಡಿದ್ದ ಕಬ್ಬಿನಿಂದ ಯುವಕರು ಭಾರತದ ನಕ್ಷೆ ಸೃಷ್ಟಿಸಿ ಘಟನೆ ಜಿಲ್ಲೆಯ ದೇವರಹಿಪ್ಪರಗಿ (Devara Hipparagi) ತಾಲೂಕಿನ ವಂದಾಲ ಗ್ರಾಮದ ಬಳಿ ನಡೆದಿದೆ.ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸರ್ಕಾರದ ವೇತನ; ಸಮಿತಿ ರದ್ದಿಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಕಬ್ಬು ಕಟಾವು ಮಾಡಿ ಟ್ರ‍್ಯಾಕ್ಟರ್‌ಗೆ ಲೋಡ್ ಮಾಡಿದ ಬಳಿಕ ಯುವಕರು ಅದರಲ್ಲಿ ಭಾರತ ನಕ್ಷೆ ರಚಿಸಿದ್ದಾರೆ. ಬಳಿಕ ನಕ್ಷೆಗೆ ಕೇಸರಿ, ಬಿಳಿ, ಹಸಿರು ಬಣ್ಣದಿಂದ ನಕ್ಷೆಗೆ ಅಲಂಕಾರ ಮಾಡಿ ಸಂತಸಪಟ್ಟಿದ್ದಾರೆ. ಜೊತೆಗೆ ನಕ್ಷೆಯೊಳಗಡೆ ರಾಯಣ್ಣ ಭಾವಚಿತ್ರವಿಟ್ಟು ದೇಶಭಕ್ತಿಯನ್ನು ಮೆರೆದಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಕಬ್ಬು ಕಟಾವು ಮಾಡುವುದರಲ್ಲಿ ತೊಡಗಿದ್ದ ಯುವಕರು, ಒಟ್ಟು 20,151 ಟನ್ ಕಬ್ಬು ಕಟಾವು ಮಾಡಿ ಸಾಧನೆಗೈದಿದ್ದಾರೆ.ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ನನ್ನು ಪೊಲೀಸರ ವಶದಿಂದ ಬಿಡಿಸಲು ಯತ್ನ – ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಅಮನ್ ಸಾವೊ!