ಬೆಂಗಳೂರು: ಕೋದಂಡರಾಮಪುರ ಇಬ್ಬರು ಯುವಕರ ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ ಮೃತರ ಮರಣೊತ್ತರ ಪರೀಕ್ಷೆಯಲ್ಲಿ ಸತ್ಯ ಬಯಲಾಗಿದ್ದು, ಮಾದಕವಸ್ತು ಅಂಶವಿರುವ ಮಾತ್ರೆಯನ್ನು ಸೇವಿಸಿ ಯುವಕರು ಸಾವನ್ನಪ್ಪಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಮೃತ ಯುವಕರು ಹಾಗೂ ಅವರ ಸ್ನೇಹಿತರು ಟೈಡಾಲ್ ಎಂಬ ಮಾದಕವಸ್ತು ಅಂಶವಿರೋ ಮಾತ್ರೆಯನ್ನು ಗೆಳೆಯನ ಹುಟ್ಟುಹಬ್ಬದ ಪಾರ್ಟಿ ವೇಳೆ ಸೇವಿಸಿದ್ದರು. ಟೈಡಾಲ್ ಮಾತ್ರೆಯಲ್ಲಿ ಮಾದಕವಸ್ತು ಅಂಶವಿರುತ್ತದೆ. ಟೈಡಾಲ್ ಮಾತ್ರೆ ಸೇವನೆಯಿಂದ ನಶೆ ಏರುತ್ತದೆ ಹಾಗೆಯೇ ಯುವಕರಿಗೆ ಇದು ಸುಲಭವಾಗಿ ಸಿಗುವ ಔಷಧಿಯಾಗಿದೆ. ಹೀಗಾಗಿ ನಶೆಗಾಗಿ ಯುವಕರು ಪಾರ್ಟಿ ಮಾಡುವ ವೇಳೆ ಇದನ್ನು ಸೇವಿಸಿದ್ದಾರೆ ಎನ್ನುವುದು ಬಯಲಾಗಿದೆ. ಇದನ್ನೂ ಓದಿ:ಗೆಳೆಯನ ಬರ್ತ್ ಡೇ ಪಾರ್ಟಿ ಮಾಡಿದ್ದ ಇಬ್ಬರು ಬಲಿ, 6 ಮಂದಿ ಸ್ಥಿತಿ ಗಂಭೀರ
Advertisement
Advertisement
ಟೈಡಾಲ್ ಮಾತ್ರೆಯನ್ನು ಡಿಸ್ಟಿಲ್ ವಾಟರ್‌ನಲ್ಲಿ ಬೆರೆಸಿ ಸಿರಿಂಜ್ ಮೂಲಕ ಯುವಕರು ತಮ್ಮ ದೇಹಕ್ಕೆ ಇಂಜೆಕ್ಟ್ ಮಾಡಿಕೊಂಡಿದ್ದಾರೆ. 17ರಂದು ಮೂರು ಮಂದಿ ಯುವಕರು ಈ ಟೈಡಾಲ್ ಮಾತ್ರೆಯನ್ನು ತೆಗೆದುಕೊಂಡಿದ್ದರು. ಆದರೆ ಅವರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಮಾತ್ರೆ ಹೇಗೆ ತಂದರು? ಈ ಹಿಂದೆ ಇದನ್ನು ಸೇವಿಸಿದ್ದರಾ ಅನ್ನೋದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೂರು ಮಂದಿ ಸೇರಿ ಮಾತ್ರೆ ತೆಗೆದುಕೊಂಡು ಬಂದಿದ್ದರು ಅನ್ನೋದು ಗೊತ್ತಾಗಿದೆ. ಬೇರೆವರ ಬಗ್ಗೆ ಮಾಹಿತಿ ಇಲ್ಲ. ಯುವಕರು ಈ ಮಾತ್ರೆಯನ್ನು ಸಿರಿಂಜ್ ಮೂಲಕ ತೆಗೆದುಕೊಂಡಿದ್ದಾರೆ. ಆಸ್ಪತ್ರೆಗೆ ಯುವಕರು ಅಡ್ಮಿಟ್ ಆದಮೇಲೆ ಮಾತ್ರೆ ತೆಗೆದುಕೊಂಡಿರೋ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಅಕ್ರಮವಾಗಿ ಮೆಡಿಕಲ್ ಸ್ಟೋರ್‌ನಿಂದ ಮಾರಾಟವಾಗಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಇದು ಹೆಚ್ಚಾಗಿ ಬಳಸಿದರೆ ಇದರ ನಶೆ ಅಡಿಟ್ ಆಗುತ್ತಾರೆ ಎಂದು ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಠೋರ್ ಹೇಳಿದ್ದಾರೆ.
Advertisement
Advertisement
ರಾತ್ರಿ ಪಾರ್ಟಿ ಮಾಡಿದ ಬಳಿಕ ಯುವಕರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಯ್ಯಾಲಿಕಾವಲ್ ಪೊಲೀಸರು ಅಸ್ವಸ್ಥರ ಪೈಕಿ ಸುಮನ್ ಎಂಬ ಯುವಕನಿಂದ ಹೇಳಿಕೆ ಪಡೆದಿದ್ದಾರೆ. ಈ ಮಾತ್ರ ಸೇವನೆಯಿಂದ ಗೋಪಿ ಹಾಗೂ ಅಭಿಲಾಷ್ ಮೃತಪಟ್ಟಿದ್ದು, ಎರಡೂ ಶವಗಳ ಮತಣೋತ್ತರ ಪರೀಕ್ಷೆ ಮುಗಿಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಪೊಲೀಸರು ಒಪ್ಪಿಸಿದ್ದಾರೆ.
ಸದ್ಯ ಈ ಸಂಬಂಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಯುಡಿಆರ್ ಕೇಸ್ ದಾಖಲಾಗಿದೆ. ಅಲ್ಲದೆ ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
ಮಲ್ಲೇಶ್ವರಂ ಕೋದಂಡರಾಮಪುರದಲ್ಲಿ ಈ ಘಟನೆ ನಡೆದಿದೆ. ಪಾರ್ಟಿ ಮುಗಿಸಿ ಬಂದ ಅಭಿಲಾಷ್, ಗೋಪಿ ದುರ್ಮರಣ ಹೊಂದಿದ್ದು, ಮತ್ತೊಬ್ಬ ಯುವಕ ಕೂಡ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆದರೆ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ಚಿಟ್ಟೆ ಅಲಿಯಾಸ್ ಸುಮನ್ ಸೇರಿದಂತೆ 6 ಮಂದಿ ಯುವಕರ ಸ್ಥಿತಿ ಗಂಭೀರವಾಗಿದೆ.
ಈ ಯುವಕರು ಮಂಗಳವಾರ ಗೆಳೆಯನ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದರು. ಹುಟ್ಟುಹಬ್ಬದ ಸೆಲೆಬ್ರೇಷನ್ ಅಂತ ಯುವಕರು ಗಾಂಜಾ ಸೇವನೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ತಡರಾತ್ರಿವರೆಗೂ ಪಾರ್ಟಿ ಮಾಡಿ ಮನೆಗೆ ತೆರೆಳಿದ್ದ ಯುವಕರು ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.