ಬೆಂಗಳೂರು: ಬೈಕ್ ಕ್ರೇಜ್ ಅನ್ನೋದು ಎಲ್ಲ ಯುವಕರಿಗೂ ಇದ್ದೆ ಇರುತ್ತೆ. ತಂದೆ ತಾಯಿ ಬಳಿ ಹೇಗೋ ಕಾಡಿ ಬೇಡಿ ಬೈಕ್ ತಗೆಸಿಕೊಳ್ಳುತ್ತಾರೆ. ಆದರೇ ಅದರಲ್ಲಿ ಅದೆಷ್ಟೋ ಯುವಕರು ಬೈಕ್ ನಲ್ಲಿ ಸ್ಟಂಟ್ಸ್ ಮಾಡೋ ಹುಚ್ಚು ಸಾಹಸಕ್ಕೆ ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅದ್ರೂ ಇನ್ನೂ ಬುದ್ಧಿ ಕಲಿಯದ ಇತಂಹ ಯುವಕರು ವೀಲ್ಹಿಂಗ್ ಮಾಡಿ ಬೇರೆ ವಾಹನ ಸವಾರರಿಗೂ ಕಿರಿಕಿರಿ ಮಾಡ್ತಿದ್ದಾರೆ.
ಪುಂಡ ಯುವಕರು ವೀಲ್ಹಿಂಗ್ ಮಾಡೋ ಸಮಯದಲ್ಲಿ ಸಾರ್ವಜನಿಕರು ಆರ್ನ್ ಸಹ ಮಾಡುವಂತಿಲ್ಲ. ಮಾಡಿದ್ರೂ ಅವರ ವಿರುದ್ಧವೇ ಮುಗಿ ಬೀಳ್ತಾರೆ. ದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ರಿಕ್ಷಾ ಚಾಲಕನ ಕಾಲರ್ ಎಳೆದಾಡಿ ಕಪಾಳಮೋಕ್ಷ ಮಾಡಿದ್ಲು
ಪೊಲೀಸರ ಭಯವಿಲ್ಲದೇ ವೀಲ್ಹಿಂಗ್: ಬೈಕ್‌ಗಳಿಗೆ ಎರಡು ವೀಲ್ ಕೊಟ್ಟಿರೋದು ಯಾಕೇ ಅನ್ನೋ ಪ್ರಶ್ನೆ ಇತಂಹ ಯುವಕರು ಬೈಕ್ ಓಡಿಸುವಾಗ ಮೂಡದೇ ಇರದು. ತಮ್ಮ ಹುಚ್ಚಾಟಕ್ಕೆ ಅಕ್ಕಪಕ್ಕ ಬರೋ ವಾಹನ ಸವಾರರಿಗೂ ಆತಂಕ ಮೂಡಿಸುತ್ತಾ ಬೈಕ್ ರೈಡ್ ಮಾಡ್ತಾರೆ. ವೀಲ್ಹಿಂಗ್ ಮಾಡಿ ಅದೆಷ್ಟೋ ಯುವಕರು ಕೈಕಾಲು ಮುರಿದುಕೊಂಡಿದ್ದಾರೆ, ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನೂ ಬೇರೆ ವಾಹನಗಳಿಗೂ ಸಮಸ್ಯೆ ಉಂಟುಮಾಡಿದ್ದಾರೆ.
ಹೌದು ನಿನ್ನೆ ಮಧ್ಯಾಹ್ನ ಯಶವಂತಪುರದಿಂದ ವಿಜಯನಗರಕ್ಕೆ ಹೋಗುವ ವೆಸ್ಟ್ ಆಫ್ ಗಾರ್ಡ್ ರೋಡ್ ನಲ್ಲಿ ಎರಡು ಬೈಕ್ ಗಳಲ್ಲಿ ಹೋಗ್ತಿದ್ದ ನಾಲ್ವರು ಯುವಕರ ತಂಡ ವೀಲ್ಹಿಂಗ್ ಮಾಡ್ತಾ ರಸ್ತೆಯಲ್ಲಿ ಹುಚ್ಚಾಟ ಆಡ್ತ ಹೋಗಿದ್ದಾರೆ. ಇದನ್ನೂ ಓದಿ: 5,000 ರೂಪಾಯಿಯಿಂದ ಕೋಟ್ಯಧಿಪತಿಯಾದ ಜುಂಜುನ್‌ವಾಲ ಜೀವನ ರೋಚಕ
ಇತಂಹ ವೀಲ್ಹಿಂಗ್ ನಿಂದ ಅವ್ರ ಜೀವಕ್ಕೆ ಮಾತ್ರವಲ್ಲ ರಸ್ತೆಯಲ್ಲಿ ಸಂಚಾರ ಮಾಡೋ ಇತರ ವಾಹನ ಸವಾರರಿಗೂ ಜೀವ ಭಯ ಸೃಷ್ಟಿಯಾಗ್ತಿದೆ. ಹೌದು ಹೀಗೆ ವೀಲ್ಹಿಂಗ್ ಮಾಡೋದನ್ನ ತಡೆಯಲು ಪೊಲೀಸ್ರು ಸಾಕಷ್ಟು ಕ್ರಮ ಕೈಗೊಂಡಿದ್ರು. ಇತಂಹ ಯುವಕರು ಮಾತ್ರ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಇವರಿಗೆ ಪೊಲೀಸರು ಫೈನ್ ಹಾಕೋದರ ಜೊತೆಗೆ ಕಠಿಣ ಶಿಕ್ಷೆ ನೋಡೋ ಕಾನೂನು ಜಾರಿಗೆ ತಂದ್ರೇ ಆಗಲಾದ್ರು ಕಡಿವಾಣ ಬೀಳಬಹುದು ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದೆ.