ಯಾದಗಿರಿ: ಕ್ಷುಲ್ಲಕ ಕಾರಣಕ್ಕಾಗಿ ಎರಡು ಕುಟುಂಬಗಳ ನಡುವೆ ಬಡಿದಾಟದಿಂದ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಸುರಪುರ ತಾಲೂಕಿನಲ್ಲಿ ನಗನೂರು ಗ್ರಾಮದಲ್ಲಿ ನಡೆದಿದೆ.
ನಗನೂರು ಗ್ರಾಮದ ಬಸವರಾಜ್ ಹಾಗೂ ಸದಾಶಿವ ಗಂಭೀರ ಗಾಯಗೊಂಡವರು. ಬಸವರಾಜ್ ಹಾಗೂ ಸದಾಶಿವ ಇಬ್ಬರೂ ಎತ್ತಿನ ಬಂಡಿ ಮೇಲೆ ಜಮೀನಿಗೆ ತೆರಳುತ್ತಿದ್ದಾಗ ಮೈಲಾರಿ, ಮುದಕಪ್ಪ, ಯಲ್ಲಪ್ಪ, ಸೇರಿ 9 ಜನರಿಂದ ಮಾರಣಾಂತಿಕ ಹಲ್ಲೆ ನಡೆದಿದೆ.
Advertisement
Advertisement
ಗಲಾಟೆ ಯಾಕೆ..?: ಬಸವರಾಜಣ್ಣ, ಸದಾಶಿವ ಎತ್ತಿನ ಬಂಡಿಯಲ್ಲಿ ಜಮೀನಿಗೆ ತೆರಳ್ತಿದ್ದ ವೇಳೆ, ಮೈಲಾರಿ ಕುಟುಂಬಸ್ಥರು ರಸ್ತೆಯಲ್ಲೇ ಕುರಿಬಲಿ ಕೊಟ್ಟಿದ್ರು. ರಸ್ತೆಯಲ್ಲಿ ಕುರಿ ಬಲಿ ಕೊಟ್ಟಿದ್ದನ್ನ ನೋಡಿ ಎತ್ತುಗಳು ಬೆದರಿದವು. ಹೀಗಾಗಿ ದಾರಿಯಲ್ಲಿ ಏಕೆ ಕುರಿ ಬಲಿ ಕೊಟ್ಟಿದ್ದೀರಿ ಅಂತ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಕುಡಿದು ದೇಗುಲದ ಗೋಡೆಗೆ ಮೂತ್ರ ವಿಸರ್ಜಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಆಕ್ಸಿಡೆಂಟ್ ಮಾಡಿ ಬಾಲಕನ ಕೊಲೆ
Advertisement
Advertisement
ಪ್ರಶ್ನೆ ಮಾಡಿದ್ದನ್ನೇ ನೆಪಮಾಡಿಕೊಂಡ ಮೈಲಾರಿ, ಮುದುಕಪ್ಪ, ಯಲ್ಲಪ್ಪ ಸೇರಿದಂತೆ ಕುಟುಂಬಸ್ಥರೆಲ್ಲರೂ ಯುವಕರ ಮೇಲೆ ಎರಗಿ, ಮನಸ್ಸೋ ಇಚ್ಛೆ ಥಳಿಸಿದ್ದಾರೆ. 9 ಜನರ ದಾಳಿಗೆ ಒಳಗಾದ ಬಸವರಾಜ, ಸದಾಶಿವ ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Web Stories