ಕಿಲಾಡಿಯನ್ನ ಭೇಟಿಯಾಗಲು 900 ಕಿ.ಮೀ ನಡೆದು ಬಂದ ಯುವಕ

Public TV
1 Min Read
akshay kumar

– ಪ್ಲೀಸ್ ಹೀಗೆ ಮಾಡ್ಬೇಡಿ ಎಂದ ಅಕ್ಷಯ್

ಮುಂಬೈ: ನಟ ಹಾಗೂ ನಟಿಯ ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ತಮ್ಮ ಅಭಿಮಾನವನ್ನು ಪ್ರದರ್ಶಿಸುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗಲು ಯುವಕನೊಬ್ಬ 900 ಕೀ.ಮೀ ನಡೆದುಕೊಂಡು ಬಂದಿದ್ದಾನೆ.

ಹೌದು. ಪರ್ಬತ್ ಎಂಬ ಯುವಕ ಅಕ್ಷಯ್ ಕುಮಾರ್ ನನ್ನು ಭೇಟಿಯಾಗಲೆಂದೇ ದ್ವಾರಕಾದಿಂದ ಮುಂಬೈವರೆಗೆ ನಡೆದುಕೊಂಡೇ ಬಂದಿದ್ದಾನೆ. ಮುಂಬೈಗೆ ತಲುಪಲು ಆತ 18 ದಿನ ತೆಗೆದುಕೊಂಡಿದ್ದು, ಇಂದು ನಟನನ್ನು ಭೇಟಿಯಾಗುವ ಮೂಲಕ ತನ್ನ ಕನಸನ್ನು ನನಸು ಮಾಡಿದ್ದಾನೆ.

ಈ ವಿಚಾರವನ್ನು ಅಕ್ಷಯ್ ಕುಮಾರ್ ಅವರು, ಪರ್ಬತ್ ಜೊತೆಗಿನ ಸೆಲ್ಫಿಯೊಂದಿಗೆ ಟ್ವೀಟ್ ಮಾಡಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಟ್ವೀಟ್ ನಲ್ಲಿ, ಇಂದು ನಾನು ಪರ್ಬತ್ ಅವರನ್ನು ಭೇಟಿಯಾಗಿದ್ದೇನೆ. ಆತ ದ್ವಾರಕಾದಿಂದ ಸುಮಾರು 900 ಕಿ.ಮೀ ನಡೆದುಕೊಂಡೇ ಬಂದಿದ್ದಾನೆ. 18 ದಿನ ನಡೆದು ಮುಂಬೈಗೆ ಸೇರಬೇಕು. ಭಾನುವಾರ ನನ್ನನ್ನು ಭೇಟಿಯಾಗಬೇಕೆಂದು ಯೋಜನೆ ಹಾಕಿಕೊಂಡಿದ್ದನು. ಅಂತೆಯೇ ಇಂದು ನಾನು ಅವನಿಗೆ ಸಿಕ್ಕಿದ್ದೇನೆ ಎಂದಿದ್ದಾರೆ.

ಅಲ್ಲದೆ ಅಕ್ಷಯ್ ಕುಮಾರ್ ಅವರು ಪರ್ಬತ್ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಯುವಕ ಅಷ್ಟು ದೂರ ನಡೆದುಕೊಂಡು ಬಂದಿರುವುದರ ಬಗ್ಗೆ ರಿವೀಲ್ ಮಾಡಿದ್ದಾನೆ. ನಾನು ಫಿಟ್ ಆಗಿದ್ದೇನೆ. ನಡೆಯುವ ಬಗ್ಗೆ ಜನರಿಗೆ ಒಂದು ಒಳ್ಳೆಯ ಸಂದೇಶ ರವಾನಿಸಬೇಕು ಎನ್ನುವ ನಿಟ್ಟಿನಲ್ಲಿ ದ್ವಾರಕಾದಿಂದ ಇಲ್ಲಿಗೆ ನಡೆದುಕೊಂಡೇ ಬಂದಿದ್ದೇನೆ. ಆರೋಗ್ಯದ ದೃಷ್ಟಿಯಿಂದ ನಾವೆಲ್ಲರೂ ಹೆಚ್ಚು ನಡೆಯಬೇಕು ಎಂದಿದ್ದಾನೆ.

ತನ್ನ ನೆಚ್ಚಿನ ನಟನನ್ನು ಭೇಟಿಯಾದ ಪರ್ಬತ್ ಸಂತಸ ವ್ಯಕ್ತಪಡಿಸಿದ್ದಾನೆ. ಬಳಿಕ ಯುವಕನಿಗೆ ನಟ ಇಂತಹ ಕೆಲಸಗಳನ್ನು ಮಾಡಲು ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ. ಸಮಯವನ್ನು ನಿಮಗೋಸ್ಕರ ಮೀಸಲಿಡಿ. ಒಳ್ಳೆಯ ಕೆಲಸಗಳನ್ನು ಮಾಡಿ. ಇದರಿಂದ ನಾನು ಖುಷಿ ಪಡುತ್ತೇನೆ. ಪರ್ಬತ್ ನಿಮಗೆ ಶುಭವಾಗಲಿ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *