ದಂಡ ಕಟ್ಟಿಸ್ಕೊಂಡು ಗಾಡಿ ಬಿಡಲೇ, ಬಂಡವಾಳ ಹಾಕಿದ್ದು ನಮ್ಮಪ್ಪ, ನಿಮ್ಮಪ್ಪ ಅಲ್ಲ-ಪೇದೆಗೆ ಅವಾಜ್ ಹಾಕಿದ ಪುಂಡ

Public TV
1 Min Read
RMG Police

ರಾಮನಗರ: ವಾಹನ ಸವಾರರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದಾಗ ಪೊಲೀಸರು ದಂಡ ಹಾಕುತ್ತಾರೆ. ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿದ್ರು ಅವುಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ಆದ್ರೆ ಜಿಲ್ಲೆಯ ಚನ್ನಪಟ್ಟಣದ ಸಾತನೂರು ಸರ್ಕಲ್ ಬಳಿ ಪುಂಡ ಯುವಕನೊಬ್ಬ ಪರಿಶೀಲನೆ ನಡೆಸುತ್ತಿದ್ದ ಕರ್ತವ್ಯ ನಿರರ ಪೇದೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆಗೂ ಮುಂದಾಗಿದ್ದಾನೆ.

rmg police 1

ಪೊಲೀಸ್ ಪೇದೆ ಎಂದಿನಂತೆ ಸಾತನೂರು ಸರ್ಕಲ್ ಬಳಿ ವಾಹನಗಳ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಪೇದೆ ಯುವಕನ ಸ್ಕೂಟಿಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಸ್ಕೂಟಿಯನ್ನು ವಶಕ್ಕೆ ಪಡೆಯುತ್ತಿದ್ದಂತೆ ಕೋಪಗೊಂಡ ಯುವಕ ಗಾಡಿಗೆ ಬಂಡವಾಳ ಹಾಕಿದ್ದು ನಮ್ಮಪ್ಪ, ನಿಮ್ಮಪ್ಪ ಅಲ್ಲ. ನಿಮ್ಮ ಅಂತಹವರನ್ನು ಬೆಂಗಳೂರಲ್ಲಿ ಸಾಕಷ್ಟು ನೋಡಿದ್ದೇನೆ. ಫೈನ್ ಕಟ್ಟಿಸಿಕೊಂಡು ಗಾಡಿ ಬಿಡಲೇ ಎಂದು ಏಕವಚನದಲ್ಲಿಯೇ ಅವಾಜ್ ಹಾಕಿದ್ದಾನೆ. ಇದೇ ವೇಳೆ ಅವಾಚ್ಯ ಶಬ್ಧಗಳಿಂದಲೂ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ. ಇದನ್ನು ಓದಿ:  ಪೊಲೀಸರ ಮೇಲಿನ ಹಲ್ಲೆ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬಯಲು

rmg police 2

 

ಈ ಎಲ್ಲ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸ್ ಪೇದೆ ಮತ್ತು ಯುವಕನ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಪುಂಡಾಟ ಮೆರೆದ ಯುವಕನ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಓದಿ: ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸರ ಮೇಲೆ ಕುಡುಕನಿಂದ ಹಲ್ಲೆ!- ವಿಡಿಯೋ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://youtu.be/Jo-g1Dw633M

Share This Article
Leave a Comment

Leave a Reply

Your email address will not be published. Required fields are marked *