ಬೆಳಗಾವಿ: ದೇಶವೇ ಎದುರು ನೋಡುತ್ತಿರೋ ಚಂದ್ರಯಾನ-3ಗೆ (Chandrayaan-3) ಬೆಳಗಾವಿಯ (Belagavi) ಯುವ ವಿಜ್ಞಾನಿ ಕೊಡುಗೆ ನೀಡುವ ಮೂಲಕ ಕುಂದಾನಗರಿ ಬೆಳಗಾವಿ ಜಿಲ್ಲೆಗೆ ಹಿರಿಮೆ ಹೆಚ್ಚಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಅನಗಡಿ ಗ್ರಾಮದ ಪ್ರಕಾಶ ಪಡ್ನೇಕರ್ ಚಂದ್ರಯಾನ-3 ಗಾಗಿ ಶ್ರಮಿಸುತ್ತಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುವ ಕಾರ್ಯಕ್ಕೆ ಬೆಳಗಾವಿ ಯುವ ವಿಜ್ಞಾನಿ ಸಾಥ್ ನೀಡಿದ್ದು, ಕಳೆದ 5 ವರ್ಷಗಳಿಂದ ಶ್ರೀಹರಿಕೋಟಾದಲ್ಲಿ ಯುವ ವಿಜ್ಞಾನಿಯ ಕಸರತ್ತು ನಡೆಸಿದ್ದಾರೆ. ಇದನ್ನೂ ಓದಿ: ಚಂದ್ರಯಾನ -3 ಉಡಾವಣೆಗೆ ಕ್ಷಣಗಣನೆ: ಶುಭಕೋರಿದ ಖಾದರ್
Advertisement
Advertisement
ತಾಂತ್ರಿಕ ದೋಷದಿಂದ ವಿಫಲವಾಗಿದ್ದ ಚಂದ್ರಯಾನ-2 ನಲ್ಲೂ ಪ್ರಕಾಶ ಕೆಲಸ ಮಾಡಿದ್ದರು. ಸದ್ಯ ಚಂದ್ರಯಾನ-3 ಸಕ್ಸಸ್‌ಗಾಗಿ ಯುವ ವಿಜ್ಞಾನಿ ಪ್ರಕಾಶ ಪಡ್ನೇಕರ್ ಶ್ರಮವಹಿಸಿದ್ದು, ಇಂದು ಮಧ್ಯಾಹ್ನ ಶ್ರೀಹರಿಕೋಟಾದಿಂದ ಚಂದ್ರಯಾನ-3 ಉಡಾವಣೆ ಆಗಲಿದೆ.
Advertisement
Advertisement
ಭಾರತದ ಚಂದ್ರಯಾನ-3 ಇಂದು ಮಧ್ಯಾಹ್ನ 2:35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ. ಈ ಮಿಷನ್ ಯಶಸ್ವಿಯಾದರೆ ಚಂದ್ರನ ಮೇಲೆ ಇಳಿದ 4ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ. ಇದನ್ನೂ ಓದಿ: ಇಂದು ಚಂದ್ರಯಾನ-3 ಉಡಾವಣೆ – ನಿಮಗೆ ತಿಳಿದಿರಲೇ ಬೇಕಾದ 10 ಅಂಶಗಳು
Web Stories