ಬೆಳಗಾವಿ: ಕೃಷ್ಣೆಯ ಆರ್ಭಟಕ್ಕೆ ಕೇವಲ ಮನುಷ್ಯ ಸಂಕುಲ ಮಾತ್ರ ನಲುಗಿ ಹೋಗಿಲ್ಲ. ಸಾಕಷ್ಟು ಮೂಕ ಪ್ರಾಣಿಗಳೂ ಕೂಡ ನೆರೆಯಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ಹರಸಾಹಸ ಪಡುತ್ತಿದ್ದು, ಪ್ರವಾಹದಲ್ಲಿ ಸಿಲುಕಿ ಕಂಗಾಲಾಗಿ ಪ್ರಾಣ ಕಳೆದುಕೊಳ್ಳುವ ಭಯದಲ್ಲಿದ್ದ ಮೊಲವೊಂದನ್ನು ಯುವಕರು ರಕ್ಷಿಸಿ ಅಭಯ ನೀಡಿದ್ದಾರೆ.
ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿಯಲ್ಲಿ ಸಿಕ್ಕ ಮೊಲವೊಂದನ್ನು ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ. ಪ್ರವಾಹದಲ್ಲಿ ಸಿಲುಕಿಕೊಂಡ ಮೊಲ ಸಂಪೂರ್ಣವಾಗಿ ಗಾಯಗೊಂಡಿದೆ. ನೀರಿನಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಮೊಲ ಗಾಬರಿಗೊಂಡಿದೆ.
Advertisement
Advertisement
ಮೊಲವನ್ನು ರಕ್ಷಿಸಿದ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯುವಕರು, “ನಾಯಿಯಾಗಲಿ, ಮೊಲಯಾಗಲಿ ನಿಲ್ಲುವುದಕ್ಕೆ ಎಲ್ಲಿಯೂ ಜಾಗ ಇಲ್ಲ. ಏಕೆಂದರೆ ಊರೆಲ್ಲಾ ಸಂಪೂರ್ಣ ಜಲಾವೃತವಾಗಿದೆ. ಎಲ್ಲಿ ಜಾಗ ಇರುತ್ತೋ ಅಲ್ಲಿ ಪ್ರಾಣಿಗಳು ನಿಲ್ಲುತ್ತಿದೆ. ಆದರೆ ಅಲ್ಲಿಯೂ ನೀರು ಬರುತ್ತಿರುವ ಕಾರಣ ಪ್ರಾಣಿಗಳು ಓಡಿ ಹೋಗುತ್ತಿದೆ. ಅದು ಓಡಿ ಹೋಗುತ್ತಿರುವುದನ್ನು ನೋಡಿ ಹಿಡಿದುಕೊಂಡಿದ್ದೇವೆ” ಎಂದರು.
Advertisement
ಬಳಿಕ ಮಾತನಾಡಿದ ಅವರು, ಈ ಮೊಲ ಈಗ ಬದುಕುತ್ತಿರಲಿಲ್ಲ. ಈಗಲೇ ಈ ಮೊಲಕ್ಕೆ ಗಾಯಗಳಾಗಿದೆ. ಈಗ ಈ ಮೊಲಕ್ಕೆ ಚಿಕಿತ್ಸೆ ನೀಡಿ ಸುರಕ್ಷಿತ ಜಾಗಕ್ಕೆ ಕಳುಹಿಸುತ್ತೇವೆ. ಈಗಾಗಲೇ ಸರ್ಕಾರಿ ವೈದ್ಯರು ಬಂದಿದ್ದಾರೆ. ಪಶು ವೈದ್ಯರು ಕೂಡ ಬಂದಿದ್ದಾರೆ. ಮೊಲವನ್ನು ಪಶು ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಯುವಕರು ಹೇಳಿದ್ದಾರೆ.