ಕಾರವಾರ: ಕುವೈತ್‍ನಲ್ಲಿ ಅಪಘಾತದಲ್ಲಿ ಮೃತಪಟ್ಟ ಮಗನ ಮೃತದೇಹ ತರಲು ಹಣವಿಲ್ಲದೆ ಪೋಷಕರು ಪರದಾಡುತ್ತಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ರಾಬಿನ್‍ಸನ್ ರೋಸಿಯೋ ಮೃತಪಟ್ಟ ವ್ಯಕ್ತಿ. ರಾಬಿನ್‍ಸನ್ ಕಡವಾಡದ ಕ್ರಿಶ್ಚಿಯನ್ ವಾಡದ ನಿವಾಸಿಯಾಗಿದ್ದು, ಭಾನುವಾರ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ ರಾಬಿನ್‍ಸನ್ ಮೃತದೇಹವನ್ನು ಕಾರವಾರಕ್ಕೆ ತರಲು ಹಣವಿಲ್ಲದೆ ತೊಂದರೆ ಅನುಭವಿಸುತ್ತಿದ್ದು, ತಮ್ಮ ಪುತ್ರನ ಶವವನ್ನು ತರಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
Advertisement
Advertisement
ಭಾನುವಾರ ಕುವೈತ್‍ನ ದಜೀಜ್ ಪ್ರದೇಶದಲ್ಲಿರುವ ಕುವೈತ್ ಫುಡ್ ಕಂಪನಿಗೆ ಕೆಲಸಕ್ಕೆ ತೆರಳುತ್ತಿರುವಾಗ ಕಿಂಗ್ ಅಬ್ದುಲ್ ಅಜೀಜ್ ರಸ್ತೆಯಲ್ಲಿ ಮೂರು ವಾಹನಗಳು ಪರಸ್ಪರ ಡಿಕ್ಕಿಯಾಗಿತ್ತು. ಈ ವೇಳೆ ರಾಬಿನ್‍ಸನ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬದವರಿಗೆ ತೊಂದರೆಯಾಗಿದೆ. ಸದ್ಯ ಈ ಬಗ್ಗೆ ಅವರು ಜಿಲ್ಲಾಡಳಿತ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರು, ಈಗಾಗಲೇ ರಾಬಿನ್‍ಸನ್ ಅವರ ಸಂಬಂಧಿಕರು ಮನವಿ ಮಾಡಿಕೊಂಡಿದ್ದಾರೆ. ಕುವೈತ್‍ನಲ್ಲಿ ನಮ್ಮ ಸಂಬಂಧಿಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸರ್ಕಾರದ ವತಿಯಿಂದ ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾರೆ. ನಾನು ಈಗಾಗಲೇ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಮೃತದೇಹ ಭಾರತಕ್ಕೆ ಹಸ್ತಾಂತರಿಸಲು ಏನು ಕ್ರಮ ಬೇಕು ಅದಕ್ಕೆ ಸಹಕರಿಸಿ ಎಂದು ಪತ್ರ ಬರೆದಿದ್ದೇನೆ ಎಂದರು.