ಯುವಕನ ಅಂಗಾಂಗ ದಾನ: ಜಿರೋ ಟ್ರಾಫಿಕ್‍ನಲ್ಲಿ ಹೈದರಾಬಾದ್‍ಗೆ ರವಾನೆ

Public TV
2 Min Read
GLB AIRLIFT 3

ಕಲಬುರಗಿ: ಜಿರೋ ಟ್ರಾಫಿಕ್ ಮೂಲಕ ಮೃತ ಯುವಕನ ಅಂಗಾಗವನ್ನು ಕಲಬುರಗಿಯಿಂದ ಹೈದರಾಬಾದ್‍ಗೆ ಕಳಿಸಿ, ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕಳುಹಿಸಲಾಗಿದೆ.

ಇತ್ತೀಚೆಗೆ ಅಂಗಾಗ ದಾನದ ಪರಿಕಲ್ಪನೆ ಹೆಚ್ಚಾಗುತ್ತಿದೆ. ಮೃತ ವ್ಯಕ್ತಿಯ ಕೆಲ ಅಂಗಾಗಗಳನ್ನು ನಿಗದಿತ ಸಮಯದಲ್ಲಿ ತೆಗೆದು, ಬೇರೆಯವರಿಗೆ ಹಾಕಿದರೆ ಅನೇಕರ ಜೀವ ಉಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಂದು ಕಲಬುರಗಿ ನಗರದ ಚಿರಾಯು ಆಸ್ಪತ್ರೆಯ ವೈದ್ಯರು ಕೆಲಸ ಮಾಡಿದ್ದು, ಜಿರೋ ಟ್ರಾಫಿಕ್‍ನಲ್ಲಿ ಮೃತ ಯುವಕನ ಅಂಗಾಗವನ್ನು ಹೈದರಾಬಾದ್‍ಗೆ ಕಳುಹಿಸಿ ಅಲ್ಲಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮೂಲಕ ರವಾನೆ ಮಾಡಲಾಗಿದೆ.ಇದನ್ನೂ ಓದಿ:ಕಾಬೂಲ್‍ನಲ್ಲಿ ಎಟಿಎಂಗಳ ಮುಂದೆ ಜನಸಾಗರ – ಬ್ಯಾಂಕ್ ಸಿಬ್ಬಂದಿಯಿಂದ ಪ್ರತಿಭಟನೆ

GLB AIRLIFT

ಏನಿದು ಘಟನೆ?
ಹತ್ತೊಂಬತ್ತು ವರ್ಷದ ಯುವಕ ಮಹಡಿ ಮೇಲಿಂದ ಕಾಲು ಜಾರಿ ಬಿದ್ದಿದ್ದು, ಆತನನ್ನು ಕಲಬುರಗಿ ನಗರದ ಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡು ದಿನದ ಹಿಂದೆ ಆತನ ಮೆದುಳು ನಿಷ್ಕ್ರಿಯವಾಗಿತ್ತು. ಈ ಬಗ್ಗೆ ವೈದ್ಯರು ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಜೊತೆಗೆ ಅಂಗಾಂಗ ದಾನದ ಬಗ್ಗೆಯೂ ಮಾಹಿತಿ ನೀಡಿದ್ದರು. ವೈದ್ಯರ ಮಾತಿಗೆ ಯುವಕನ ಕುಟುಂಬದವರು ಒಪ್ಪಿಗೆಯನ್ನು ನೀಡಿದ್ದರು. ಹೀಗಾಗಿ ಕಳೆದ ಎರಡು ದಿನಗಳಿಂದ ಅನೇಕ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಯುವಕನ ಮೆದುಳು ನಿಷ್ಕ್ರಿಯವಾಗಿದ್ದನ್ನು ಖಚಿತಪಡಿಸಿಕೊಂಡು, ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿರುವ ರೋಗಿಯೊಬ್ಬರಿಗೆ ಲಿವರ್ ಅವಶ್ಯಕತೆ ಇತ್ತು. ಹೀಗಾಗಿ ಇಂದು ಮುಂಜಾನೆ ಮೃತ ಯುವನಕ ಲಿವರ್‍ನನ್ನು ತೆಗೆದು ಹೈದರಾಬಾದ್‍ಗೆ ಕಳುಹಿಸಲಾಗಿದೆ. ನಂತರ ಹೈದರಾಬಾದ್‍ನಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿದೆ.ಇದನ್ನೂ ಓದಿ:ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಮನೆಯಲ್ಲಿ ಹೇಳಬೇಕು: ಪೂಜಾಗಾಂಧಿ

doctors medium

ಜಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಲಿವರ್ ರವಾನೆ!
ಕಲಬುರಗಿಯಿಂದ ಹೈದರಾಬಾದ್‍ವರಗೆ ಸುಮಾರು 221 ಕಿಲೋಮೀಟರ್‍ವರಗೆ ಕಲಬುರಗಿ ಪೆÇಲೀಸರು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಮುಂದೆ ತೆಲಂಗಾಣ ಪೆÇಲೀಸರಿಗೆ ಮಾಹಿತಿ ನೀಡಿದ್ದು, ಅವರು ಕೂಡಾ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಸಾಮಾನ್ಯವಾಗಿ ಹೈದರಾಬಾದ್ ವಿಮಾನ ನಿಲ್ದಾಣ ಮುಟ್ಟಲು ನಾಲ್ಕು ಗಂಟೆ ಸಮಯಬೇಕು. ಆದರೆ ಜಿರೋ ಟ್ರಾಫಿಕ್‍ನಿಂದಾಗಿ ಕೇವಲ ಎರಡೂವರೆ ಗಂಟೆಯಲ್ಲಿ ಹೈದರಾಬಾದ್‍ಗೆ ತಲುಪಲಾಗಿದೆ.

ಚಿರಾಯು ಆಸ್ಪತ್ರೆ ವೈದ್ಯ ಡಾ.ಮಂಜುನಾಥ್ ಈ ಕುರಿತು ಮಾತನಾಡಿದ್ದು, ಇಂದು ಬೆಂಗಳೂರಿನಿಂದ ಬಂದಿದ್ದ ನುರಿತ ವೈದ್ಯರ ತಂಡ, ಯುವಕನ ಲಿವರ್ ತಗೆದು ಅದನ್ನು ಬೆಂಗಳೂರಿಗೆ ತಗೆದುಕೊಂಡು ಹೋಗಿದ್ದಾರೆ. ಲಿವರ್ ಸಾಗಿಸಲು ಪೆÇಲೀಸರು ಮತ್ತು ರಾಜ್ಯ ಸರ್ಕಾರ ಸಹಾಯ ಮಾಡಿದೆ ಎಂದು ತಿಳಿಸಿದರು.ಇದನ್ನೂ ಓದಿ:ಪೊಲೀಸರಿಗೆ ಒತ್ತಡ ಇದೆ, ಬೆಳಗ್ಗೆಯಿಂದ ರಾತ್ರಿಯವರೆಗೂ ಕೆಲಸ ಮಾಡ್ತಾರೆ: ಸತೀಶ್ ಜಾರಕಿಹೊಳಿ

ಈ ಕುರಿತು ಪ್ರತಿಕ್ರಿಯಿಸಿದ ಯುವಕನ ಪೋಷಕರು, ನಮ್ಮ ಮಗನನ್ನು ಉಳಿಸಿಕೊಳ್ಳಲು ನಾವು ಅನೇಕ ರೀತಿಯ ಪ್ರಯತ್ನಗಳನ್ನು ಮಾಡಿದೆವು. ಆದರೆ ಅದು ಸಾಧ್ಯವಾಗಲಿಲ್ಲ. ಆತನಿಂದ ಬೇರೆಯವರಿಗೆ ಅನುಕೂಲವಾಗಲೆಂದು ಅಂಗಾಂಗ ದಾನ ಮಾಡಿದ್ದೇವೆ ಎಂದು ಭಾವುಕರಾದರು.

Share This Article
Leave a Comment

Leave a Reply

Your email address will not be published. Required fields are marked *